ಸೆಪ್ಟೆಂಬರ್ ತಿಂಗಳಿಂದ ಬೆಂಝ್ ಕಾರುಗಳು ದುಬಾರಿ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಮುಂಬರುವ ಸೆಪ್ಟೆಂಬರ್ ತಿಂಗಳಿಂದ ತನ್ನ ರೇಂಜ್ ಮಾದರಿಗಳ ವಾಹನಗಳ ಬೆಲೆಗಳನ್ನು ಪರಿಷ್ಕರಿಸಲಿದ್ದು, ಶೇಕಡಾ 2.5ರಷ್ಟು ವರ್ಧನೆ ಕಂಡುಬರಲಿದೆ.

ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಬೆಂಝ್, ಹೊಸ ದರ ಸೆಪ್ಟೆಂಬರ್ 1ರಿಂದಲೇ ಚಾಲ್ತಿಗೆ ಬರುವುದಾಗಿ ತಿಳಿಸಿದೆ. ನಿರ್ಮಾಣ ವೆಚ್ಚ ಹೆಚ್ಚಳಗೊಂಡಿರುವುದು ಹಾಗೂ ರುಪಾಯಿ ಮೌಲ್ಯ ಕುಸಿತ ಕಂಡಿರುವುದು ಇದರ ಹಿಂದಿರುವ ಪ್ರಮುಖ ಕಾರಣಗಳಾಗಿವೆ.

Mercedes Benz

ಇದೇ ಸಂದರ್ಭದಲ್ಲಿ ಬೆಂಝ್ ಕಾರನ್ನು ತಮ್ಮದಾಗಿಸಿಕೊಳ್ಳಲು ಸ್ಮಾರ್ಟ್ ಫಿನಾನ್ಸಿಯಲ್ ಸೊಲ್ಯೂಷನ್ ಹಣಕಾಸು ಸೇವೆಯನ್ನು ಬೆಂಝ್ ಗ್ರಾಹಕರ ಮುಂದಿಡುತ್ತಿದೆ. ಇದರಲ್ಲಿ ಫ್ಲೆಕ್ಸಿನೊಮಿಕ್ಸ್, ಸ್ಟಾರ್ ಅಜಿಲಿಟಿ, ಸ್ಟಾರ್ ಲೀಸ್ ಮತ್ತು ಸ್ಟಾರ್ ಸೂಪರ್‌ಸೋನಿಕ್ ಮುಂತಾದ ಯೋಜನೆಗಳು ಇದರಲ್ಲಿ ಒಳಗೊಂಡಿರಲಿದೆ.

ಒಟ್ಟಿನಲ್ಲಿ ಬೆಂಝ್ ದರ ಏರಿಕೆ ನೀತಿಯ ಬೆನ್ನಲ್ಲೇ ಜರ್ಮನಿಯ ಇತರ ಐಷಾರಾಮಿ ವಾಹನ ತಯಾರಕ ಸಂಸ್ಥೆಗಳು ಸಹ ಇದನ್ನೇ ಅನುಸರಿಸುವ ಸಾಧ್ಯತೆಗಳು ದಟ್ಟವಾಗಿದೆ.

ಮುಖ್ಯಾಂಶಗಳು:
ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆ ಪರಿಷ್ಕರಣೆ,
ಎಲ್ಲ ಮಾದರಿಗಳಿಗೂ ಶೇಕಡಾ 2.5ರಷ್ಟು ವರೆಗೆ ದರ ಏರಿಕೆ,
ಪರಿಷ್ಕೃತ ದರ 2014 ಸೆಪ್ಟೆಂಬರ್ 1ರಿಂದಲೇ ಚಾಲ್ತಿಗೆ,
ಬೆಂಝ್‌ನಿಂದ ಹೊಸ ಹಣಕಾಸು ಸೇವೆ

Most Read Articles

Kannada
English summary
Mercedes-Benz India to revise price of its model range from 1st September 2014
Story first published: Monday, August 18, 2014, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X