ಫಿಯೆಟ್ ಅವೆಂಚ್ಯುರಾ ಅಕ್ಟೋಬರ್‌ನಲ್ಲಿ ಬಿಡುಗಡೆ ಸಾಧ್ಯತೆ

Written By:

ಈಗಾಗಲೇ ಪುಂಟೊ ಇವೊ ಆವೃತ್ತಿಯನ್ನು ಪರಿಚಯಿಸಿರು ಇಟಲಿ ಮೂಲದ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್ ಸದ್ಯದಲ್ಲೇ ಮಗದೊಂದು ಅತ್ಯಾಕರ್ಷಕ ಮಾದರಿಯನ್ನು ದೇಶಕ್ಕೆ ಪರಿಚಯಿಸಲಿದೆ.

ವರದಿಗಳ ಪ್ರಕಾರ ಫಿಯೆಟ್ ಅವೆಂಚ್ಯುರಾ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಕ್ರಾಸೋವರ್ ವಿನ್ಯಾಸ ಹೊಂದಿರುವ ಈ ಕ್ರೀಡಾ ಬಳಕೆಯ ವಾಹನಕ್ಕೆ (ಎಸ್‌ಯುವಿ) ದೇಶದಲ್ಲಿ ಉತ್ತಮ ಪ್ರತ್ರಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ.

To Follow DriveSpark On Facebook, Click The Like Button
Fiat Avventura

ದೇಶದ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಫಿಯೆಟ್ ಸ್ಮರ್ಧಾತ್ಮಕ ದರ ಕಾಯ್ದುಕೊಳ್ಳಬೇಕಾಗಿರುವುದು ಅತಿ ಅಗತ್ಯವೆನಿಸುತ್ತದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲೂ ತನ್ನ ಬಹುನಿರೀಕ್ಷಿತ ಅವೆಂಚ್ಯುರಾ ಮಾದರಿಯನ್ನು ಪ್ರದರ್ಶಿಸಿದ್ದ ಫಿಯೆಟ್, ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ಬಿಡುಗೆ ಮಾಡಲಿದೆ.

ಇದು 1.4 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಮಾದರಿಗಳಲ್ಲಿ ಲಭ್ಯವಾಗಲಿದೆ. ಇದು ಪ್ರಮುಖವಾಗಿಯೂ ಟೊಯೆಟಾ ಎಟಿಯೋಸ್ ಕ್ರಾಸ್ ಮತ್ತು ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ 5.50 ಲಕ್ಷ ರು.ಗಳ (ದೆಹಲಿ ಎಕ್ಸ್ ಶೋ ರೂಂ) ಅಸುಪಾಸಿನಲ್ಲಿ ಬಿಡುಗಡೆಯಾಗಲಿದೆ. ವಾಹನೋದ್ಯಮದ ಕ್ಷಣಕ್ಷಣದ ಮಾಹಿತಿಗಳಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

English summary
Fiat India has just launched their Punto Evo at an attractive price. Now the attention turns to its earlier compact SUV, which looks more like a crossover compared to its recently launched hatchback. We are talking about the Avventura, which the Italian manufacturer showcased at the 2014 Auto Expo held in New Delhi.
Story first published: Wednesday, August 13, 2014, 14:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark