ಸ್ಕೋಡಾ ಒಕ್ಟಾವಿಯಾ ಜಿ-ಟೆಕ್ ಸಿಎನ್‌ಜಿ ವೆರಿಯಂಟ್

Written By:

ತನ್ನ ಜನಪ್ರಿಯ ಒಕ್ಟಾವಿಯಾ ಆವೃತ್ತಿಯ ಹೊಸ ವೆರಿಯಂಟ್‌ವೊಂದನ್ನು ಪರಚಯಿಸಲು ಸ್ಕೋಡಾ ಹೊರಟಿದೆ. ಹೌದು, ಸಂಕುಚಿತ ನೈಸರ್ಗಿಕ ಅನಿಲದ ನೂತನ ಒಕ್ಟಾವಿಯಾ ಜಿ-ಟೆಕ್ ಸಿಎನ್‌ಜಿ ವೆರಿಯಂಟ್, 2014 ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿದೆ.

ಪ್ರಸ್ತುತ ಆವೃತ್ತಿಯು ಕೊಂಬಿ ಹಾಗೂ ಸಲೂನ್ ವರ್ಷನ್‌ಗಳಲ್ಲಿ ಲಭ್ಯವಿರಲಿದೆ. ಇದು ನೈಸರ್ಗಿಕ ಅನಿಲ ನಿಯಂತ್ರಿತ ಸಿಟಿಗೊ ಬಳಿಕ ಸ್ಕೋಡಾದಿಂದ ಆಗಮನವಾಗುತ್ತಿರುವ ಎರಡನೇ ಸಿಎನ್‌ಜಿ ಮಾದರಿ ಎನಿಸಿಕೊಳ್ಳಲಿದೆ.

Skoda Octavia

ಸ್ಕೋಡಾ ಒಕ್ಟಾವಿಯಾ ಜಿ-ಟೆಕ್ ಸಿಎನ್‌ಜಿ ವೆರಿಯಂಟ್ ಸಂಸ್ಥೆಯ ಪಾಲಿಗೆ ಅತಿ ಮುಖ್ಯವೆನಿಸಲಿದೆ. ಇದು ಒಕ್ಟಾವಿಯಾ ಆವೃತ್ತಿಯನ್ನು ಇನ್ನಷ್ಟು ಪರಿಸರ ಸ್ನೇಹಿ ಮಾಡುವಲ್ಲಿ ನೆರವಾಗಲಿದೆ.

ಅಂದ ಹಾಗೆ 110 ಅಶ್ವಶಕ್ತಿ ಉತ್ಪಾದಿಸಬಲ್ಲ ಒಕ್ಟಾವಿಕಾ ಜಿ-ಟೆಕ್ 1.4 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅದೇ ರೀತಿ ಪ್ರತಿ 100 ಕೀ.ಮೀ.ಗೆ 3.5 ಕೆ.ಜಿ ನೈಸರ್ಗಿಕ ಅನಿಲದ ಅಗತ್ಯವಿರುತ್ತದೆ. ಸಿಎನ್‌ಜಿ ಮಾತ್ರವಾಗಿ 410 ಕೀ.ಮೀ. ವರೆಗೂ ಹಾಗೆಯೇ ಪೆಟ್ರೋಲ್ ಸೇರಿದಾಗ 1330 ಕೀ.ಮೀ. ವರೆಗೂ ವರ್ಧಿಸಬಹುದಾಗಿದೆ.

English summary
Skoda has announced a compressed natural gas variant of its popular Octavia. Called the Octavia G-TEC, the CNG variant will be available in both Combi (estate vehicle) and saloon version of the vehicle.
Story first published: Wednesday, February 26, 2014, 12:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark