ಷೆವರ್ಲೆ ಟ್ರೈಲ್‌ಬ್ಲೇಜರ್ ಎಸ್‌ಯುವಿ, ಸ್ಪಿನ್ ಎಂಪಿವಿ ಭರ್ಜರಿ ಅನಾವರಣ

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತ ಮಾರುಕಟ್ಟೆಗೆ 10 ಹೊಸ ಉತ್ಪನ್ನಗಳನ್ನು ಪರಿಚಯಿಸುವ ಯೋಜನೆ ಹೊಂದಿರುವ ಅಮೆರಿಕ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ಜನರಲ್ ಮೋಟಾರ್ಸ್ ಕಾರು ಬ್ರಾಂಡ್ ಷೆವರ್ಲೆ, ದೇಶದಲ್ಲಿ ಅತಿ ನೂತನ ಟ್ರೈಲ್ ಬ್ಲೇಜರ್ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಮತ್ತು ಸ್ಪಿನ್ ಬಹು ಬಳಕೆಯ ವಾಹನವನ್ನು (ಎಂಪಿವಿ) ಭರ್ಜರಿ ಅನಾವರಣಗೊಳಿಸಿದೆ.

ಈ ಪೈಕಿ ಟ್ರೈಲ್ ಬ್ಲೇಜರ್ ಎಸ್ ಯುವಿ ಮುಂದಿನ ಅಕ್ಟೋಬರ್ ತಿಂಗಳಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸಲಿದ್ದು, ಸ್ಪಿನ್ ಎಂಪಿವಿ 2017ರ ವೇಳೆಯಾಗುವಾಗ ಬಿಡುಗಡೆಯಾಗಲಿದೆ. ಇದು ಭಾರತದಲ್ಲಿ ತನ್ನ ಸಾನಿಧ್ಯವನ್ನು ಗಟ್ಟಿಪಡಿಸಲು ಷೆವರ್ಲೆಗೆ ನೆರವಾಗಲಿದೆ.

ಷೆವರ್ಲೆ ಟ್ರೈಲ್ ಬ್ಲೇಜರ್

ನೂತನ ಷೆವರ್ಲೆ ಟ್ರೈಲ್ ಬ್ಲೇಜರ್ ಪ್ರೀಮಿಯಂ ಎಸ್ ಯುವಿ ವಿಭಾಗದಲ್ಲಿ ಗುರುತಿಸಿಕೊಳ್ಳಲಿದ್ದು, ಟೊಯೊಟಾ ಫಾರ್ಚ್ಯುನರ್, ಫೋರ್ಡ್ ಎಂಡೀವರ್ ಹಾಗೂ ಪಜೆರೊ ಸ್ಪೋರ್ಟ್ಸ್ ಗಳಂತಹ ಮಾದರಿಗಳಿಗೆ ಪ್ರಬಲ ಪೈಪೋಟಿ ಒಡ್ಡಲಿದೆ. ಅಲ್ಲದೆ ಈ ಐಷಾರಾಮಿ ಎಸ್ ಯುವಿ 25ರಿಂದ 30 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಅದೇ ಹೊತ್ತಿಗೆ ಎರಡು ವರ್ಷಗಳ ಬಳಿಕ ಬಿಡುಗಡೆಯಾಗಲಿರುವ ಸ್ಪಿನ್ ಎಂಪಿವಿ, ಮಾರುತಿ ಎರ್ಟಿಗಾ ಹಾಗೂ ಹೋಂಡಾ ಮೊಬಿಲಿಯೊ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ಇದು ಈಗ ಮಾರಾಟದಲ್ಲಿರುವ ಷೆವರ್ಲೆ ಎಂಜಾಯ್ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ.

ಷೆವರ್ಲೆ ಟ್ರೈಲ್ ಬ್ಲೇಜರ್

ಏತನ್ಮಧ್ಯೆ 2017ರಲ್ಲೇ ಬೀಟ್ ಹ್ಯಾಚ್ ಬ್ಯಾಕ್ ಮತ್ತು ನಾಚ್ ಬ್ಯಾಕ್ ಮಾದರಿಯನ್ನು ಬಿಡುಗಡೆಗೊಳಿಸುವುದಾಗಿ ಷೆವರ್ಲೆ ಘೋಷಿಸಿದೆ. ಇವೆಲ್ಲವೂ ಭಾರತದಲ್ಲಿ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಬೃಹತ್ ಹೂಡಿಕೆ ಮಾಡುವ ಷೆವರ್ಲೆಯ ಯೋಜನೆಯ ಭಾಗವಾಗಿರಲಿದೆ. ಇದಲ್ಲದೆ ಭಾರತದಲ್ಲೇ ತಯಾರಿಸಿದ ಮಾದರಿಗಳನ್ನು ಮುಂದಿನ ಐದು ವರ್ಷಗಳಲ್ಲಿ ಪರಿಚಯಿಸಲಿದೆ.
Most Read Articles

Kannada
English summary
Chevrolet unveils Trailblazer SUV and Spin MPV in India
Story first published: Thursday, July 30, 2015, 9:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X