ಮುಂದಿನ ತಲೆಮಾರಿನ ಬ್ರಿಯೊ ಕಾರುಗಳು ಭಾರತದಲ್ಲೇ ಅಭಿವೃದ್ಧಿ

Written By:

ದೇಶದ ಮುಂಚೂಣಿಯ ಕಾರು ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಮುಂದಿನ ತಲೆಮಾರಿನ ಬ್ರಿಯೊ ಶ್ರೇಣಿಯ ಕಾರುಗಳನ್ನು ಭಾರತದಲ್ಲೇ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ. ಈ ಸಂಬಂಧ ಹೋಂಡಾ ಅಧಿಕೃತರಿಂದ ಮಾಹಿತಿ ಲಭಿಸಿದ್ದು, ವಿಶಾಲವಾಗಿ ಹರಡಿರುವ ಭಾರತೀಯ ಮಾರುಕಟ್ಟೆಯನ್ನು ಸಂಸ್ಥೆ ಗುರಿಯಾಗಿರಿಸಿಕೊಂಡಿದೆ.

ಹೋಂಡಾದ ಭಾರತದಲ್ಲಿರುವ ಆರ್ ಆಂಡ್ ಡಿ ತಂಡವು ನೂತನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಿದೆ. ಇವುಗಳಲ್ಲಿ ಅಮೇಜ್ ಕಾಂಪಾಕ್ಟ್ ಸೆಡಾನ್, ಮೊಬಿಲಿಯೊ ಎಂಪಿವಿ ಹಾಗೂ ಕಾಂಪಾಕ್ಟ್ ಕ್ರಾಸೋವರ್ ಅಥವಾ ಮಿನಿ ಎಸ್ ಯುವಿ ಸೇರಿಕೊಂಡಿದೆ.

ಹೋಂಡಾ ಬ್ರಿಯೊ

ಯಾವಾಗ ಹೊಸ ಮಾದರಿಗಳು ಮಾರುಕಟ್ಟೆ ಪ್ರವೇಶಸಲಿದೆ ಎಂಬುದಕ್ಕೆ ಸಂಸ್ಥೆಯಿಂದ ಸ್ಪಷ್ಟ ಉತ್ತರ ಬಂದಿಲ್ಲ. ಆದರೆ ಗ್ರಾಹಕರ ಕೈಕೆಟುಕುವ ದರಗಳಲ್ಲಿ ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುವುದು ಸಂಸ್ಥೆಯ ಇರಾದೆಯಾಗಿದೆ.

ಇನ್ನು ಬ್ರಿಯೊಗಿಂತಲೂ ಕೆಳದರ್ಜೆಯಲ್ಲಿ ಎಂಟ್ರಿ ಲೆವೆಲ್ ಕಾರು ನಿರ್ಮಾಣ ಮಾಡಲಾಗುತ್ತಿದೆಯೇ ಎಂಬುದು ಇನ್ನೂ ಅಂತಿಮವಾಗಿಲ್ಲ. ಹಾಗಾಗಿ ಸದ್ಯಕ್ಕೆ ದೇಶದಲ್ಲಿ ಹೋಂಡಾದಿಂದ ಲಭ್ಯವಾಗುವ ಅಗ್ಗದ ಕಾರು ಎಂಬ ಬಿರುದನ್ನು ಬ್ರಿಯೊ ಉಳಿಸಿಕೊಳ್ಳಲಿದೆ.

ಸಂಸ್ಥೆಯ ಗುಜರಾತ್ ಘಟಕವನ್ನು ರಫ್ತುಗಳ ಕೇಂದ್ರ ಬಿಂದುವನ್ನಾಗಿ ಮಾಡುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಇಲ್ಲಿಂದಲ್ಲೇ ಆಫ್ರಿಕಾಗಳಂತಹ ರಾಷ್ಟ್ರಗಳಿಗೆ ರವಾನೆಯಾಗಲಿದೆ. ಇಡೀ ವಿಶ್ವದಲ್ಲೇ 4ನೇ ಅತಿದೊಡ್ಡ ಮಾರುಕಟ್ಟೆಯನ್ನು ಸಂಸ್ಥೆ ಹೊಂದಿದ್ದು, ಈಗಿನ ಬೇಡಿಕೆಯನ್ನು ಪರಿಗಣಿಸಿದರೆ ಇದು ಇನ್ನು ಸುಧಾರಣೆಯಾಗುವ ನಿರೀಕ್ಷೆಯಿದೆ.

Read more on ಹೋಂಡಾ honda brio
English summary
The manufacturer is also planning on introducing an all-new compact SUV that will be based on their Brio hatchback.
Story first published: Monday, June 1, 2015, 9:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark