ಫೋಕ್ಸ್‌ವ್ಯಾಗನ್ ಜೆಟ್ಟಾ ಲಾಂಚ್; ಬೆಲೆ 13.70 ಲಕ್ಷ ರು.

By Nagaraja

ಜಗತ್ತಿನ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ತನ್ನ ತಾಜಾ ವಿನ್ಯಾಸ ಪಡೆದುಕೊಂಡಿರುವ ಜೆಟ್ಟಾ ಸೆಡಾನ್ ಕಾರನ್ನು ಲಾಂಚ್ ಮಾಡಿದೆ. ಇದರ ಬೆಲೆ 13.70 ಲಕ್ಷ ರು.ಗಳಾಗಿವೆ.

ಒಟ್ಟು 3 ವೆರಿಯಂಟ್‌ಗಳಲ್ಲಿ ಜೆಟ್ಟಾ ಲಭ್ಯವಿರಲಿದೆ

  • ಹೈಲೈನ್,
  • ಕಂಫರ್ಟ್‌ಲೈನ್,
  • ಬೇಸ್ ಟ್ರೆಂಡ್‌ಲೈಟ್

ಫೋಕ್ಸ್‌ವ್ಯಾಗನ್ ಜೆಟ್ಟಾ ಅತ್ಯಾಕರ್ಷಕ ಆಧುನಿಕ ಫೀಚರ್‌ಗಳೊಂದಿಗೆ ಆಗಮನವಾಗಿದ್ದು, ಟಾಪ್ ಎಂಡ್ ಮಾಡೆಲ್ 19.43 ಲಕ್ಷ ರು.ಗಳಷ್ಟು ದುಬಾರಿಯಾಗಿರಲಿದೆ.

ಟಾಪ್ ಎಂಡ್ ವೆರಿಯಂಟ್‌ಗಳು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಕ್ಸೆನಾನ್ ಹೆಡ್‌ಲೈಟ್ ಮತ್ತು ಹೆಡ್‌ಲ್ಯಾಂಪ್ ವಾಶರ್‌ಗಳು ಸ್ಟಾಂಡರ್ಡ್ ಆಗಿ ಲಭಿಸಲಿದೆ. ಇನ್ನಿತರ ಎರಡು ವೆರಿಯಂಟ್‌ಗಳು 16 ಇಂಚು ಅಲಾಯ್ ವೀಲ್ ಪಡೆದುಕೊಳ್ಳಲಿದೆ. ಹಾಗಿದ್ದರೂ ಎಲ್ಲ ಮೂರು ವೆರಿಯಂಟ್‌ಗಳಲ್ಲೂ ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇರಲಿದೆ.

ಆದರೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ತರಲಾಗಿಲ್ಲ. ಇದು 1.5 ಲೀಟರ್ ಟಿಎಸ್‌‌ಐ ಮತ್ತು 2.0 ಲೀಟರ್ ಟಿಡಿಐ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು ಅನುಕ್ರಮವಾಗಿ 122 (200 ಟಾರ್ಕ್) ಮತ್ತು 140 (320 ಟಾರ್ಕ್) ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸ್ಟಾಂಡರ್ಡ್ ಆಗಿ ಲಗತ್ತಿಸಲಿರಲಿದೆ.

ಭಾರತ ವಾಹನ ಅಧ್ಯಯನ ಸಂಸ್ಥೆಯಿಂದ (ಎಆರ್‌ಎಐ) ಮಾನ್ಯತೆ ಪಡೆದಿರುವಂತೆಯೇ ನೂತನ ಫೋಕ್ಸ್‌ವ್ಯಾಗನ್ ಜೆಟ್ಟಾ ಪ್ರತಿ ಲೀಟರ್‌ ಪೆಟ್ರೋಲ್‌ಗೆ 14.69 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಡೀಸೆಲ್ ಮ್ಯಾನುವಲ್ ಟ್ರಾನ್ಸ್‌ಮಿಷನ್ 19.3 ಕೀ.ಮೀ. ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ 16.96 ಕೀ.ಮೀ. ಮೈಲೇಜ್ ನೀಡಲಿದೆ.

ಈ ಮೂಲಕ ಈ ಹಬ್ಬದ ಆವೃತ್ತಿಯಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನು ಫೋಕ್ಸ್‌ವ್ಯಾಗನ್ ಹೊಂದಿದೆ.

Most Read Articles

Kannada
English summary
VW has launched the latest version of its Jetta sedan with a starting price of INR 13.70 lakhs. The facelifted Jetta is available in three variants - Highline, Comfortline and base Trendline - and they come with a few notable new features. The highest trim level is available for INR 19.43 lakhs.
Story first published: Thursday, October 31, 2013, 11:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X