ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ದರ ಕಡಿತ

By Nagaraja

ಎರಡು ವರ್ಷಗಳ ಹಿಂದೆ ದೇಶದ ಮಾರುಕಟ್ಟೆ ಪ್ರವೇಶಿಸಿದ್ದ ರೆನೊ ಡಸ್ಟರ್ ಕೆಲವೇ ತಿಂಗಳುಗಳಲ್ಲಿ ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿದ್ದ ಎಸ್‌ಯುವಿ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಫೋರ್ಡ್ ಇಕೊಸ್ಪೋರ್ಟ್‌ಗಳಂತಹ ಪ್ರತಿಸ್ಪರ್ಧಿಗಳ ಆಗಮನದೊಂದಿಗೆ ಡಸ್ಟರ್ ನಿಧಾನಗವಾಗಿ ಆವೇಗ ಕಳೆದುಕೊಂಡಿತ್ತು.

ಹಾಗಾಗಿ ಗ್ರಾಹಕರನ್ನು ಹೆಚ್ಚು ಸೆಳೆಯುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ವರ್ಷಾರಂಭದಲ್ಲಿ ಡಸ್ಟರ್ ಅಡ್ವೆಂಚರ್ ಎಡಿಷನ್ ಪರಿಚಯಿಸಲಾಗಿತ್ತು. ಇದು ಪ್ರಮುಖವಾಗಿಯೂ ಇಂಟೇಗ್ರೇಟಡ್ ಲೈಟ್ಸ್, ಸ್ಪೋಕ್ಡ್ ಹೆಡ್‌ಲೈಟ್, ಸೈಡ್ ಹಾಗೂ ವೀಲ್ ಆರ್ಚ್‌ಗಳಲ್ಲಿ ಸುಭದ್ರ ಪ್ಲ್ಯಾಸ್ಟಿಕ್ ಕ್ಲಾಡಿಂಗ್, ಅಲಾಯ್ ವೀಲ್, ಬಿಳಿ ಒಆರ್‌ವಿಎಂ ಕವರ್ ಮತ್ತು ಡಿ ಪಿಲ್ಲರ್‌ನಲ್ಲಿ ಅಡ್ವೆಂಚರ್ ಡಿಕಾಲ್ಸ್ ಪಡೆದುಕೊಂಡಿತ್ತು.

Renault Duster Adventure Edition

ಇನ್ನು ಕಾರಿನೊಳಗೆ ಲೈಮ್ ಗ್ರೀಮ್ ಥಿಮ್ ಪಡೆದುಕೊಂಡಿತ್ತು. ಇದು ಸೀಟು, ಡೋರ್ ಹಾಗೂ ಕಾರ್ಪೆಟ್‌ಗಳನ್ನು ಆವರಿಸಿಕೊಂಡಿತ್ತು. 110 ಪಿಎಸ್ ಪವರ್ ಉತ್ಪಾದಿಸುವ ಈ ಆರ್‌ಎಕ್ಸ್‌ಎಲ್ ವೆರಿಯಂಟ್ ಇದುವರಗೆ 12.18 ಲಕ್ಷ ರು.ಗಳಲ್ಲಿ (ತೆರಿಗೆ ಹೊರತುಪಡಿಸಿ) ಲಭ್ಯವಾಗುತ್ತಿತ್ತು.

ಇದೀಗ ಗ್ರಾಹಕರನ್ನು ಆಕರ್ಷಿಸುವ ಮೂಲಕ ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಇನ್ನು ಸ್ಮರ್ಧಾತ್ಮಕ ದರಗಳಲ್ಲಿ ಡಸ್ಟರ್ ಅಡ್ವೆಂಚರ್ ಎಡಿಷನ್ ಹೊರತರಲು ಸಂಸ್ಥೆ ನಿರ್ಧರಿಸಿದೆ. ಇದರಂತೆ ದೆಹಲಿ ಎಖ್ಸ್ ಶೋ ರೂಂ ದರ 9.16 ಲಕ್ಷ ರು.ಗಳಿಗೆ ಇಳಿಕೆಗೊಳಿಸಿದೆ. ಅದೇ ಹೊತ್ತಿಗೆ 85 ಪಿಎಸ್ ಪವರ್ ಉತ್ಪಾದಿಸುವ ಸ್ಟಾಂಡರ್ಡ್ ಡಸ್ಟರ್‌ ಆರ್‌ಎಕ್ಸ್‌ಇ ವೆರಿಯಂಟ್ ಎಕ್ಸ್ ಶೋ ರೂಂ ದರ 8.61 ಲಕ್ಷ ರು.ಗಳಾಗಿವೆ.

Most Read Articles

Kannada
English summary
Soon after launch Renault Duster had become the highest selling SUV in India at the time. While the Duster continues to be popular, it no longer sells in such high numbers.
Story first published: Monday, June 2, 2014, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X