ಬೆಂಝ್ ಸಿ ಕ್ಲಾಸ್ ಐಷಾರಾಮಿ ಕಾರು ಹೆಂಗಿದೆ ಅಂತೀರಾ?

Written By:

ಪ್ರಖ್ಯಾತ ಡಿಟ್ರಾಯ್ಟ್ ಆಟೋ ಶೋ ಮುನ್ನುಡಿಯಾಗಿ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, 2015 ಸಿ-ಕ್ಲಾಸ್ ಆವೃತ್ತಿಯನ್ನು ಪರಿಚಯಿಸಿದೆ.

ಬೆಂಝ್ ಎ ಕ್ಲಾಸ್ vs ಬಿಎಂಡಬ್ಲ್ಯು 1 ಸಿರೀಸ್ ಹೋಲಿಕೆ

ನಿಮ್ಮ ಮಾಹಿತಿಗಾಗಿ, ಉತ್ತರ ಅಮೆರಿಕದ ಜನಪ್ರಿಯ ಆಟೋ ಶೋಗಳಲ್ಲಿ ಒಂದಾಗಿರುವ ಡೆಟ್ರಾಯ್ಟ್ ಮೋಟಾರು ಶೋ ಜನವರಿ ತಿಂಗಳಲ್ಲಿ ನಡೆಯಲಿದೆ. ಇದರಂತೆ ನಿಸ್ಸಂಶಯವಾಗಿಯೂ ಬೆಂಝ್ ಸಿ ಕ್ಲಾಸ್ ಗಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೂ 2015 ಸಿ ಕ್ಲಾಸ್ ಬಗೆಗಿನ ಹೆಚ್ಚಿನ ವೈಶಿಷ್ಟ್ಯಗಳನ್ನು ಗೌಪ್ಯವಾಗಿಡಲಾಗಿದೆಯಾದರೂ ಡ್ರೈವ್ ಸ್ಪಾರ್ಕ್ ಕಂಡುಕೊಂಡಿರುವ ಎಕ್ಸ್‌ಕ್ಲೂಸಿವ್ ಮಾಹಿತಿಗಳತ್ತ ಒಮ್ಮೆ ಕಣ್ಣಾಯಿಸಿರಿ...

2015 Mercedes C-Class Revealed

2015 ಬೆಂಝ್ ಸಿ ಕ್ಲಾಸ್ ಹಲವಾರು ಎಂಜಿನ್ ವೈಶಿಷ್ಟ್ಯಗಳೊಂದಿಗೆ ಆಗಮನವಾಗಲಿದೆ. ಈ ಪೈಕಿ ಕೆಲವೊಂದು ವೆರಿಯಂಟ್ ನಿರ್ದಿಷ್ಟ ಮಾರುಕಟ್ಟೆಯನ್ನು ಮಾತ್ರ ಗುರಿಯಾಗಿರಿಸಿಕೊಳ್ಳಲಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಇಂಧನ ದಕ್ಷತೆ ನೀಡುವಲ್ಲಿ ಹೊಸ ಸಿ ಕ್ಲಾಸ್ ಯಶಸ್ವಿಯಾಗಲಿದೆ.

2015 Mercedes C-Class Revealed

ಅಂದರೆ ಪ್ರತಿಯೊಂದು ಬೆಂಝ್ ಸಿ ಕ್ಲಾಸ್ ವೆರಿಯಂಟ್ ಸ್ಟಾರ್ಟ್/ಸ್ಟಾಪ್ ವೈಶಿಷ್ಟ್ಯ ಪಡೆದುಕೊಳ್ಳಲಿದೆ. ಬಲ್ಲ ಮೂಲಗಳ ಪ್ರಕಾರ ಇಂಧನ ಕ್ಷಮತೆಯು ಶೇಕಡಾ 20ರಷ್ಟು ಹೆಚ್ಚು ಸಿಗಲಿದೆ.

2015 Mercedes C-Class Revealed

ಈ ಪೈಕಿ 2.0 ಲೀಟರ್ ಟರ್ಬೊ ಫೋರ್, 3.0 ಲೀಟರ್ ಟರ್ಬೊ ವಿ6, ಎರಡು 2.1 ಲೀಟರ್ ಟರ್ಬೊ ಡಿಸೆಲ್ ಎಂಜಿನ್ ಮತ್ತು 1.6 ಲೀಟರ್ ಟರ್ಬೊ ಡೀಸೆಲ್ ಹಾಗೂ ಹೈಬ್ರಿಡ್ ವೆರಿಯಂಟ್‌ನಿಂದ ನಿಯಂತ್ರಿಸಲ್ಪಡಲಿದೆ.

2015 Mercedes C-Class Revealed

ಹಾಗೆಯೇ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಅಥವಾ ಸೆವೆನ್ ಸ್ಪೀಡ್ ಆಟೋ ಬಾಕ್ಸ್‌ನಿಂದಲೂ ಲಭ್ಯವಿರಲಿದೆ. ಅಮೆರಿಕ ವೆರಿಯಂಟ್‌ನಲ್ಲಿ ಆಲ್ ವೀಲ್ ಡ್ರೈವ್ ಸೌಲಭ್ಯ ಸ್ಟಾಂಡರ್ಡ್ ಆಗಿ ಲಭಿಸಲಿದೆ.

2015 Mercedes C-Class Revealed

2015 ಬೆಂಝ್ ಸಿ ಕ್ಲಾಸ್ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಹಗುರ ಹಾಗೂ ದೊಡ್ಡದಾಗಿರಲಿದೆ. ಅಲ್ಲದೆ ವೀಲ್ ಬೇಸ್ ಕೂಡಾ ಹೆಚ್ಚು ಮಾಡಲಾಗಿದೆ.

2015 Mercedes C-Class Revealed

ಇನ್ನು ಗ್ರಾಹಕರ ಅನುಕೂಲಕ್ಕಾಗಿ ಸ್ಪೋರ್ಟಿ ಪ್ಯಾಕೇಜ್ ಕೂಡಾ ಪರಿಚಯಿಸಲಾಗುತ್ತಿದೆ. ಇದರಲ್ಲಿ ಸ್ಪೋರ್ಟಿ ಸಸ್ಪೆಷನ್ ಒಳಗೊಂಡಿರಲಿದೆ. ಇದು ಕಂಫರ್ಟ್, ಇಕೊ, ಸ್ಪೋರ್ಟ್ ಮತ್ತು ಸ್ಪೋರ್ಟ್ಸ್ ಪ್ಲಸ್‌ಗಳೆಂದ ಸಸ್ಪೆಷನ್ ವಿಧಗಳನ್ನು ಹೊಂದಿರಲಿದೆ.

2015 Mercedes C-Class Revealed

ಹಾಗೆಯೇ ಸುರಕ್ಷತೆಗೂ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದ್ದು, ಆಟೆಕ್ಷನ್ ಅಸಿಸ್ಟ್, ಅಪಘಾತ ತಡೆ ಸಹಾಯಿ, ಎಮರ್ಜನ್ಸಿ ಆಟೋನೋಮಸ್ ಬ್ರೇಕಿಂಗ್ ಸಿಸ್ಟಂ, ಡಿಸ್‌ಟ್ರಾನಿಕ್ ಪ್ಲಸ್, ಬಿಎಎಸ್ ಪ್ಲಸ್ ಬ್ರೇಕ್ ಅಸಿಸ್ಟ್ ಸಿಸ್ಟಂ, ಆಕ್ಟಿವ್ ಪಾರ್ಕಿಂಗ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ಟ್ರಾಫಿಕ್ ಸೈನ್ ಅಸಿಸ್ಟ್‌ಗಳಂತಹ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

2015 Mercedes C-Class Revealed

ಅಂತೆಯೇ ಕಾರಿನೊಳಗೆ ಕಾಮಂಡ್ ಮಾಹಿತಿ ಜತೆಗೆ ಏಳು ಇಂಚಿನ ಮಾಹಿತಿ ಸಿಸ್ಟಂ ಇರಲಿದೆ. ಇದು ಗ್ರಾಹಕರ ಅಗತ್ಯಕ್ಕಾನುಸಾರವಾಗಿ ಅಪ್‌ಗ್ರೇಡ್ ಮಾಡಬಹುದಾಗಿದೆ.

2015 Mercedes C-Class Revealed

ಇದೀಗ ಎಲ್ಲರ ಕಣ್ಣು ಡೆಟ್ರಾಯ್ಟ್‌ನತ್ತ ನೆಟ್ಟಿದ್ದು, ಬೆಂಝ್ ಸಿ ಕ್ಲಾಸ್ ಹೇಗೆ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Mercedes-Benz has released the first official images of the 2015 C-Class ahead of its 2014 Detroit Motor Show launch in January. The all new car is without doubt the best looking C-Class till date and even features elements from the S-Class.
Story first published: Tuesday, December 17, 2013, 10:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark