ವಿಮಾನ ದುರಂತಕ್ಕೆ ಎಫ್1 ಪ್ರಾಯೋಜಕ ಟೋಟಲ್ ಸಿಇಒ ಬಲಿ

Written By:

ರಷ್ಯಾದ ಮಾಸ್ಕೋದಲ್ಲಿ ನಡೆದ ವಿಮಾನ ದುರಂತವೊಂದರಲ್ಲಿ ಫ್ರಾನ್ಸ್‌ನ ತೈಲ ಸಂಸ್ಥೆ ಟೋಟಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ಟೊಫೆ ಡೆ ಮಾರ್ಗೆರಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮಾಸ್ಕೋದ ನುಕೊವೊ ವಿಮಾನ ನಿಲ್ದಾಣದಲ್ಲಿ ಫ್ರಾನ್ಸ್‌ ಮೂಲದ ಫಾಲ್ಕನ್ 50 ವಿಮಾನ ಹಿಮದ ಬಂಡೆಗೆ ಢಿಕ್ಕಿಯಾದ ಬೆನ್ನಲ್ಲೇ ಬೆಂಕಿ ಹೊತ್ತಿಕೊಂಡಿದ್ದರಿಂದ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 53ರ ಹರೆಯದ ಕ್ರಿಸ್ಟೊಫೆ ಮತ್ತು ಮೂವರು ಸಿಬ್ಬಂದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಎಫ್1 ಪ್ರಾಯೋಜಕತ್ವ ಹೇಗೆ?

ಯುರೋಪ್‌ನ ಮೂರನೇ ಅತಿ ದೊಡ್ಡ ತೈಲ ಸಂಸ್ಥೆಯಾಗಿರುವ ಟೋಟಲ್ ಗ್ರೂಪ್ 2007ನೇ ಇಸವಿಯಿಂದಲೇ ರೆನೊ ನಿಯಂತ್ರಿತ ರೆಡ್ ಬುಲ್ ಹಾಗೂ ಲೋಟಸ್ ಎಫ್1 ತಂಡಗಳಿಗೆ ಪ್ರಾಯೋಜಕತ್ವ ವಹಿಸಿಕೊಂಡು ಬಂದಿದೆ.

ನಿಮಗಿದು ಗೊತ್ತೇ?

ಸಿಂಥೆಟಿಕ್ ರೇಸಿಂಗ್ ತೈಲ ಉತ್ಪಾದಿಸುವುದರಲ್ಲಿ ಅಗ್ರಮಾನ್ಯ ಸಂಸ್ಥೆಯಾಗಿರುವ ಟೋಟಲ್, ಎಲ್ಪ್ ಲ್ಯೂಬ್ರಿಕಂಟ್ ಮೂಲಕ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು.

ಟೋಟಲ್ ಹಾಗೂ ಎಲ್ಪ್ ಮೋಟಾರು ಕ್ರೀಡೆಯ ಉತ್ತೇಜನಕ್ಕೆ ನಿರಂತರವಾಗಿ ಪ್ರಾಯೋಜಕತ್ವ ವಹಿಸುತ್ತಲೇ ಬಂದಿದೆ.

f1

ನೈಜ ವ್ಯಕ್ತಿತ್ವ

ನೈಜ ವ್ಯಕ್ತಿತ್ವದಿಂದಲೇ ಹೆಚ್ಚು ಜನ ಮನ್ನಣೆ ಪಡೆದುಕೊಂಡಿದ್ದ ಕ್ರಿಸ್ಟೊಫೆ ಟೋಟಲ್ ಸಂಸ್ಥೆಯ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧಾನವು ಸಂಸ್ಥೆಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

Read in English: F1 Loses Yet Another Life
English summary
The chief executive of the French oil company Total, Christophe de Margerie (6 August 1951 – 20 October 2014), died in a plane crash at the Vnukovo airport in Moscow.
Story first published: Thursday, October 23, 2014, 15:15 [IST]
Please Wait while comments are loading...

Latest Photos