ಉಡುಪಿಯಲ್ಲಿ ಖಾಸಗಿ ಬಸ್ಸುಗಳ ಮಿಂಚಿನ ಮುಷ್ಕರ

Written By:
ಚಾಲಕನೊಬ್ಬನಿಗೆ ಗಂಪೊಂದು ಹಲ್ಲೆಗೊಳಿಸಿರುವ ಘಟನೆಯನ್ನು ಪ್ರತಿಭಟಿಸಿ ಉಡುಪಿಯಲ್ಲಿ ಖಾಸಗಿ ಬಸ್ ಸಂಸ್ಥೆ ಸಿಬ್ಬಂದಿಗಳು ಮಿಂಚಿನ ಮುಷ್ಕರ ನಡೆಸುತ್ತಿದ್ದು, ಮಂಗಳೂರು ನಡುವಣ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಮಂಗಳೂರು ಕಡೆಗೆ ಹೋಗುವ ಖಾಸಗಿ ಎಕ್ಸ್‌ಪ್ರೆಸ್ ಸಿಬ್ಬಂದಿಗಳು ಇಂದು (ಸೋಮವಾರ) ಬೆಳಗ್ಗೆಯಿಂದ ಮಿಂಚಿನ ಮುಷ್ಕರ ಹೂಡುತ್ತಿದ್ದಾರೆ. ಇದರಿಂದಾಗಿ ದೈನಂದಿನ ಯಾತ್ರಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಅತಿಯಾದ ವೇಗ ಚಾಲಕನಿಗೆ ಹಲ್ಲೆಗೆ ಕಾರಣ..?

ಅತಿಯಾದ ವೇಗದಲ್ಲಿ ಚಲಾಯಿಸುತ್ತಿದ್ದ ಕಾರಣಕ್ಕೆ ಚಾಲಕನಿಗೆ ಉಡುಪಿ ಸಮೀಪದ ಉದ್ಯಾನವರದಲ್ಲಿ ಜನರ ಗುಂಪೊಂದು ಬಸ್ಸಿನಿಂದ ಹೊರಗೆಳೆದು ಥಳಿಸಿದ್ದರೆಂಬ ಆರೋಪವಿದೆ. ಘಟನೆ ಸಂಬಂಧ ನಗರದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.

ಮೂಲಗಳ ಪ್ರಕಾರ ಪ್ರತಿಭಟನಾ ನಿರತರಾಗಿದ್ದು ಬಸ್ಸು ಮಾಲಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

Story first published: Monday, June 10, 2013, 12:01 [IST]
Please Wait while comments are loading...

Latest Photos