ಮಗದೊಮ್ಮೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

By Nagaraja

ಜಾಗತಿಕ ಕಚ್ಚಾ ತೈಲ ಬೆಲೆ ಇಳಿಕೆಗೊಂಡಿರುವ ಹಿನ್ನೆಲೆಯಲ್ಲಿ ವಾರಂತ್ಯದೊಳಗೆ ಇಂಧನ ಬೆಲೆಯಲ್ಲಿ ಮಗದೊಮ್ಮೆ ಇಳಿಕೆ ಕಂಡುಬರುವ ಸಾಧ್ಯತೆಗಳು ನಿಚ್ಚಳವಾಗಿ ಕಂಡುಬರುತ್ತಿದೆ.

ಬಲ್ಲ ಮೂಲಗಳ ಪ್ರಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಒಂದು ರುಪಾಯಿಗಳಷ್ಟು ಇಳಿಕೆ ಕಂಡುಬರಲಿದೆ. ಈ ಸಂಬಂಧ ತೈಲ ಸಂಸ್ಥೆಗಳಿಂದ ಘೋಷಣೆ ಸದ್ಯದಲ್ಲೇ ಹೊರಬೀಳಲಿದೆ.

ಇದರೊಂದಿಗೆ ಆಗಸ್ಟ್ ತಿಂಗಳ ಬಳಿಕ ಏಳನೇ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಕಡಿತವುಂಟಾಗಲಿದೆ. ಇನ್ನೊಂದೆಡೆ ಕಳೆದ ಅಕ್ಟೋಬರ್ ತಿಂಗಳಿನಲ್ಲಷ್ಟೇ ಡೀಸೆಲ್ ಬೆಲೆಯನ್ನು ಅನಿಯಂತ್ರಣಗೊಳಿಸಲಾಗಿತ್ತು.

Petrol

ಮುಂದಿನ ಶನಿವಾರದಂದು ಇಂಡಿಯನ್ ಒಯಿಲ್ ಕಾರ್ಪ್ (ಒಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ (ಎಚ್‌ಪಿಸಿಎಲ್) ಇಂಧನ ಬೆಲೆಯನ್ನು ಪರಿಷ್ಕರಣೆಗೊಳಿಸಲಿದೆ. ಈಗಿನ ಪರಿಸ್ಥಿತಿಯಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಯನ್ನು ಗಮನಿಸಿದರೆ ಇಂಧನ ಬೆಲೆಯಲ್ಲಿ ಇಳಿಕೆ ಕಂಡುಬರಲಿದೆ ಎಂದು ಕೈಗಾರಿಕಾ ಮೂಲಗಳು ತಿಳಿಸಿವೆ.

ಈ ಹಿಂದೆ ನವೆಂಬರ್ 1ರಂದು ಪೆಟ್ರೋಲ್ ಬೆಲೆಯಲ್ಲಿ 2.41 ರು.ಗಳಷ್ಟು ಇಳಿಕೆ ಕಂಡುಬಂದಿತ್ತು. ಅಂದೇ ಡೀಸೆಲ್ ಬೆಲೆಯಲ್ಲೂ 2.25 ರು.ಗಳ ಇಳಿಕೆ ಮಾಡಲಾಗಿತ್ತು.

ಪೆಟ್ರೋಲ್ 9.26 ರು.ಗಳಷ್ಟು ಕಡಿತ
ಆಗಸ್ಟ್ ತಿಂಗಳ ಬಳಿಕ ಪೆಟ್ರೋಲ್ ಬೆಲೆಯಲ್ಲಿ 9.36 ರು.ಗಳಷ್ಟು ಇಳಿಕೆ ಕಂಡುಬಂದಿದೆ. ಇನ್ನೊಂದೆಡೆ ಡೀಸೆಲ್ ಬೆಲೆ ಕಳೆದ ಐದು ವರ್ಷಗಳಲ್ಲೇ ಮೊದಲ ಬಾರಿಯೆಂಬಂತೆ ಅಕ್ಟೋಬರ್ ತಿಂಗಳಲ್ಲಿ ಪ್ರತಿ ಲೀಟರ್‌ಗೆ 3.37 ರು.ಗಳಷ್ಟು ಕಡಿತಗೊಳಿಸಲಾಗಿತ್ತು. ಕೊನೆಯ ಬಾರಿ 2009ರಲ್ಲಿ ಡೀಸೆಲ್ ಬೆಲೆ ಇಳಿಕೆ ಮಾಡಲಾಗಿತ್ತು.

Most Read Articles

Kannada
English summary
Petrol and diesel prices had witnessed an all time high in the beginning of 2014. Diesel prices have been deregulated from 18th October, 2014. The international Brent Crude Oil prices have been coming down consistently.
Story first published: Wednesday, November 12, 2014, 16:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X