ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್ 400 ಕಾನ್ಸೆಪ್ಟ್ ಅನಾವರಣ

By Nagaraja

ವಿಶ್ವದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ನೂತನ ಗಾಲ್ಫ್ ಆರ್ 400 ಕಾನ್ಸಪ್ಟ್ ಕಾರನ್ನು ಅನಾವರಣಗೊಳಿಸಿದೆ. ವರದಿಗಳ ಪ್ರಕಾರ ಜರ್ಮನಿಯ ಈ ವಾಹನ ತಯಾರಕ ಸಂಸ್ಥೆಯು ಈಗಾಗಲೇ ಆರಂಭವಾಗಿರುವ ಬೀಜಿಂಗ್ ಮೋಟಾರು ಶೋದಲ್ಲೂ ಇದನ್ನು ಪ್ರದರ್ಶಿಸಲಿದೆ.

ಫೋಕ್ಸ್‌ವ್ಯಾಗನ್ ಗಾಲ್ಫ್ ಆರ್ ಹ್ಯಾಚ್‌ಬ್ಯಾಕ್ ಮಾದರಿ ತಲಹದಿಯಲ್ಲಿ ಗಾಲ್ಫ್ ಆರ್ 400 ನಿರ್ಮಾಣವಾಗಲಿದೆ. ಹಾಗಿದ್ದರೂ ಈ ಹೈಪರ್ ವರ್ಷನ್ ಕಾರು ಬರೋಬ್ಬರಿ 395 ಅಶ್ವಶಕ್ತಿ ಉತ್ಪಾದಿಸಲಿದೆ.

Volkswagen

ಅಷ್ಟೇ ಅಲ್ಲದೆ ಗಾಲ್ಫ್ ಆರ್ 400 ಆವೃತ್ತಿಯಲ್ಲಿ ಆಲ್ ವೀಲ್ ಡ್ರೈವ್ ಸಿಸ್ಟಂ ಹೊಂದಿರಲಿದೆ. ಇದು ಗರಿಷ್ಠ ಗಂಟೆಗೆ 280 ಕೀ.ಮೀ. ಅಂತೆಯೇ ಕೇವಲ 3.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಹಾಗಿದ್ದರೂ ಗಾಲ್ಫ್ ಆರ್ ಕಾರಿನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಬಳಕೆ ಮಾಡಲು ಫೋಕ್ಸ್‌ವ್ಯಾಗನ್ ಯೋಜನೆ ಹೊಂದಿದೆ. ಇದು 2.0 ಲೀಟರ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ. ಹಾಗೆಯೇ ಗಾಲ್ಫ್ ಆರ್ 400 ವಿಶೇಷವಾದ ಎಲೆಕ್ಟ್ರೊ ಮೆಕ್ಯಾನಿಕಲ್ ಹಾಲ್ಡೆಕ್ಸ್ ಮಲ್ಟಿ ಪ್ಲೇಟ್ ಕ್ಲಚ್ ಸಹ ಪಡೆದುಕೊಳ್ಳಲಿದೆ. ಇದರಲ್ಲಿ ಡಿಎಸ್‌ಜಿ ಗೇರ್ ಬಾಕ್ಸ್ ಸಹ ಆಳವಡಿಸಲಾಗುವುದು.

Most Read Articles

Kannada
English summary
Volkswagen has revealed sketches of their new Golf R 400 concept vehicle. The German auto manufacturer will showcase this new concept at the Beijing Motor Show, which is to be held on 21st to 29th of April, 2014.
Story first published: Tuesday, April 22, 2014, 12:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X