ದಾಖಲೆ ವೇಗದಲ್ಲಿ ಚಲಿಸಿದ ದೇಶದ ಅತಿ ವೇಗದ ರೈಲು!

By Nagaraja

ದೇಶದ ಅತಿ ವೇಗದ ರೈಲಿನ ಆರನೇ ಹಾಗೂ ಕೊನೆಯ ಹಂತದ ಪ್ರಾಯೋಗಿಕ ಸಂಚಾರ ಪರೀಕ್ಷೆ ಯಶಸ್ವಿಯಾಗಿ ನೆರವೇರಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಐತಿಹಾಸಿಕ ನಗರ ಆಗ್ರಾ ನಡುವೆ ಸಂಪರ್ಕ ಕಲ್ಪಿಸುವ ದೇಶದ ಅತಿ ವೇಗದ 'ಗತಿಮಾನ್' (Gatimaan) ರೈಲು ಸದ್ಯದಲ್ಲೇ ಲೋಕಾರ್ಪಣೆಯಾಗಲಿದೆ.

ಇವನ್ನೂ ಓದಿ: ದೇಶದ ಟಾಪ್ 10 ಅತಿ ವೇಗದ ರೈಲುಗಳು

2015 ಜೂನ್ ಎರಡನೇ ವಾರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಸಿರು ಬಾವುಟ ಹಾರಿಸಿ ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಸೂಚನೆಯನ್ನು ನೀಡಿದ್ದು, ಇದು ಪ್ರಧಾನಿ ಅವರ ಬುಲೆಟ್ ರೈಲಿನ ಕನಸಿನ ಭಾಗವಾಗಿರಲಿದೆ.

ದಾಖಲೆ ವೇಗದಲ್ಲಿ ಚಲಿಸಿದ ದೇಶದ ಅತಿ ವೇಗದ ರೈಲು!

ನಿಮಗೆ ಗತಿಮಾನ್ ರೈಲಿನ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲದಿದ್ದಲ್ಲಿ ಈ ಬಗ್ಗೆ ಚುಟುಕಾಗಿ ವಿವರಿಸುವ ಪ್ರಯತ್ನ ನಾವು ಮಾಡಲಿದ್ದೇವೆ. ದೇಶದ ಮೊದಲ ಸೆಮಿ ಹೈ-ಸ್ಪೀಡ್ ರೈಲು ಇದಾಗಿದೆ.

ದಾಖಲೆ ವೇಗದಲ್ಲಿ ಚಲಿಸಿದ ದೇಶದ ಅತಿ ವೇಗದ ರೈಲು!

ಇದು ದೆಹಲಿ-ಆಗ್ರಾ ನಡುವಣ 195 ಕೀ.ಮೀ. ದೂರವನ್ನು ಕೇವಲ 115 ನಿಮಿಷಗಳಲ್ಲೇ ಕ್ರಮಿಸಲಿದೆ. ಅಂದರೆ ಗಂಟೆಗೆ 160 ಕೀ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಹೊಸ ಸೇವೆಯಿಂದಾಗಿ ದೆಹಲಿ-ಆಗ್ರಾ ನಡುವಣ ಪಯಣದ ಅವಧಿಯು 30 ನಿಮಿಷಗಳಷ್ಟು ಇಳಿಕೆಯಾಗಲಿದೆ.

ದಾಖಲೆ ವೇಗದಲ್ಲಿ ಚಲಿಸಿದ ದೇಶದ ಅತಿ ವೇಗದ ರೈಲು!

5,400 ಎಚ್‌ಪಿ ರೈಲು ಎಂಜಿನ್ ಹೊಂದಿರುವ ಈ ರೈಲಿನಲ್ಲಿ 12 ಆಧುನಿಕ ಕೋಚ್ ಗಳಿರುತ್ತದೆ. ಹಾಗಿದ್ದರೂ ಕೊನೆಯ ಪ್ರಾಯೋಗಿಕ ಸಂಚಾರದಲ್ಲಿ ನಿಗದಿತ 105 ನಿಮಿಷಗಿಂತ 10 ನಿಮಿಷ ತಡವಾಗಿ ರೈಲು ತಲುಪಿತ್ತು.

ದಾಖಲೆ ವೇಗದಲ್ಲಿ ಚಲಿಸಿದ ದೇಶದ ಅತಿ ವೇಗದ ರೈಲು!

ಉತ್ತರ ರೈಲ್ವೆ ಪರಿಧಿಯಲ್ಲಿ ಬರುವ ಗತಿಮಾನ್ ಹೈ ಸ್ಪೀಡ್ ರೈಲು, ಯಾವುದೇ ಕ್ಷಣ ಬೇಕಾದರೂ ತನ್ನ ಯಾತ್ರೆಯನ್ನು ಆರಂಭಿಸಲಿದೆ. ವಿಶೇಷವೆಂದರೆ 195 ಕೀ.ಮೀ. ಯಾತ್ರೆಯ ನಡುವೆ ಯಾವುದೇ ನಿಲುಗಡೆಯಿರುವುದಿಲ್ಲ.

ದಾಖಲೆ ವೇಗದಲ್ಲಿ ಚಲಿಸಿದ ದೇಶದ ಅತಿ ವೇಗದ ರೈಲು!

ಇಲ್ಲಿ ಕುತೂಹಲದಾಯಕ ವಿಚಾರವೆಂದರೆ ಈಗ ಓಡಾಡುತ್ತಿರುವ ದೇಶದ ಅತಿ ವೇಗದ ಭೋಪಾಲ ಶತಾಬ್ದಿ ರೈಲು ಇದೇ ದೂರವನ್ನು 2 ಗಂಟೆ ಆರು ನಿಮಿಷಗಳಲ್ಲಿ ಕ್ರಮಿಸುತ್ತದೆ. ಇದು ಮಥುರಾದಲ್ಲಿ ಎರಡು ನಿಮಿಷಗಳ ತಂಗುದಾಣ ಹೊಂದಿದೆ.

ದಾಖಲೆ ವೇಗದಲ್ಲಿ ಚಲಿಸಿದ ದೇಶದ ಅತಿ ವೇಗದ ರೈಲು!

ಇನ್ನು ರೈಲಿನ ದರ ಹಾಗೂ ವೇಳಾಪಟ್ಟಿ ಈಗಾಗಲೇ ಬಿಡುಗಡೆಗೊಂಡಿದ್ದು, ಈಗಿರುವ ಶತಾಬ್ದಿ ರೈಲಿಗಿಂತಲೂ ಪ್ರಯಾಣಿಕರು ಶೇಕಡಾ 25ರಷ್ಟು ಹೆಚ್ಚು ಹಣವನ್ನು ಪಾವತಿಸಬೇಕಾಗಿದೆ. ಎಸಿ ಚೇರ್ ಕಾರ್‌ 690 ರು. ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್ ಪಯಣ 1365 ರು.ಗಳಷ್ಟು ದುಬಾರಿಯೆನಿಸಲಿದೆ. ಇನ್ನೊಂದೆಡೆ ಶತಾಬ್ದಿಯಲ್ಲಿ ಚೇರ್ ಕಾರ್ 540 ರು. ಹಾಗೂ ಎಕ್ಸಿಕ್ಯೂಟಿವ್ ಗಾಗಿ 1040 ರು. ಪಾವತಿಸಬೇಕಾಗಿದೆ.

ದಾಖಲೆ ವೇಗದಲ್ಲಿ ಚಲಿಸಿದ ದೇಶದ ಅತಿ ವೇಗದ ರೈಲು!

ಬೆಳಗ್ಗೆ 8ಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಪಯಣ ಆರಂಭಿಸಲಿರುವ ರೈಲು 9.45ಕ್ಕೆ ಆಗ್ರಾ ತಲುಪಲಿದೆ. ಬಳಿಕ ಸಂಜೆ 5.30ಕ್ಕೆ ಆಗ್ರಾದಿಂದ ಹಿಂತಿರುಗಲಿರುವ ರೈಲು ಸಂಜೆ 7.15ರ ವೇಳೆಗೆ ದೆಹಲಿಯನ್ನು ತಲುಪಲಿದೆ.


Most Read Articles

Kannada
Read more on ದೆಹಲಿ delhi
English summary
India’s fastest train completes final test run in record time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X