ಟಾಟಾದಿಂದ ಮಗದೊಂದು ಅಗ್ಗದ ನ್ಯಾನೋ ಕಾರು ಬಿಡುಗಡೆಗೆ ರೆಡಿ

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಪವರ್ ಸ್ಟೀರಿಂಗ್ ನ್ಯಾನೋ ಟ್ವಿಸ್ಟ್ ಮಾದರಿ ಬಿಡುಗಡೆಗೊಳಿಸಿದ್ದ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಇದೇ ಟ್ವಿಸ್ಟ್ ತಳಹದಿಯಲ್ಲಿ ಹೊಸತಾದ ಎಕ್ಸ್‌ಇ ಬೇಸ್ ವೆರಿಯಂಟ್ ಪರಿಚಯಿಸಿದೆ.

ಹೊಸ ಪೀಳಿಗೆಯ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಟಾಟಾ ಇತ್ತೇಚೆಗಷ್ಟೇ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು. ಈ ಮೂಲಕ ದೇಶೀಯ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿರೀಕ್ಷೆ ಹೊಂದಿದೆ.


ಶ್ರೀಸಾಮಾನ್ಯರಿಗೆ ಕೈಗೆಟಕುವ ದರಗಳಲ್ಲಿ ಕಾರು ಒದಗಿಸುವುದರಲ್ಲಿ ಬದ್ಧವಾಗಿರುವ ಟಾಟಾ ಸಂಸ್ಥೆಯು ಟ್ವಿಸ್ಟ್ ಸಾಲಿಗೆ ಹೊಸತಾದ ವೆರಿಯಂಟ್ ಸೇರ್ಪಡೆಗೊಳಿಸಿದೆ. ಇದರಲ್ಲೂ ಪವರ್ ಸ್ಟೀರಿಂಗ್ ಸೌಲಭ್ಯವಿರಲಿದೆ.

ಕಾರು ಆಕ್ಸೆಸರಿಗಳಿಗೆ ಶೇಕಡಾ 20ರಷ್ಟು ಆಫರ್

ಅಷ್ಟೇ ಅಲ್ಲದೆ ಪವರ್ ಸ್ಟೀರಿಂಗ್ ಇಲ್ಲದ ಸ್ಟಾಂಡರ್ಡ್ ನ್ಯಾನೋ ಕಾರಿನ ಮಾರಾಟವನ್ನು ನಿಕಟ ಭವಿಷ್ಯದಲ್ಲೇ ಸ್ಥಗಿತಗೊಳಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ.

Nano

ಹೊಸತಾದ ಎಕ್ಸ್‌ಇ ವೆರಿಯಂಟ್, ಸಿಎಕ್ಸ್ ವೆರಿಯಂಟ್‌ನಲ್ಲಿರುವ ಸೌಲಭ್ಯಗಳು ಸೇರಿದಂತೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಅಂದರೆ ಬೇಸ್ ವೆರಿಯಂಟ್ ಹಿಂದಿನಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಇದರ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಪ್‌ಗ್ರೇಡ್ ಆಗಲಿದ್ದು, ದೊಡ್ಡದಾದ ಸ್ಟೀರಿಂಗ್ ವೀಲ್ ಸಹ ಪಡೆದುಕೊಳ್ಳಲಿದೆ.

ಮುಂಬರುವ ದಿನಗಳಲ್ಲಿ ನ್ಯಾನೋ ಕಾರಿನಲ್ಲಿ ಎಎಂಟಿ ಎಫ್ ಟ್ರಾನಿಕ್ ಐಚ್ಛಿಕ ಆಯ್ಕೆ ನೀಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಇದು ತೆರೆಯಬಹುದಾದ ಬೂಟ್ ಜೊತೆಗೆ ಮುಂದೆ ಹಾಗೂ ಹಿಂದುಗಡೆ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

Most Read Articles

Kannada
English summary
Tata Motors To Introduce Nano Twist XE As New Base Model
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X