ಚಿಂತೆ ಬಿಡಿ ದಟ್ಸನ್ ಗೊ ಆಫರ್‌ನಲ್ಲಿ ಪಡೆಯಿರಿ

By Nagaraja

ಇತ್ತೀಚೆಗೆ ಯುರೋ ಎನ್‌ಸಿಎಪಿ ನಡೆಸಿರುವ ಕ್ರಾಶ್ ಟೆಸ್ಟ್‌ನಲ್ಲಿ ಶೂನ್ಯ ಅಂಕ ಸಂಪಾದಿಸುವ ಮೂಲಕ ಭಾರಿ ಮುಜುಗರಕ್ಕೆ ಪಾತ್ರವಾಗಿರುವ ದಟ್ಸನ್ ಗೊ ಸಣ್ಣ ಕಾರಿನ ಸುರಕ್ಷತಾ ಮಾನದಂಡಗಳ ಬಗ್ಗೆ ಭಾರಿ ಆತಂಕ ಸೃಷ್ಟಿಯಾಗಿತ್ತು.

ಈ ನಡುವೆ ಸ್ಪಷ್ಟನೆ ಕೊಟ್ಟಿದ್ದ ನಿಸ್ಸಾನ್ ಅಧಿಕಾರಿಗಳು, ದಟ್ಸನ್ ಗೊ ಸುರಕ್ಷಿತ ಎಂದು ಸಮರ್ಥಿಸಿಕೊಂಡಿದ್ದರು. ಈ ಎಲ್ಲದರ ನಡುವೆ ವರ್ಷಾಂತ್ಯದ ಈ ಅವಧಿಯಲ್ಲಿ ದಟ್ಸನ್ ಗೊ ಮಾದರಿಗೆ ಭಾರಿ ರಿಯಾಯಿತಿಯನ್ನು ನಿಸ್ಸಾನ್ ಘೋಷಿಸಿದೆ.

datsun go

ನಿಸ್ಸಾನ್‌ನ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್ ವರ್ಷಾರಂಭದಲ್ಲಿ ಗೊ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡಿತ್ತು. ಆದರೆ ಮಾರುತಿಯ ಜನಪ್ರಿಯ ಮಾದರಿಗಳ ವಿರುದ್ಧ ತನ್ನ ಅಸ್ತಿತ್ವ ಕಾಪಾಡಲು ಪರದಾಡುತ್ತಿದೆ.

ಇದೀಗ ದಟ್ಸನ್ ಗೊ ಕಾರಿಗೆ 30,000 ರು.ಗಳ ವರೆಗೆ ಡಿಸ್ಕೌಂಟ್ ನೀಡುವ ಮೂಲಕ ಮಾರಾಟಕ್ಕೆ ಉತ್ತೇಜನ ನೀಡುವ ಪ್ರಯತ್ನದಲ್ಲಿದೆ. 2014 ಡಿಸೆಂಬರ್ 31ರ ವರೆಗೆ ಮಾತ್ರ ಲಭ್ಯವಿರುವ ಈ ಆಫರ್‌ನಲ್ಲಿ 15,000 ರು.ಗಳ ಎಕ್ಸ್‌ಚೇಂಜ್ ಆಫರ್ ಮತ್ತು 15,000 ರು.ಗಳ ಹಚ್ಚುವರಿ ಪ್ರಯೋಜನ ಲಭ್ಯವಿರಲಿದೆ.

ದಟ್ಸನ್ ಗೊ ಎಲ್ಲ ಮೂರು (ಡಿ, ಡಿ1 ಮತ್ತು ಎ) ವೆರಿಯಂಟ್‌ಗಳಿಗೆ ಆಫರ್ ಅನ್ವಯವಾಗಲಿದೆ. ಇದರ ನವದೆಹಲಿ ಎಕ್ಸ್ ಶೋ ರೂಂ ಬೆಲೆ 3.12 ಲಕ್ಷ ರು.ಗಳಿಂದ 3.79 ಲಕ್ಷ ರು.ಗಳ ವರೆಗಿದೆ. ಅಲ್ಲದೆ 1.2 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಇದು 67 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 104 ಎನ್‌ಎಂ ಟಾರ್ಕ್ ನೀಡಲಿದೆ. ಹಾಗೆಯೇ ಪ್ರತಿ ಲೀಟರ್‌ಗೆ 20.63 ಕೀ.ಮೀ. ಮೈಲೇಜ್ ನೀಡುವಲ್ಲಿ ಸಕ್ಷಮವಾಗಿರಲಿದೆ.

Most Read Articles

Kannada
English summary
Nissan had brought to India its affordable car in the form of Datsun Go hatchback. They will soon be launching their first MPV for India. The Japanese manufacturer is said to have christened its vehicle as the Go+.
Story first published: Tuesday, December 9, 2014, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X