ಜೇಮ್ಸ್ ಬಾಂಡ್ ಚಿತ್ರದ ಆಸ್ಟನ್ ಮಾರ್ಟಿನ್ ಕಾರು ಹರಾಜಿಗೆ

Written By:

ರೋಚಕ ಪತ್ತೇದಾರಿ ಕಥಾ ಸರಣಿ ಜೇಮ್ಸ್ ಬಾಂಡ್ಸ್ ಲೇಟೆಸ್ಟ್ ಚಿತ್ರ ಸ್ಪೆಕ್ಟರ್ ಚಿತ್ರದಲ್ಲಿ ಬಳಕೆಯಾಗಿರುವ ಆಸ್ಟನ್ ಮಾರ್ಟಿನ್ ಡಿಬಿ10 ಕಾರನ್ನು ಹರಾಜಿಗಿಡಲಾಗುತ್ತಿದೆ. ಬ್ರಿಟನ್ ನ ಐಕಾನಿಕ್ ಸಂಸ್ಥೆಯಾಗಿರುವ ಆಸ್ಟನ್ ಮಾರ್ಟಿನ್ ಕೇವಲ ಸೀಮಿತ ಸಂಖ್ಯೆಯ ಸ್ಪೆಕ್ಟರ್ ಕಾರುಗಳನ್ನು ನಿರ್ಮಿಸಿತ್ತು.

ರಸ್ತೆಯಲ್ಲಿ ಚಲಿಸಲು ಕಾನೂನಿನ ಯಾವುದೇ ಅಡ್ಡಿಯಿಲ್ಲದಿರುವುದರಿಂದ ಇದನ್ನು ಪಡೆದುಕೊಳ್ಳುವವರು ಅದೃಷ್ಟವಂತರೆನಿಸಲಿದ್ದಾರೆ. ಅಂದ ಹಾಗೆ 10 ಇಂತಹ ಮಾದರಿಗಳನ್ನು ಸ್ಪೆಕ್ಟರ್ ಚಿತ್ರಕ್ಕಾಗಿ ಬಳಕೆ ಮಾಡಲಾಗಿತ್ತು.

To Follow DriveSpark On Facebook, Click The Like Button
ಆಸ್ಟನ್ ಮಾರ್ಟಿನ್

ನಿಮ್ಮ ಮಾಹಿತಿಗಾಗಿ ಆಸ್ಟನ್ ಮಾರ್ಟಿನ್ ವಿ8 ವ್ಯಾಂಟೇಜ್ ಕಾರಿನ ತಳಹದಿಯಲ್ಲಿ ಡಿಬಿ10 ನಿರ್ಮಿಸಲಾಗಿತ್ತು. ಇದು 4.8 ಲೀಟರ್ ವಿ8 ಎಂಜಿನ್ ನಿಂದ ನಿಯಂತ್ರಿಸ್ಪಡುತ್ತದೆ. ಭವಿಷ್ಯದ ಆಸ್ಟನ್ ಮಾರ್ಟಿನ್ ಕಾರುಗಳಿಗೂ ಇದೇ ವಿನ್ಯಾಸ ನೀತಿಯನ್ನು ಅನುಸರಿಸಲಾಗುವುದು.

ಇದೇ ಶ್ರೇಣಿಯಲ್ಲಿ ನಿರ್ಮಾಣವಾಗಲಿರುವ ಮುಂದಿನ ಆಸ್ಟನ್ ಮಾರ್ಟಿನ್ ಡಿಬಿ11 ಕಾರು 6.0 ಲೀಟರ್ ವಿ12 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

English summary
Aston Martin To Auction The DB10 In 2016
Story first published: Saturday, October 31, 2015, 11:32 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark