ದೇಶದ ರಸ್ತೆಗಿಳಿದ ಶಕ್ತಿಶಾಲಿ ಅಬಾರ್ತ್ ಪುಂಟೊ, ಅವೆಂಚ್ಯುರಾ

Written By:

ದೇಶದಲ್ಲಿರುವ ತನ್ನ ಶ್ರೇಣಿಯ ವಾಹನಗಳನ್ನು ವಿಸ್ತರಿಸಿರುವ ಫಿಯೆಟ್ ಇಂಡಿಯಾ, ಶಕ್ತಿಶಾಲಿ ಅಬಾರ್ತ್ ಪುಂಟೊ ಮತ್ತು ಅಬಾರ್ತ್ ಅವೆಂಚ್ಯುರಾ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಎರಡು ಮಾದರಿಗಳ ಬೆಲೆ: 9.95 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

[ಪರಿಸರಕ್ಕೆ ತಕ್ಕ ಗಾಡಿ - ಇದುವೇ 'ಫಿಯೆಟ್ ಐ'  ಮುಂದಕ್ಕೆ ಓದಲು ಕ್ಲಿಕ್ಕಿಸಿ]

ಈ ಎರಡು ನಿರ್ವಹಣಾ ಮಾದರಿಗಳು 1.4 ಲೀಟರ್ ಟಿ-ಜೆಟ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಸಮಗ್ರ ಮಾಹಿತಿ ಹಾಗೂ ಎಕ್ಸ್ ಕ್ಲೂಸಿವ್ ಚಿತ್ರಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

To Follow DriveSpark On Facebook, Click The Like Button
ಫಿಯೆಟ್ ಅಬಾರ್ತ್ ಪುಂಟೊ

ಫಿಯೆಟ್ ಅಬಾರ್ತ್ ಪುಂಟೊ

ಫಿಯೆಟ್ ಅಬಾರ್ತ್ ಪುಂಟೊ 200 ಎನ್‌ಎಂ ತಿರುಗುಬಲದಲ್ಲಿ 145 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಫಿಯೆಟ್ ಅಬಾರ್ತ್ ಪುಂಟೊ

ಫಿಯೆಟ್ ಅಬಾರ್ತ್ ಪುಂಟೊ

ಫಿಯೆಟ್ ಅಬಾರ್ತ್ ಪುಂಟೊ ಕೇವಲ 8.8 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ ಪರಿಣಾಮಕಾರಿ 16.3 ಮೈಲೇಜ್ ಸಹ ಕಾಪಾಡಿಕೊಳ್ಳಲಿದೆ.

ಪ್ರತಿಸ್ಪರ್ಧಿ: ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಟಿಎಸ್‌ಐ

ಫಿಯೆಟ್ ಅಬಾರ್ತ್ ಅವೆಂಚ್ಯುರಾ

ಫಿಯೆಟ್ ಅಬಾರ್ತ್ ಅವೆಂಚ್ಯುರಾ

1.4 ಲೀಟರ್ ಟಿ-ಜೆಟ್ ಎಂಜಿನ್ ನಿಂದಲೇ ನಿಯಂತ್ರಿಸಲ್ಪಡುವ ಫಿಯೆಟ್ ಅಬಾರ್ತ್ ಅವೆಂಚ್ಯುರಾ 212 ಎನ್ ಎಂ ತಿರುಗುಬಲದಲ್ಲಿ 140 ಅಸ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಸಹ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ಫಿಯೆಟ್ ಅಬಾರ್ತ್ ಅವೆಂಚ್ಯುರಾ

ಫಿಯೆಟ್ ಅಬಾರ್ತ್ ಅವೆಂಚ್ಯುರಾ

ಫಿಯೆಟ್ ಅಬಾರ್ತ್ ಅವೆಂಚ್ಯುರಾ 9.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ಹಾಗೂ ಪ್ರತಿ ಲೀಟರ್ ಗೆ 16.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ದೇಶದ ರಸ್ತೆಗಿಳಿದ ಫಿಯೆಟ್ ಶಕ್ತಿಶಾಲಿ ಅಬಾರ್ತ್ ಪುಂಟೊ, ಅಬಾರ್ತ್ ಅವೆಂಚ್ಯುರಾ

ದೃಶ್ಯ ವಿಸ್ಮಯದ ಬಗ್ಗೆ ಮಾತನಾಡಿದರೆ ಈ ಎರಡು ಗರಿಷ್ಠ ನಿರ್ವಹಣೆಯ ಕಾರುಗಳಲ್ಲಿ ಎಕ್ಸ್ ಕ್ಲೂಸಿವ್ 'ಸ್ಕಾರ್ಪಿಯೊ' ಲಾಂಛನಗಳು ಕಂಡುಬರಲಿದೆ. ಉಳಿದಂತೆ 'ವೈ' ಆಕಾರದ 16 ಇಂಚುಗಳ ಸ್ಕಾರ್ಪಿಯೊ ಅಲಾಯ್ ವೀಲ್, ಬೂಟ್ ಲಿಡ್ ನಲ್ಲಿ 'ಟಿ-ಜೆಟ್' ಬ್ಯಾಡ್ಜ್ ಮತ್ತು ಕ್ರೀಡಾತ್ಮಕ ರೇಖೆಗಳು ಕಂಡುಬರಲಿದೆ.

ದೇಶದ ರಸ್ತೆಗಿಳಿದ ಫಿಯೆಟ್ ಶಕ್ತಿಶಾಲಿ ಅಬಾರ್ತ್ ಪುಂಟೊ, ಅಬಾರ್ತ್ ಅವೆಂಚ್ಯುರಾ

ಕಾರಿನೊಳಗೆ ಫ್ಯಾಬ್ರಿಕ್ ಹೋದಿಕೆ, ಕೆಂಪು ಹಾಗೂ ಹಳದಿ ಸ್ಟಿಚ್ಚಿಂಗ್, ಕ್ರೀಡಾತ್ಮಕ ಸ್ಟೀಲ್ ಪೆಡಲ್ ಮುಂತಾದವುಗಳು ಕಂಡುಬರಲಿದೆ. ಹಾಗೆಯೇ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್ ಹಾಗೂ ಇಬಿಡಿ ಪ್ರಮುಖ ಭದ್ರತಾ ವೈಶಿಷ್ಟ್ಯಗಳು ಇರಲಿದೆ.

ದೇಶದ ರಸ್ತೆಗಿಳಿದ ಫಿಯೆಟ್ ಶಕ್ತಿಶಾಲಿ ಅಬಾರ್ತ್ ಪುಂಟೊ, ಅಬಾರ್ತ್ ಅವೆಂಚ್ಯುರಾ

ಅಂತಿಮವಾಗಿ ಫಿಯೆಟ್ ಅಬಾರ್ತ್ ಪುಂಟೊ, ಹಿಪ್ ಹಾಪ್ ಬ್ಲ್ಯಾಕ್ ಮತ್ತು ಪಿಯರ್ಲ್ ವೈಟ್ ಬಣ್ಣಗಳಲ್ಲಿ ಲಭ್ಯವಿದ್ದರೆ ಅಬಾರ್ತ್ ಅವೆಂಚ್ಯುರಾ ಪಿಯರ್ಲ್ ವೈಟ್ ಮತ್ತು ಎಕ್ಸಾಟಿಕಾ ರೆಡ್ ಜೊತೆ ಹಿಂದುಗಡೆ ಡೋರ್ ಗಲ್ಲಿ ಅಬಾರ್ತ್ ಬ್ಯಾಡ್ಜ್ ಗಳಲ್ಲಿ ಆಗಮನವಾಗಲಿದೆ.

ಇವನ್ನೂ ಓದಿ

ಹ್ಯಾಚ್‌ಬ್ಯಾಕ್ ಸೀಮೆ ದಾಟಿದ ಫಿಯೆಟ್ ಅವೆಂಚ್ಯುರಾ ಮುಂದಕ್ಕೆ ಓದಿ

Read more on ಫಿಯೆಟ್ fiat
English summary
Fiat Launches Abarth Punto, Abarth Avventura in India
Story first published: Monday, October 19, 2015, 15:58 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark