ಹೊಸ ಟಾಟಾ ಬೋಲ್ಟ್ ನೀವೂ ಕೂಡಾ ಗೆಲ್ಲಬಹುದು; ಹೇಗೆ?

Posted By:

ಈಗಷ್ಟೇ ಮಾರುಕಟ್ಟೆ ತಲುಪಿರುವ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರಿನ ಪ್ರಚಾರಾರ್ಥ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ವಿನೂತನ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಮಲ್ಟಿ ಡ್ರೈವ್ ಮೋಡ್ ಪರಿಚಯಿಸಿರುವ ಟಾಟಾ ಸಂಸ್ಥೆಯು ಬೋಲ್ಟ್ ಕಾರಿನ ಮೇಲೆ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದೆ.

ನೀವೇನು ಮಾಡಬೇಕು?

ಇಂದಿನ ಆಂಗ್ಲ ದಿನಪತ್ರಿಕೆ 'ಟೈಮ್ಸ್ ಆಫ್ ಇಂಡಿಯಾ' ಖರೀದಿಸಿ. ಅದರಲ್ಲಿ ವಿಶೇಷ ಬೋಲ್ಟ್ ಮಲ್ಟಿ ಡ್ರೈವ್ ರಿವಾರ್ಡ್ಸ್ ಕಾರ್ಡ್ ನೀಡಲಾಗುತ್ತಿದ್ದು, ಇದರಂತೆ ಗ್ರಾಹಕರು ನೇರವಾಗಿ ಸಂಸ್ಥೆಯ ಅಧಿಕೃತ ಶೋ ರೂಂಗಳಿಗೆ ತೆರಳಿ ಟೆಸ್ಟ್ ಡ್ರೈವ್ ಮಾಡಬಹುದಾಗಿದೆ. ಅಲ್ಲದೆ ಅದೃಷ್ಟಶಾಲಿಗಳಿಗೆ ಟಾಟಾ ಬೋಲ್ಟ್ ಗೆಲ್ಲುವ ಅವಕಾಶವೂ ಇರುತ್ತದೆ. ಅಷ್ಟೇ ಯಾಕೆ ನಿಮ್ಮ ಅದೃಷ್ಟ ಖುಲಾಯಿಸಿತು ಅಂದರೆ ಟಾಟಾ ಮೋಟಾರ್ಸ್‌ನ ಯುರೋಪ್ ತಾಂತ್ರಿಕ ಕೇಂದ್ರಕ್ಕೂ ಪಯಣಿಸುವ ಅವಕಾಶ ನಿಮ್ಮದಾಗಲಿದೆ.

tata bolt

ಹೆಚ್ಚಿನ ಮಾಹಿತಿಗಾಗಿ 'ಬೋಲ್ಟ್ ಟೈಮ್ಸ್' 5616161 ಎಂಬ ನಂಬರ್‌ಗೆ ಎಸ್‌ಎಂಎಸ್ ಮಾಡಿ ಅಥವಾ ಟಾಟಾ ಉಚಿತ 1800 209 7979 ಕರೆ ಮಾಡಿ.

ಪಾಲ್ಗೊಳ್ಳುವವರ ಗಮನಕ್ಕೆ:

1 - ಇಂದಿನ (ಫೆಬ್ರವರಿ 03, 2015) ಟೈಮ್ಸ್ ಆಫ್ ಇಂಡಿಯಾ ಆಂಗ್ಲ ದಿನಪತ್ರಿಕೆಯಲ್ಲಿರುವ ಬೋಲ್ಟ್ ಮಲ್ಟಿ ಡ್ರೈವ್ ರಿವಾರ್ಡ್ ಕಾರ್ಡ್ ನಿಮ್ಮದಾಗಿಸಿ ನೇರವಾಗಿ ಟಾಟಾ ಅಧಿಕೃತ ಶೋ ರೂಂಗೆ ತೆರಳಿ ಬೋಲ್ಟ್ ಟೆಸ್ಟ್ ಡ್ರೈವ್‌ನಲ್ಲಿ ಭಾಗವಹಿಸಿ ಆಕರ್ಷಕ ಉಡುಗೊರೆ ಗೆಲ್ಲುವ ಅವಕಾಶ ನಿಮ್ಮದ್ದು.

2 - ಬೋಲ್ಟ್ ಮಲ್ಟಿ ಡ್ರೈವ್ ರಿವಾರ್ಡ್ ಕಾರ್ಡ್ ಯೂನಿಕ್ ಬಾರ್ ಕೋಡ್ ಹೊಂದಿರುತ್ತದೆ. ಇದನ್ನು ಟಾಟಾ ಡೀಲರುಗಳ ಬಳಿ ಸ್ಕ್ಯಾನ್ ಮಾಡಲಾಗುತ್ತದೆ. ಹಾಗೆಯೇ ಭಾಗಿಯಾಗುವವರ ವಿವರಗಳನ್ನು ಅಂಡ್ರಾಯ್ಟ್ ಅಪ್ಲಿಕ್ಲೇಷನ್ ಮೂಲಕ ಕಲೆಹಾಕಲಾಗುತ್ತದೆ.

3 - ಈ ವಿಶೇಷ ಅಭಿಯಾನದ ಕೊನೆಯ ವರೆಗೂ ರಿವಾರ್ಡ್ಸ್ ಕಾರ್ಡ್ ನಿಮ್ಮ ಬಳಿಯೇ ಇಟ್ಟುಕೊಳ್ಳತಕ್ಕದ್ದು.

4 - ವಿಜೇತರನ್ನು ಘೋಷಿಸಿದ ಬಳಿಕ ಉಡುಗೊರೆ ಪಡೆಯುವಾಗ ಈ ರಿವಾರ್ಡ್ಸ್ ಕಾರ್ಡ್ ಹಾಜರುಪಡಿಸತಕ್ಕದ್ದು.

5 - ಪಾಲುದಾರಿಕೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಪ್ರವೇಶ ಶುಲ್ಕ ವಿಧಿಸಲಾಗುವುದಿಲ್ಲ.

ಷರತ್ತುಗಳ ಸಂಪೂರ್ಣ ಮಾಹಿತಿಗಾಗಿ www.bolt.tatamotors.com ವೆಬ್‌ಸೈಟ್‌ಗೆ ಭೇಟಿ ಕೊಡಿ.

English summary
Get a chance to win Tata Bolt With Multi Drive Rewards Card
Story first published: Tuesday, February 3, 2015, 10:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark