ಹಬ್ಬದ ಆವೃತ್ತಿಗೆ ರಿಂಗಣಿಸಿದ ದಟ್ಸನ್ ಗೊ ಕೊಡುಗೆ

Written By:

ಪ್ರಸಕ್ತ ಸಾಲಿನಲ್ಲಷ್ಟೇ ಗೊ ಹ್ಯಾಚ್‌ಬ್ಯಾಕ್ ಸಣ್ಣ ಕಾರಿನ ಮೂಲಕ ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ನಿಸ್ಸಾನ್ ಅಧೀನತೆಯಲ್ಲಿರುವ ದಟ್ಸನ್ ಇಂಡಿಯಾ, ಮುಂಬರುವ ಹಬ್ಬದ ಆವೃತ್ತಿ ಇನ್ನೇನು ಆರಂಭವಾಗಲಿರುವಂತೆಯೇ ಹೊಸ ಹೊಸ ಆಫರುಗಳೊಂದಿಗೆ ರಿಂಗಣಿಸಿದೆ.

ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಖರೀದಿಯಲ್ಲಿ ಗ್ರಾಹಕರು ರು. 38,000 ವರೆಗೂ ಉಳಿತಾಯ ಮಾಡಬಹುದಾಗಿದೆ ಎಂದು ದಟ್ಸನ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಅಷ್ಟಕ್ಕೂ ಪ್ರಯೋಜನಗಳೇನು? ಇಲ್ಲಿದೆ ನೋಡಿ

Datsun Go
  • ಎಕ್ಸ್‌ಚೇಂಜ್ ಬೋನಸ್ 20,000 ರು. ವರೆಗೆ
  • ಉಚಿತ ವಿಸ್ತರಿತ ವಾರಂಟಿ ಮೌಲ್ಯ ರು. 4,000
  • 4,000 ರು.ಗಳ ವಿಮಾ ಬೆಂಬಲ
  • ಹೆಚ್ಚುವರಿ 10,000 ರು. ಕಡಿತ (ಡಿ, ಡಿ1 ಮತ್ತು ಎ ಗ್ರೇಡ್)
  • ಒಟ್ಟು 38,000 ರು. ವರೆಗೂ ಉಳಿತಾಯ

ಮೇಲೆ ತಿಳಿಸಿದ ಆಫರುಗಳು 2014 ಅಕ್ಟೋಬರ್ 31ರ ವರೆಗೆ ಚಾಲ್ತಿಯಲ್ಲಿರಲಿದ್ದು, ಈ ಹಿನ್ನಲೆಯಲ್ಲಿ ಗ್ರಾಹಕರು ಆದಷ್ಟು ಬೇಗನೇ ಇದರ ಪ್ರಯೋಜನ ಗಿಟ್ಟಿಸಿಕೊಳ್ಳಲು ವಿನಂತಿಸಿಕೊಳ್ಳಲಿದೆ. (ದಟ್ಸನ್ ಗೊ ಟೆಸ್ಟ್ ಡ್ರೈವ್ ರಿಪೋರ್ಟ್ ಓದಿರಿ)

English summary
Datsun India kicks-off the celebrations this festive season with the announcement of a host of benefits for its customers. The brand has announcedspecial offers totaling up to INR 38,000 for the customers of Datsun GO hatchback.
Story first published: Thursday, September 11, 2014, 17:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark