ಎಫ್1 ದಿಗ್ಗಜ ಶುಮೇಕರ್‌ಗೆ ಜ್ಞಾಪಕ ಶಕ್ತಿಯ ಕೊರತೆ

By Nagaraja

ಸ್ಕೀಯಿಂಗ್ ಅಪಘಾತದಿಂದಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಿಶ್ವ ವಿಖ್ಯಾತ ಮಾಜಿ ಎಫ್1 ದಿಗ್ಗಜ ಮೈಕಲ್ ಶುಮೇಕರ್, ಅವರಿಗೆ ಜ್ಞಾಪಕ ಶಕ್ತಿಯ ಕೊರತೆ ಕಾಡುತ್ತಿದೆ ಎಂದು ನಿಕಟ ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ ಶುಮೇಕರ್ ಈಗಲೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆದರೆ ಕೆಲವೊಮ್ಮೆ ಜ್ಞಾಪಕ ಶಕ್ತಿ ಹಾಗೂ ಪಕ್ಷವಾತ ಸಮಸ್ಯೆ ಕಾಡುತ್ತಿದೆ ಎಂದು ಶುಮೇಕರ್ ಸ್ನೇಹಿತರಲ್ಲಿ ಓರ್ವರಾಗಿರುವ ಪಿಲಿಪ್ ಸ್ಟ್ರೆಫ್ ವಿವರಿಸಿದ್ದಾರೆ.

Michael Schumacher

2013 ಡಿಸೆಂಬರ್ ತಿಂಗಳಲ್ಲಿ ಫ್ರಾನ್ಸ್‌ನ ಆಲ್ಫ್ಸ್ ಹಿಮಪರ್ವತದಲ್ಲಿ ಸಾಹಸ ಕ್ರೀಡೆ ಸ್ಕೀಯಿಂಗ್ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಜಾರಿ ಬಿದಿದ್ದರು. ಬಳಿಕ ತೀವ್ರ ಮೆದುಳಿನ ಗಾಯಕ್ಕೆ ಸಿಲುಕಿದ್ದ ಅವರು ಕೋಮಾ ಸ್ಥಿತಿಗೆ ಜಾರಿದ್ದರು.

ಆಸ್ಪತ್ರೆಯಲ್ಲಿ ಒಂಬತ್ತು ತಿಂಗಳ ಕಾಲ ಸುದೀರ್ಘ ಚಿಕಿತ್ಸೆಗೆ ಒಳಗಾಗಿದ್ದ ಏಳು ಬಾರಿಯ ಎಫ್1 ವಿಶ್ವ ಚಾಂಪಿಯನ್ ಶುಮೇಕರ್ ಅವರನ್ನು ಕಳೆದ ಜೂನ್ ತಿಂಗಳಲ್ಲಿ ಮನೆಗೆ ಸ್ಥಳಾಂತರಿಸಲಾಗಿತ್ತು.

ಸ್ನೇಹಿತನ ಪ್ರಕಾರ, ಶುಮೇಕರ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದರೆ ಎಲ್ಲವೂ ಒಂದಕ್ಕೊಂದು ನಂಟಿದೆ. ಅವರಿಗಿನ್ನು ಮಾತನಾಡಲು ಸಾಧ್ಯವಾಗುತ್ತಿಲ್ಲ. ಕಲೆವೊಮ್ಮ ಪಕ್ಷವಾತ, ಜ್ಞಾಪಕ ಶಕ್ತಿಯ ಸಮಸ್ಯೆ ಎದುರಾಗುತ್ತಿದೆ ಎಂದಿದ್ದಾರೆ.

ಪ್ರಸ್ತುತ ಶುಮೇಕರ್ ಅವರಿಗೆ ವೀಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನೊಂದೆಡೆ ವಿಶ್ವದ್ಯಾಂತ ಶುಮೇಕರ್ ಅಭಿಮಾನಿಗಳು ಬಹುಬೇಗನೇ ಎಫ್1 ದಿಗ್ಗಜ ಬಹುಬೇಗನೇ ಗುಣಮುಖರಾಗುವಂತೆ ನಿರಂತರ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Most Read Articles

Kannada
English summary
Michael Schumacher is paralysed with speech and memory problems, according to Philippe Streiff, a friend of Michael and ex-Formula One driver who was himself left in a wheelchair after a crash.
Story first published: Thursday, November 20, 2014, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X