ಬಂದಿದೆ ಸೂಪರ್ ನ್ಯಾನೋ - ಬೆಲೆ ಜಸ್ಟ್ 25 ಲಕ್ಷ

Written By:

ವಿಶ್ವದ ಅತಿ ಅಗ್ಗದ ಕಾರು ಯಾವುದು ಎಂಬ ಪ್ರಶ್ನೆಗೆ ಕಣ್ಣು ಮುಚ್ಚಿಯಾದರೂ ಟಾಟಾ ನ್ಯಾನೋ ಎಂದು ಉತ್ತರ ಕೊಡಬಹುದು. ಆದರೆ ಇನ್ನು ಮುಂದೆ ಪರಿಸ್ಥಿತಿ ಬದಲಾಗಲಿದೆ. ಇಲ್ಲಿದೆ ನೋಡಿ ನಾವು ಪರಿಚಯಿಸುತ್ತಿರುವ ಸೂಪರ್ ನ್ಯಾನೋ ಕಾರು. ಇದರ ಬಲೆ ಎಷ್ಟು ಗೊತ್ತೇ? ಹೌದು ಬರೋಬ್ಬರಿ 25 ಲಕ್ಷ ರು.ಗಳಾಗಿರಲಿದೆ.

ಬಹಳ ವರ್ಷಗಳ ಹಿಂದೆ ದೇಶದ ಮಧ್ಯಮ ವರ್ಗದ ಜನರನ್ನು ಗುರಿಯಾಗಿರಿಸಿಕೊಂಡಿದ್ದ ಟಾಟಾ ಮೋಟಾರ್ಸ್ ಸಂಸ್ಥೆಯು ನ್ಯಾನೋ ಅಗ್ಗದ ಕಾರನ್ನು ಬಿಡುಗಡೆಗೊಳಿಸಿತ್ತು. ಇದು ನಗರ ಪ್ರದೇಶದ ಚಾಲನೆಗೆ ಹೆಚ್ಚು ಸೂಕ್ತವೆನಿಸಿತ್ತು.

To Follow DriveSpark On Facebook, Click The Like Button
tata nano

ಇದೀಗ ಕೊಯಂಬತ್ತೂರು ತಳಹದಿಯ ಆಟೋ ಟ್ಯೂನಿಂಗ್ ಸಂಸ್ಥೆ ಜೆಎ ಮೋಟಾರುಸ್ಪೋರ್ಟ್ ಸೂಪರ್ ಟಾಟಾ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಲಿದೆ. ಅಲ್ಲದೆ ಮುಂಬೈನಲ್ಲಿ ನಡೆದ ಆಟೋಕಾರ್ ನಿರ್ವಹನಾ ಶೋದಲ್ಲಿ ಸೂಪರ್ ನ್ಯಾನೋ ಕಾರನ್ನು ಪ್ರದರ್ಶನಗೊಳಿಸಲಾಗಿದೆ.

ನ್ಯಾನೋ ಕಾನ್ಸೆಪ್ಟ್ ಆಧಾರವಾಗಿಟ್ಟುಕೊಂಡು ಸೂಪರ್ ನ್ಯಾನೋ ತಯಾರಿಸಲಾಗಿದೆ. ಇದು ಸಂಪೂರ್ಣ ಪರಿಷ್ಕೃತ ವಿನ್ಯಾಸ ಪಡೆದುಕೊಂಡಿದೆ. ಇದು ಮೊನಚಾದ ಚಕ್ರದಿಂದ ಹಿಡಿದು ಹೆಡ್ ಲ್ಯಾಂಪ್, ಟೈಲ್‌ ಲ್ಯಾಂಪ್ ಸಂಪೂರ್ಣ ಬಾಡಿ ಕಿಟ್ ಹೊಸದನ್ನು ಪಡೆದುಕೊಂಡಿದೆ. ಇನ್ನು ಕಾರಿನೊಳಗಿನ ಡ್ಯಾ‌ಶ್‌ಬೋರ್ಡ್ , ರಿಕಾರೊ ಸೀಟ್ ಹಾಗೂ ಸ್ಟೀರಿಂಗ್‌ನಲ್ಲಿ ಕಾರ್ಬನ್ ಫೈಬರ್ ಸ್ಪರ್ಶವನ್ನು ನೋಡಬಹುದು.

ಆದರೆ ಇಲ್ಲಿನ ಗಮನಾರ್ಹ ಅಂಶವೆಂದರೆ ಇದರ 1.3 ಲೀಟರ್ ಎಂಜಿನ್ ಗರಿಷ್ಠ 230 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಗಂಟೆಗೆ 190 ಕೀ.ಮೀ. ವೇಗದಲ್ಲಿ ಚಲಿಸಲು ನೆರವಾಗಲಿದೆ. ಹಾಗೆಯೇ ಎಪಿ ರೇಸಿಂಗ್ ಡಿಸ್ಕ್ ಬ್ರೇಕ್ ಸಹ ಪಡೆದುಕೊಳ್ಳಲಿದೆ.

ಒಟ್ಟಿನಲ್ಲಿ ಇದು ದೇಶದ ಅತ್ಯಂತ ವೇಗದ ಹ್ಯಾಚ್‌ಬ್ಯಾಕ್ ಕಾರೆನಿಸಿಕೊಳ್ಳಲಿದೆ. ಅಷ್ಟೇ ಯಾಕೆ ನಿಮ್ಮ ನ್ಯಾನೋ ಬದಲಾಯಿಸಿಕೊಡುವುದಕ್ಕೂ ಜೆಎ ಸಂಸ್ಥೆಗೆ ಯಾವುದೇ ಅಭ್ಯಂತರವಿರುವುದಿಲ್ಲ.

English summary
Coimbatore based engineers team have used a standard Tata Nano to create one of the hottest track-bred hatchbacks possible.The 230bhp Super Tata Nano is currently on display at the ongoing Autocar Performance Show 2014 in Mumbai.
Story first published: Monday, December 15, 2014, 12:28 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark