ಸ್ಮಾರ್ಟ್ ಫೋನ್‌ನಿಂದ ಕಾರಿಗೂ ಬಂತು ಗೊರಿಲ್ಲಾ ಗ್ಲಾಸ್ ತಂತ್ರಜ್ಞಾನ!

Written By:

ಫೋನ್‌ಗಳ ಮುಖ್ಯ ವೈಶಿಷ್ಟ್ಯಗಳಲ್ಲಿ ಗೊರಿಲ್ಲಾ ಗ್ಲಾಸ್ ಒಂದಾಗಿದೆ. ಒರಟಾದ ಬಳಕೆಯಲ್ಲೂ ಫೋನ್ ಪರದೆಯ ಮೇಲೆ ಯಾವುದೇ ತರಹದ ಗೀಜುಗಳು ಸಂಭವಿಸಗದಂತೆ ನೋಡಿಕೊಳ್ಳುವುದು ಇದರ ಪ್ರಮುಖ ಕರ್ತವ್ಯವಾಗಿದೆ.

ಹಾಗಿರುವಾಗ ಇಷ್ಟರ ವರೆಗೆ ನಿಮ್ಮ ಹ್ಯಾಂಡ್ ಸೆಟ್ ಗಳಲ್ಲಿ ಮಾತ್ರ ಲಭ್ಯವಾಗುತ್ತಿದ್ದ ಇಂತಹದೊಂದು ಸೌಲಭ್ಯ ಕಾರಿನಲ್ಲೂ ದೊರಕಿದ್ದಲ್ಲಿ ಹೇಗಿರಬಹುದು ? ಹೌದು, ಇದಕ್ಕೊಂದು ನೈಜ ಅರ್ಥ ಕಲ್ಪಿಸಿಕೊಟ್ಟಿರುವ ಸಂಸ್ಥೆಯೇ ಫೋರ್ಡ್.

To Follow DriveSpark On Facebook, Click The Like Button
ಫೋರ್ಡ್ ಗೊರಿಲ್ಲಾ ಗ್ಲಾಸ್

ನೂತನ ಫೋರ್ಡ್ ಜಿಟಿ ಸೂಪರ್ ಕಾರಿನಲ್ಲಿ ಗೊರಿಲ್ಲಾ ಗ್ಲಾಸ್ ಹೈಬ್ರಿಡ್ ವಿಂಡ್ ಶೀಲ್ಡ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಮೆರಿಕದ ಈ ಸಂಸ್ಥೆಯು ಕಾರ್ನಿಂಗ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 2007ರ ಇಸವಿಯಿಂದಲೇ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿದ್ದು, ನೂತನ ಹೈಬ್ರಿಡ್ ವಿಂಡ್ ಶೀಲ್ಡ್ ಹೆಚ್ಚು ಹಗುರ ಹಾಗೂ ತೆಳುವಾಗಿರಲಿದೆ. ಈ ಮೂಲಕ ಲ್ಯಾಮಿನೇಟಡ್ ಗಾಜುಗಳಿಗೆ ಬದಲಿ ವ್ಯವಸ್ಥೆಯಾಗಿ ಕಂಡುಕೊಳ್ಳಲಿದೆ.

ಸಂಪ್ರದಾಯಿಕ ಆಟೋಮೋಟಿವ್ ಲ್ಯಾಮಿನೇಟಡ್ ವಿಂಡ್ ಶೀಲ್ಡ್ ಗಳಲ್ಲಿ ಎರಡು ಪದರುಗಳು ಕಂಡುಬರುತ್ತದೆ. ಅದೇ ಹೊತ್ತಿಗೆ ಗೊರಿಲ್ಲಾ ಗ್ಲಾಸ್ ಹೈಬ್ರಿಡ್ ಕಾರಿನಲ್ಲಿ ಬಹು ಪದರು ಇರಲಿದ್ದು ಹೆಚ್ಚು ಸುರಕ್ಷಿತವೆನಿಸಲಿದೆ. ಈ ಮೂಲಕ ಫೋರ್ಡ್ ಸಂಸ್ಥೆಯು ತನ್ನ ಐಕಾನಿಕ್ ಜಿಟಿ ಕಾರಿನಲ್ಲಿ ಐದು ಕೆ.ಜಿ ಭಾರವನ್ನು ಕಡಿತಗೊಳಿಸಲಿದೆ.

English summary
From Smart Phones To Supercars - Ford GT To Use Corning Gorilla Glass
Story first published: Thursday, December 17, 2015, 15:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark