ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ಲಾಂಚ್; ಬೆಲೆ?

By Nagaraja

ಒಂದೆಡೆ ಆಟೋಮ್ಯಾಟಿಕ್ ವೆರಿಯಂಟ್ ಭಾರಿ ಮಾರಾಟ ಗಿಟ್ಟಿಸಿಕೊಳ್ಳುತ್ತಿರುವಂತೆಯೇ ದೇಶದ ಅತಿ ದೊಡ್ಡ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಸೆಲೆರಿಯೊ ಆವೃತ್ತಿಯ ಸಿಎನ್‌ಜಿ ವೆರಿಯಂಟ್ ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 4.68 ಲಕ್ಷ ರು.ಗಳಾಗಿರಲಿದೆ.

ವಿಎಕ್ಸ್‌ಐ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಾಗಲಿರುವ ಹೊಸ ಹ್ಯಾಚ್‌ಬ್ಯಾಕ್ ಆವೃತ್ತಿಯು 'ಮಾರುತಿ ಸೆಲೆರಿಯೊ ಗ್ರೀನ್' ಎಂದರಿಯಲ್ಪಡಲಿದೆ. ಇದು ಸಿಎನ್‌ಜಿ ಕಿಟ್ ಜತೆ ಲಭ್ಯವಾಗಲಿದೆ. ನೂತನ ಸೆಲೆರಿಯೊ ಸಿಎನ್‌ಜಿ ವೆರಿಯಂಟ್, 1.0 ಲೀಟರ್ ಕೆನೆಕ್ಸ್ಟ್ 68 ಅಶ್ವಶಕ್ತಿ ಉತ್ಪಾದಿಸುವ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ. ಇದರ ಸಿಎನ್‌ಜಿ ಮೋಡ್ 58 ಅಶ್ವಶಕ್ತಿ ಉತ್ಪಾದಿಸಲಿದೆ.

Maruti Suzuki

ಮಾರುತಿ ವ್ಯಾಗನಾರ್ ಹಾಗೂ ಎರ್ಟಿಗಾದಲ್ಲಿರುವ ಐಜಿಪಿಐ (iGPI) ವ್ಯವಸ್ಥೆಯನ್ನು ಸೆಲೆರಿಯೊ ಗ್ರೀನ್ ವೆರಿಯಂಟ್‌ನಲ್ಲಿ ಆಳವಡಿಸಲಾಗಿದೆ. ಇನ್ನು ಪೆಟ್ರೋಲ್ ವೆರಿಯಂಟ್ 23.1 ಕೀ.ಮೀ. ಮೈಲೇಜ್ ನೀಡಲಿದೆ. ಆದರೆ ಇದರ ಸಿಎನ್‌ಜಿ ಮಿಶ್ರಿತವಾಗಿ ಪ್ರತಿ ಕೆ.ಜಿಗೆ 31.79 ಕೀ.ಮೀ. ಮೈಲೇಜ್ ನೀಡುವಲ್ಲಿ ಸಕ್ಷಮವಾಗಲಿದೆ.

ಇಲ್ಲಿ ಗಮನಾರ್ಹ ವಿಷಯವೆಂದರೆ ಸೆಲೆರಿಯೊ ಸಿಎನ್‌ಜಿ ವೆರಿಯಂಟ್ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಲಭ್ಯವಾಗುವುದಿಲ್ಲ. ಬದಲಾಗಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

Most Read Articles

Kannada
English summary
Just about three months after the launch of the Celerio, Maruti Suzuki has introduced the CNG version of the new hatchback. Maruti Celerio Green has the CNG version is called, is only available in the VXi trim.
Story first published: Tuesday, May 20, 2014, 12:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X