ಮುಂದಿನ ವರ್ಷ ದೇಶದ ಚೊಚ್ಚಲ ಕ್ರೀಡಾ ಕಾರು ಬಿಡುಗಡೆ

Written By:

ಭಾರತದ ಮೊಟ್ಟ ಮೊದಲ ಸ್ಪೋರ್ಟ್ಸ್ ಕಾರಾಗಿರುವ ಡಿಸಿ ಅವಂತಿ ಮುಂದಿನ ವರ್ಷ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ದಿನಾಂಕವನ್ನು ಸಂಸ್ಥೆಯು ಇನ್ನಷ್ಟೇ ಘೋಷಿಸಬೇಕಾಗಿದೆ.

ಪುಣೆ ಮೂಲದ ಪ್ರಖ್ಯಾತ ವಾಹನ ಕಸ್ಟಮೈಸ್ ಸಂಸ್ಥೆಯಾಗಿರುವ ಡಿಸಿ ಡಿಸೈನ್ ಕನಸಿನ ಕೂಸಾಗಿರುವ ಅವಂತಿ ಕ್ರೀಡಾ ಕಾರು, ದೇಶದ ಚೊಚ್ಚಲ ಸ್ಪೋರ್ಟ್ಸ್ ಕಾರೆಂಬ ಗೌರವಕ್ಕೆ ಪಾತ್ರವಾಗಿದೆ.

To Follow DriveSpark On Facebook, Click The Like Button
dc avanti

ಅಷ್ಟೇ ಯಾಕೆ ವಿದೇಶಿ ಸ್ಪೋರ್ಟ್ಸ್ ಕಾರುಗಳನ್ನು ಹೋಲಿಸಿದಾಗ ಅವಂತಿ ಅಗ್ಗದ ದರದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿರುವ ಕ್ರೀಡಾ ಕಾರು ಎಂಬ ಗೌರವಕ್ಕೂ ಪಾತ್ರವಾಗಲಿದೆ. ಇದು ಅಂದಾಜು 30ರಿಂದ 35 ಲಕ್ಷ ರು.ಗಳಲ್ಲಿ ಲಭ್ಯವಾಗಲಿದೆ.

ಈಗಾಗಲೇ 500ರಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಅವಂತಿಗಾಗಿ ಒಂದು ವರ್ಷದಷ್ಟು ಕಾಯುವಿಕೆ ಅವಧಿ ಇದೆ ಎಂಬುದು ತಿಳಿದು ಬಂದಿದೆ. ವರ್ಷಕ್ಕೆ 200 ಸೇರಿದಂತೆ ಒಟ್ಟಾರೆ 2000 ಯುನಿಟ್ ನಿರ್ಮಿಸುವುದು ಸಂಸ್ಥೆಯ ಇರಾದೆಯಾಗಿದೆ.

ಎರಡು ಬಾಗಿಲುಗಳ ಕೂಪೆ ದೇಹ ಶೈಲಿಯನ್ನು ಹೊಂದಿರುವ ಅವಂತಿ ಕ್ರೀಡಾ ಕಾರನ್ನು ಡಿಸಿ ಡಿಸೈನ್ ಸೂತ್ರಧಾರಿ ದಿಲೀಪ್ ಛಾಬ್ರಿಯಾ ಮುಂದಾಳತ್ವದಲ್ಲಿ ಸಂಪೂರ್ಣವಾಗಿ ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಮಿಡ್ ಎಂಜಿನ್ ಹಾಗೂ ರಿಯರ್ ವೀಲ್ ಡ್ರೈವ್ ತಂತ್ರಗಾರಿಕೆಯನ್ನು ಹೊಂದಿರುತ್ತದೆ.

ಇದರಲ್ಲಿ 2.0 ಲೀಟರ್ ಇಕೊಬೂಸ್ಟ್ ಎಂಜಿನ್ ಆಳವಡಿಸಲಾಗಿದ್ದು, 261 ಅಶ್ವಶಕ್ತಿ ಉತ್ಪಾದಿಸಲಿದೆ. 2012 ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿರುವ ಅವಂತಿ 6 ಸ್ಪೀಡ್ ಮ್ಯಾನುವಲ್ ಎಂಎಂಟಿ6 ಟ್ರಾನ್ಸ್‌ಮಿಷನ್ ಸಹ ಪಡೆದುಕೊಂಡಿದೆ.

ಇನ್ನು ಪುಣೆ ಮೂಲದ ಸಂಸ್ಥೆಯ ಪ್ರಕಾರ ಅವಂತಿ ಸ್ಪೋರ್ಟ್ಸ್ ಕಾರು ಏಳು ಸೆಕೆಂಡುಗಳಲ್ಲಿ ಗಂಟೆಗೆ 62 ಮೈಲ್ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

English summary
DC Design company is planning to launch Avanti sports car by early next year.
Story first published: Saturday, December 6, 2014, 16:08 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark