ಫೋಕ್ಸ್‌ವ್ಯಾಗನ್ 7ನೇ ವರ್ಷದ ಸಂಭ್ರಮ; ಆಕರ್ಷಕ ಡಿಸ್ಕೌಂಟ್‌

Written By:

ಜರ್ಮನಿಯ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಭಾರತಕ್ಕೆ ಕಾಲಿಟ್ಟು ಏಳು ವಸಂತಗಳೇ ಸಂದಿದೆ. ಈ ಖುಷಿಯನ್ನು ಆಚರಿಸಿಕೊಳ್ಳಲು ಸಂಸ್ಥೆಯು ವಿಶೇಷ ಡಿಸ್ಕೌಂಟ್ ಮೇಳವನ್ನು ಹಮ್ಮಿಕೊಂಡಿದೆ.

ಈ ವರ್ಷಾಂತ್ಯದ ವೇಳೆಯಲ್ಲಿ ಬಹುತೇಕ ಎಲ್ಲ ವಾಹನ ತಯಾರಿಕ ಸಂಸ್ಥೆಗಳು ಭಾರಿ ರಿಯಾಯಿತಿ ದರಗಳನ್ನೇ ನೀಡುತ್ತಿದೆ. ಇದರಂತೆ ಫೋಕ್ಸ್‌ವ್ಯಾಗನ್ ಸಂಸ್ಥೆಯು ಸಹ ಗ್ರಾಹಕರಿಗೆ ಗರಿಷ್ಠ ಪ್ರಯೋಜನ ನೀಡಲು ಮುಂದಾಗಿದೆ.

ಏಳನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಫೋಕ್ಸ್‌ವ್ಯಾಗನ್ ಆಯ್ದ ಮಾದರಿಗಳಿಗೆ ಸೀಮಿತ ಆಫರುಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ಯಾವೆಲ್ಲ ಮಾದರಿಗಳಿಗೆ ಆಫರ್ ಅನ್ವಯ?

ಫೋಕ್ಸ್‌ವ್ಯಾಗನ್ ಪೊಲೊ,

ಫೋಕ್ಸ್‌ವ್ಯಾಗನ್ ವೆಂಟೊ,

ಫೋಕ್ಸ್‌ವ್ಯಾಗನ್ ಜೆಟ್ಟಾ

ಪೊಲೊ

18,000 ರು. ವರೆಗೆ ನಗದು ಪ್ರಯೋಜನ

ವಿಶೇಷ ಇಎಂಐ ಆಯ್ಕೆ - ರು. 8,888/ಮಾಸಿಕ

ಹೊಸ ಪೊಲೆ ದೆಹಲಿ ಎಕ್ಸ್ ಶೋ ರೂಂ ಬೆಲೆ 4.99 ಲಕ್ಷ ರು.ಗಳಿಂದ 8.18 ಲಕ್ಷ ರು.ಗಳ ವರೆಗಿದೆ.

volkswagen polo

ವೆಂಟೊ

ಉಚಿತ ವಿಮೆ ಹಾಗೂ ಎರಡು ವರ್ಷಗಳ ಎಎಂಜಿ (ವಾರ್ಷಿಕ ನಿರ್ವಹಣಾ ವೆಚ್ಚ)

ಮೂರನೇ ವರ್ಷಕ್ಕೂ ವರ್ಧಿತ ವಾರಂಟಿ

ಎಕ್ಸ್‌ಚೇಂಜ್ ಆಫರ್ 30,000 ರು.

ಫೋಕ್ಸ್‌ವ್ಯಾಗನ್ ವೆಂಟೊ ದೆಹಲಿ ಎಕ್ಸ್ ಶೋ ರೂಂ ಬೆಲೆ 7.59 ಲಕ್ಷ ರು.ಗಳಿಂದ 11.16 ಲಕ್ಷ ರು.ಗಳ ವರೆಗಿದೆ.

ಜೆಟ್ಟಾ

ರು. 50,000 ವರೆಗೆ ನಗದು ಪ್ರಯೋಜನ

ಎಕ್ಸ್‌ಚೇಂಜ್ ಆಫರ್ 30,000 ರು. ವರೆಗೆ

ಜೆಟ್ಟಾ ದೆಹಲಿ ಎಕ್ಸ್ ಶೋ ರೂಂ ಬೆಲೆ 13.21 ಲಕ್ಷ ರು.ಗಳಿಂದ 19.02 ಲಕ್ಷ ರು.ಗಳ ವರೆಗಿದೆ.

English summary
German automobile giant, Volkswagen has come to India a while ago. They offer a wide range of products in the market. In India they offer, Polo, Cross Polo, Vento and Jetta models. Volkswagen has been in India now for a period of seven years.
Story first published: Wednesday, December 10, 2014, 16:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark