2014 ಹ್ಯುಂಡೈ ಪಾಲಿಗೆ ಅತ್ಯಂತ ಯಶಸ್ಸಿನ ವರ್ಷ

Written By:

ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ ಸಂಸ್ಥೆಯು ನಿರಂತರ ಅಂತರಾಳದಲ್ಲಿ ದೇಶಕ್ಕೆ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಇದೀಗ 2014ನೇ ಸಾಲನ್ನು ಅಲಲೋಕಿಸಿರುವ ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆಯು ಅತ್ಯಂತ ಯಶಸ್ವಿ ವರ್ಷ ಎಂದು ಬಣ್ಣಿಸಿದೆ.

ದೇಶದ ಎರಡನೇ ಹಾಗೂ ಅತಿ ದೊಡ್ಡ ರಫ್ತುದಾರ ಸಂಸ್ಥೆಯಾಗಿರುವ ಹ್ಯುಂಡೈ, 2014ರಲ್ಲಿ 4.10 ಲಕ್ಷ ಹೆಚ್ಚು ಯುನಿಟ್‌ಗಳ ಮಾರಾಟ ಸಾಧಿಸಿತ್ತು. ಈ ಮೂಲಕ ದೇಶದಲ್ಲಿ ಕಳೆದ 16 ವರ್ಷಗಳಲ್ಲಿ ಸಾನಿಧ್ಯ ಹೊಂದಿರುವ ಹ್ಯುಂಡೈ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಂದರೆ ಶೇ. 21.6ರಷ್ಟು ಮಾರಾಟ ಶೇರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

To Follow DriveSpark On Facebook, Click The Like Button
hyundai

ಹ್ಯುಂಡೈ ಯಶಸ್ಸಿನಲ್ಲಿ ಗ್ರಾಂಡ್ ಐ10, ಎಕ್ಸ್‌ಸೆಂಟ್ ಹಾಗೂ ಎಲೈಟ್ ಐ20 ಪಾತ್ರ ನಿರ್ಣಾಯಕವೆನಿಸಿತ್ತು. ಈ ಪೈಕಿ ಎಲೈಟ್ ಐ20 'ಭಾರತದ ವರ್ಷದ ಕಾರು 2015' ಪ್ರಶಸ್ತಿಗೂ ಭಾಜನವಾಗಿತ್ತು.

ದೇಶದ ಅತ್ಯಂತ ನಂಬಿಕೆಗ್ರಸ್ತ ವಾಹನ ಸಂಸ್ಥೆಗಳಲ್ಲಿ ಒಂದಾಗಿರುವ ಹ್ಯುಂಡೈ 3.5 ಮಿಲಿಯನ್ ಸಂತುಷ್ಟ ಕುಟುಂಬವನ್ನು ಹೊಂದಿದೆ. ಅಲ್ಲದೆ ತನ್ನ ಚೆನ್ನೈ ಘಟಕದಿಂದ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಕಾರ್ಯವನ್ನು (ಒಟ್ಟು ರಫ್ತಿನ ಶೇ. 40ರಷ್ಟು) ಹಮ್ಮಿಕೊಂಡಿದೆ.

English summary
Hyundai Motor India Ltd, the country's second largest car manufacturer and the largest passenger car exporter has marked year 2014 as the "Year of Excellence" in India. Hyundai Motor India has set record sales in 2014 at over 4.10 lakh units driven by growth across segments.
Story first published: Thursday, January 1, 2015, 17:25 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark