250 ರು.ಗಳಿಗೆ ಬೆಂಗ್ಳೂರಿನ 23 ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ..!

By Nagaraja

ಹೌದು, ಇದೀಗ ಬೆಂಗಳೂರು ನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುವುದು ಇನ್ನು ಸುಲಭ. ಹೇಗೆ ಅಂತೀರಾ? ದೇಶದಲ್ಲೇ ನಗರ ಸಾರಿಗೆ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನೂತನ ಹಾಪ್-ಆನ್ ಹಾಪ್-ಆಪ್ ಎಂಬ ನೂತನ ಸೇವೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಇದರಿಂದ ಪ್ರವಾಸಿಗರು ಬೆಂಗಳೂರಿನ ಪ್ರವಾಸ ಸ್ಥಳಗಳನ್ನು ವೀಕ್ಷಿಸಲು ತ್ವರಿತ, ಸರಳ ಹಾಗೂ ಹೆಚ್ಚು ಅನುಕೂರಕರವಾದ ಬೇಸ್ ಸೇವೆಯನ್ನು ಪಡೆಯಲಿದ್ದಾರೆ.

ಟಿಕೆಟ್ ದರ

  • ಹಿರಿಯರಿಗೆ 250 ರು.
  • ಮಕ್ಕಳಿಗೆ 150 ರು.

ವಿಶ್ವದ ಕೆಲವು ಪ್ರಸಿದ್ಧ ನಗರಗಳಲ್ಲಿರುವ ನರಗ ದರ್ಶನ ಸಾರಿಗೆ ಸೇವೆ ಮಾದರಿಯಂತೆ ಹಾಪ್-ಆನ್ ಹಾಪ್-ಆಪ್ ಸೇವೆಯು ವಿನ್ಯಾಸಗೊಂಡಿದ್ದು, ಬೆಂಗಲಳೂರಿಗೆ ಬರುವ ಪ್ರಸಾಸಿಗರು ಹಾಗೂ ಬೆಂಗಳೂರಿನ ನಿವಾಸಿಗಳಿಗೆ ವಿಶ್ವದ ಅತಿ ಪ್ರಭಾಯುತವಾಗಿ ಬೆಳವಣಿಗೆಯಾಗುತ್ತಿರುವ ಮಹಾನಗರಗಳಲ್ಲೊಂದಾದ ಬೆಂಗಳೂರಿನ ವೈಭವಯುತ ಗತಕಾಲ ಹಾಗೂ ಅತ್ಯಾಕರ್ಷಕ ವರ್ತಮಾನ ಕಾಲದ ಇಣುಕು ನೋಟವನ್ನು ಒದಗಿಸಲಿದೆ.

ವಿ.ಸೂ: ಕೆಳಗಡೆ ಸಾಂದರ್ಭಿಕ ಚಿತ್ರಗಳ ಬಳಕೆ

ಬೆಂಗಳೂರು ರೌಂಡ್ಸ್: ಬಿಎಂಟಿಸಿ ಹಾಪ್-ಆನ್ ಹಾಪ್-ಆಫ್ ಬಸ್ ಸೇವೆ

ಹವಾ ನಿಯಂತ್ರಿತ ವೋಲ್ವೋ ಬಸ್ಸುಗಳು ಈ ಮಾರ್ಗಗಳಲ್ಲಿ ಆಚರಣೆಯಾಗಲಿದ್ದು, ಬಸ್ಸುಗಳಲ್ಲಿ ಉತ್ತಮ ತರಬೇತಿ ಹೊಂದಿದ ಮತ್ತು ವಿನಯಶೀಲ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವವರು.

ಬೆಂಗಳೂರು ರೌಂಡ್ಸ್: ಬಿಎಂಟಿಸಿ ಹಾಪ್-ಆನ್ ಹಾಪ್-ಆಫ್ ಬಸ್ ಸೇವೆ

ಈ ಸೇವೆಯು ವಾರದ ಎಲ್ಲ ದಿಗಳಲ್ಲೂ ಬೆಳಗ್ಗೆ 8.30ರಿಂದ ರಾತ್ರಿ 10.00 ಗಂಟೆಯ ವರೆಗೆ ಕಾರ್ಯ ನಿರ್ವಹಿಸಲಿದ್ದು, ನಗರದ ಐತಿಹಾಸಿಕ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವುಳ್ಳ 20 ಪ್ರಸಿದ್ಧ ಸ್ಥಳಗಳ ದರ್ಶನವನ್ನು ಪ್ರಯಾಣಿಕರು ಈ ಮಾರ್ಗದಲ್ಲಿ ಪಡೆಯುತ್ತಾರೆ.

ಬೆಂಗಳೂರು ರೌಂಡ್ಸ್: ಬಿಎಂಟಿಸಿ ಹಾಪ್-ಆನ್ ಹಾಪ್-ಆಫ್ ಬಸ್ ಸೇವೆ

ರೌಂಡ್ ಟ್ರಿಪ್ ಟಿಕೆಟ್‌ನಲ್ಲಿ ಸ್ಥಳಗಳ ಮಧ್ಯೆ ಅನಿಯಮಿತ ಸಂಚಾರದ ಅವಕಾಶವಿರುವುದರಿಂದ ಪ್ರಯಾಣಿಕರಿಗೆ ಸ್ಥಳಗಳ ಮತ್ತು ಸಮಯದ ಆಯ್ಕೆಯನ್ನು ಮಾಡಿಕೊಳ್ಳುವ ಅನುಕೂಲವಿರುತ್ತದೆ. ಈ ಸೇವೆಯು ಹೆಚ್ಚು ದುಬಾರಿಯಲ್ಲದ ಕೇವಲ ರು. 250 ಪ್ರತಿ ಪ್ರಯಾಣ ದರವಾಗಿದ್ದು, ಪ್ರಯಾಣದ ದಿನವಿಡಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯು ವಜ್ರ ಹೊರತು ಪಡಿಸಿ ಬಿಎಂಟಿಸಿಯ ಇನ್ನಾವುದೇ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರಿಂದ ಪ್ರಯಾಣಿಕರು ಹೆಚ್ಚುವರಿ ವೆಚ್ಚವಿಲ್ಲದೆ ನಗರದ ಎಲ್ಲ ಭಾಗಗಳಿಗೆ ಸಂಚರಿಸಬಹುದಾಗಿದೆ.

ಬೆಂಗಳೂರು ರೌಂಡ್ಸ್: ಬಿಎಂಟಿಸಿ ಹಾಪ್-ಆನ್ ಹಾಪ್-ಆಫ್ ಬಸ್ ಸೇವೆ

ಇದು ನಿಜವಾಗಿಯೂ ನಮ್ಮ ಪ್ರಸಿದ್ಧ ನಗರವನ್ನು ಅನ್ವೇಷಿಸಲು ಒಂದು ಆರಾಮದಾಯಕ ಹಾಗೂ ಅನುಕೂಲಕರ ಅದ್ಭುತ ಸಂಚಾರದ ಆಯ್ಕೆಯಾಗುತ್ತದೆ. ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆಗಳಲ್ಲಿ ಮಾರ್ಗ ಮಧ್ಯದ ಯಾವುದೇ ಸ್ಥಳದಿಂದ ಯಾವುದೇ ಸ್ಥಳಕ್ಕೆ ಬೇಕಾದರೂ ಅನ್ವಯಿಸುವ ದರದ ಟಿಕೆಟ್ ಪಡೆದು ಪಯಣಿಸಬಹುದು.

ಪ್ರೇಕ್ಷಣೀಯ ಸ್ಥಳಗಳು

ಪ್ರೇಕ್ಷಣೀಯ ಸ್ಥಳಗಳು

1. ಕೆಂಪೇಗೌಡ ಬಸ್ ನಿಲ್ದಾಣ/ಮೆಜೆಸ್ಟಿಕ್

2. ಟಿಪ್ಪು ಸುಲ್ತಾನ್ ಅರಮನೆ

3. ದೊಡ್ಡ ಬಸವನಗುಡಿ ದೇವಸ್ಥಾನ

4. ಗವಿಗಂಗಾಧರೇಶ್ವರ ದೇವಸ್ಥಾನ

5. ಲಾಲ್‌ಬಾಗ್

6. ಸ್ವಾತಂತ್ರ್ಯ ಉದ್ಯಾನವನ

7. ನೆಹರು ತಾರಾಲಯ

8. ವಿಧಾನಸೌಧ

9. ಕಬನ್ ಉದ್ಯಾನವನ/ಬಾಲಭವನ/ವಸ್ತು ಸಂಗ್ರಹಾಲಯ ಮತ್ತು ಆರ್ಟ್ ಗ್ಯಾಲರಿ/ಯ್ರುಬಿ.ಸಿಟಿ

10. ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ

ಪ್ರೇಕ್ಷಣೀಯ ಸ್ಥಳಗಳು

ಪ್ರೇಕ್ಷಣೀಯ ಸ್ಥಳಗಳು

11. ಗರುಡ ಮಾಲ್

12. ಗುರುದ್ವಾರ (ಅಲಸೂರು)

13. ಅಲಸೂರು ಕೆರೆ

14. ಕಮರ್ಷಿಯಲ್ ಸ್ಟ್ರೀಟ್

15. ಸಂತ ಮೇರಿ ಬ್ಯಸಿಲಿಕಾ ದೇವಾಲಯ

16. ಫನ್ ವಲ್ಡ್/ಹಿಮನಗರ

17. ಲುಂಬಿನಿ ಉದ್ಯಾನವನ

18. ಇಸ್ಕಾನ್ ದೇವಾಲಯ

19. ಓರಿಯನ್ ಮಾಲ್

10. ಸ್ಯಾಂಕಿ ಟ್ಯಾಂಕ್

21. ಮಂತ್ರಿ ಮಾಲ್

ಹತ್ತುವ ಮತ್ತು ಇಳಿಯುವ ಸ್ಥಳಗಳು

ಹತ್ತುವ ಮತ್ತು ಇಳಿಯುವ ಸ್ಥಳಗಳು

1. ಕಾರ್ಪೋರೇಷನ್

2. ವಸಂತ ನಗರ

3. ಮೇಕ್ರಿ ಸರ್ಕಲ್

4. ಹೆಬ್ಬಾಳ

5. ಸದಾಶಿವ ನಗರ

6. ಯಶವಂತಪುರ

7. ಮಲ್ಲೇಶರಂ 18ನೇ ಕ್ರಾಸ್

Most Read Articles

Kannada
English summary
BMTC has embarked on many initiatives with innovative services. The ‘Hop-On, Hop-Off‘ service is yet another innovative idea implemented by BMTC, a convenient service to empower tourists and enable quick and comprehensive tour of Bangalore city.
Story first published: Saturday, May 31, 2014, 15:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X