ಉಬೆರ್‌ಗೆ ಟಕ್ಕರ್; ಬರಲಿದೆ ಗೂಗಲ್‌ ಕ್ಯಾಬ್ ಸರ್ವೀಸ್?

Written By:

ಉಬೆರ್ ಕ್ಯಾಬ್ ಸೇವೆಯಿಂದ ಆಗಿರುವ ಅನಾಹುತಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಕಳಪೆ ಸೇವೆ, ನಂಬಿಕೆಗ್ರಸ್ತ ಚಾಲಕರ ಅಭಾವ ಹೀಗೆ ಹತ್ತು ಹಲವಾರು ಆರೋಪಗಳ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಿಂದಾಗಿ ಅತಿ ಹೆಚ್ಚು ಆತಂಕಕ್ಕೆ ಕಾರಣವಾಗಿತ್ತು.

ಹೀಗೆ ಒಂದು ಕಾಲದಲ್ಲಿ ಉಬೆರ್ ಹೂಡಕೆದಾರನಾಗಿದ್ದ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನದೇ ಆದ ಆಪ್ ತಳಹದಿಯ ಕ್ಯಾಬ್ ಸರ್ವೀಸ್ ಅಭಿವೃದ್ಧಿ ಮಾಡುವ ಇರಾದೆಯಲ್ಲಿದೆ.

google

ಭವಿಷ್ಯದಲ್ಲಿ ಗೂಗಲ್‌ನಿಂದ ಬರಲಿರುವ ಚಾಲಕರಹಿತ ಕಾರು ಯೋಜನೆಯ ಮುನ್ನುಡಿಯಾಗಿ ಇದನ್ನು ಕಾಣಬಹುದಾಗಿದೆ. ಈ ಹಿಂದೆ ಉಬೆರ್‌ಗೆ 258 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿತ್ತು. ಬಳಿಕ 2013ರಲ್ಲಿ ಗೂಗಲ್‌‌ನ ಮುಖ್ಯ ಕಾನೂನು ಅಧಿಕಾರಿ ಹಾಗೂ ಕಾರ್ಪೋರೇಟ್ ಅಭಿವೃದ್ಧಿಯ ಹಿರಿಯ ಉಪಾಧ್ಯಕ್ಷರಾಗಿರುವ ಡೇವಿಡ್ ಡ್ರಮ್ಮಾಂಡ್ ಉಬೆರ್ ನಿರ್ದೇಶಕರ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

ಆದರೆ ಈಗ ಎಲ್ಲವೂ ವ್ಯತಿರಿಕ್ತ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೂಗಲ್ ಸಂಸ್ಥೆ ಉಬೆರ್ ವಿರೋಧಿ ಚಾಲನಾ ಹಂಚಿಕೆ ಸೇವೆಯನ್ನು ಆರಂಭಿಸಲಿದೆ.

ಇನ್ನೊಂದೆಡೆ ಉಬೆರ್ ಕೂಡಾ ತನ್ನದೇ ಆದ ಡ್ರೈವರ್ ಲೆಸ್ ಕಾರು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ತೊಡಗಿದೆ ಎಂಬ ಬಗ್ಗೆ ಮಾಹಿತಿ ದೊರಕಿದೆ.

English summary
Uber, has been facing quite a bit of trouble of recent, and has managed to consistently make it to the news for every possible wrong way. Now, Uber is back in the news, only this time, it is facing competition from one of the world's biggest American brand, Google.
Story first published: Friday, February 6, 2015, 9:27 [IST]
Please Wait while comments are loading...

Latest Photos