ಟಾಟಾ ನ್ಯಾನೋ: 15 ಆಸಕ್ತಿದಾಯಕ ಸತ್ಯಗಳು

Written By:

ಟಾಟಾ ನ್ಯಾನೋ ಎಂದು ನೆನಪಿಸಿಕೊಂಡಾಗ ನಮ್ಮ ಮನಸ್ಸಿನಲ್ಲಿ ಹೊಳೆಯುವ ವಿಷಯಗಳೆಂದರೆ ವಿಶ್ವದ ಅತ್ಯಂತ ಅಗ್ಗದ ಕಾರು, ವಾಹನ ಜಗತ್ತಿನಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದ ಕಾರು, ರತನ್ ಟಾಟಾ ಅವರ ಕನಸಿನ ಕೂಸು, ಜನಸಾಮಾನ್ಯ ಕಾರು, ಹೀಗೆ ಹತ್ತು ಹಲವಾರು ಅಂಶಗಳ ಬಗ್ಗೆ ಪಟ್ಟಿ ಮಾಡಬಹುದು.

ಅಷ್ಟಕ್ಕೂ ಟಾಟಾ ನ್ಯಾನೋದಲ್ಲಿ ಪವರ್ ಸ್ಟೀರಿಂಗ್, ಪವರ್ ವಿಂಡೋ, ಎಸಿ ಮುಂತಾದ ಸೌಲಭ್ಯಗಳಿವೆ ಎಂಬುದು ನಿಮಗೆ ಗೊತ್ತಿದೆಯೇ? ಹೀಗೆ ದೇಶದ ಅತಿ ಚಿಕ್ಕ ಕಾರಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ 15 ಆಸಕ್ತಿದಾಯಕ ಸತ್ಯಗಳ ಬಗ್ಗೆ ನಾವಿಲ್ಲಿ ಪಟ್ಟಿ ಮಾಡಿಕೊಡಲಿದ್ದೇವೆ.

15. ಪವರ್ ಸ್ಟೀರಿಂಗ್

15. ಪವರ್ ಸ್ಟೀರಿಂಗ್

ನಿಮಗಿದು ಗೊತ್ತೇ ಟಾಟಾ ನ್ಯಾನೋ ಬಿಡುಗಡೆಯಾದ ಸಂದರ್ಭದಲ್ಲಿ ಪವರ್ ಸ್ಟೀರಿಂಗ್ ಇರಲಿಲ್ಲ. ಇಂತಹದೊಂದು ಸೌಲಭ್ಯ ತಾಜಾ ಬಿಡುಗಡೆಯಾದ ಟಾಟಾ ಟ್ವಿಸ್ಟ್ ಮುಖಾಂತರ ಪಡೆದುಕೊಂಡಿತ್ತು.

14. ಬೇಸಿಕ್ ಫೀಚರ್ ಅಲಭ್ಯ

14. ಬೇಸಿಕ್ ಫೀಚರ್ ಅಲಭ್ಯ

ಅಷ್ಟೇ ಯಾಕೆ ಸ್ಟ್ಯಾಂಡರ್ಡ್ ನ್ಯಾನೋದಲ್ಲಿ ಎಸಿಯಾಗಲಿ, ಪವರ್ ವಿಂಡೋ ಅಥವಾ ಮ್ಯೂಸಿಕ್ ಸಿಸ್ಟಂ ಸೇವೆ ಕೂಡಾ ಲಭ್ಯವಿರಲಿಲ್ಲ.

13. ಗಿನ್ನೆಸ್ ದಾಖಲೆ

13. ಗಿನ್ನೆಸ್ ದಾಖಲೆ

2009ನೇ ಇಸವಿಯಲ್ಲಿ ಟಾಟಾ ನ್ಯಾನೋ 'ವಿಶ್ವದ ಅತಿ ಅಗ್ಗದ ಕಾರು' ಕಾರು ಎಂಬ ಪಟ್ಟಕ್ಕಾಗಿ ಗಿನ್ನೆಸ್ ಪುಟವನ್ನು ಸೇರಿತ್ತು.

12. ಹೆಚ್ಚಿನ ಸ್ಥಳಾವಕಾಶ

12. ಹೆಚ್ಚಿನ ಸ್ಥಳಾವಕಾಶ

ಬಂಪರ್ ಟು ಬಂಪರ್ ಅಳತೆ ಮಾಡಿದಾಗ ನ್ಯಾನೋ ಕಾರು ಮಾರುತಿಯ ಜನಪ್ರಿಯ ಅಲ್ಟೊ 800ಗಿಂತಲೂ ಕಡಿಮೆ ಆಯಾಮವನ್ನು ಪಡೆದುಕೊಂಡಿದೆ. ಆದರೆ ಕಾರಿನೊಳಗಡೆ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸುತ್ತಿದೆ.

11. ಬೋಲ್ಟ್

11. ಬೋಲ್ಟ್

ನ್ಯಾನೋ ಕಾರಿನ ಚಕ್ರದಲ್ಲಿ ಮೂರು ಬೋಲ್ಟ್ ಮಾತ್ರ ಜೋಡಣೆ ಮಾಡಲಾಗಿದೆ. ಸಾಮಾನ್ಯ ಇತರ ಕಾರುಗಳಲ್ಲಿ ಇದರ ಸಂಖ್ಯೆ ನಾಲ್ಕರಿಂದ ಐದರಷ್ಟಿರುತ್ತದೆ.

10. ಢಿಕ್ಕಿ ಡೋರ್ ಇಲ್ಲ

10. ಢಿಕ್ಕಿ ಡೋರ್ ಇಲ್ಲ

ನ್ಯಾನೋ ಕಾರಿಗೆ ತೆರೆಯಬಹುದಾದ ಢಿಕ್ಕಿ ಡೋರ್ ಗಳಿಲ್ಲ. ಕಾರಿನ ವೆಚ್ಚ ಕಡಿಮೆ ನಿಟ್ಟಿನಲ್ಲಿ ಟಾಟಾ ಇಂತಹದೊಂದು ನೀತಿ ಅನುಸರಿಸಿತ್ತು. ಭವಿಷ್ಯದ ನ್ಯಾನೋ ಆಟೋಮ್ಯಾಟಿಕ್ ಕಾರಿನಲ್ಲಿ ಇಂತಹದೊಂದು ಸೇವೆ ಲಭ್ಯವಾಗಲಿದೆ.

09. ನ್ಯಾನೋಗೆ ಇಂಧನ ತುಂಬಿಸುವುದು ಹೇಗೆ?

09. ನ್ಯಾನೋಗೆ ಇಂಧನ ತುಂಬಿಸುವುದು ಹೇಗೆ?

ಟಾಟಾ ನ್ಯಾನೋ ಕಾರಿನ ಇಂಧನ ಟ್ಯಾಂಕ್ ಎಲ್ಲಿದೆ ಗೊತ್ತೇ? ಇದಕ್ಕೆ ಇಂಧನ ತುಂಬಿಸುವುದು ಹೇಗೆ? ಹೌದು, ಸಾಮಾನ್ಯ ಕಾರುಗಿಂತಲೂ ವಿರುದ್ಧವಾಗಿ ಮುಂಭಾಗದಲ್ಲಿ ಇಂಧನ ಟ್ಯಾಂಕ್ ಹೊಂದಿರುವ ನ್ಯಾನೋ ಕಾರಿನ ಬೊನೆಟ್ ಓಪನ್ ಮಾಡಿಕೊಂಡು ಇಂಧನ ತುಂಬಿಸಬೇಕಾಗುತ್ತದೆ. ಇದು ಸಹ ವೆಚ್ಚ ಕಡಿತದ ಭಾಗವಾಗಿತ್ತು.

08. ಹೆಚ್ಚುವರಿ ಚಕ್ರ

08. ಹೆಚ್ಚುವರಿ ಚಕ್ರ

ಅದಿರಲಿ ನ್ಯಾನೋ ಕಾರಿನ ಸ್ಪೇರ್ ವೀಲ್ ಅಥವಾ ಹೆಚ್ಚುವರಿ ಚಕ್ರ ಎಲ್ಲಿ ಸ್ಥಿತಗೊಂಡಿದೆ ಅಂಥ ಹೇಳಬಹುದೇ? ಇದು ಇತರ ಕಾರುಗಳ ಹಾಗೆ ಹಿಂದುಗಡೆ ಅಥವಾ ಕಾರಿನಡಿಯಲ್ಲಲ್ಲ. ಬದಲಾಗಿ ಮುಂಭಾಗದ ಬೊನೆಟ್ ಒಳಗಡೆ ಇಡಲಾಗಿದೆ. ತೆರೆದು ನೋಡಿದರೆ ನಿಮಗೂ ಕಾಣಬಹುದು.

07. ಪವರ್ ವಿಂಡೋ ಸ್ವಿಚ್

07. ಪವರ್ ವಿಂಡೋ ಸ್ವಿಚ್

ಅದೇ ರೀತಿ ವೆಚ್ಚ ಕಡಿತದ ಭಾಗವಾಗಿ ನ್ಯಾನೋ ಪವರ್ ವಿಂಡೋ ಸ್ವಿಚ್ ಗಳನ್ನು ಚಾಲಕ ಹಾಗೂ ಪ್ರಯಾಣಿಕ ಸೀಟುಗಳ ಮಧ್ಯ ಭಾಗದಲ್ಲಿ ಕೊಡಲಾಗಿದೆ.

06. ಗ್ರೌಂಡ್ ಕ್ಲಿಯರನ್ಸ್

06. ಗ್ರೌಂಡ್ ಕ್ಲಿಯರನ್ಸ್

ನ್ಯಾನೋ ಸಣ್ಣ ಕಾರೆಂದು ಯಾರು ಹೇಳಿರುವುದು? ಇದರ ಗ್ರೌಂಡ್ ಕ್ಲಿಯರನ್ಸ್ ಎಷ್ಟು ಗೊತ್ತೇ? ಅದುವೇ 180 ಎಂಎಂ. ಇದು ಮಹೀಂದ್ರ ಬೊಲೆರೊ ಅಥವಾ ಸ್ಕಾರ್ಪಿಯೊಗೆ ಸಮಾನ ಅಂದರೆ ನಂಬಲಾರ್ಹವೇ?

05. ಡ್ಯಾಶ್ ಬೋರ್ಡ್

05. ಡ್ಯಾಶ್ ಬೋರ್ಡ್

ನ್ಯಾನೋ ಕಾರಿನ ಮಧ್ಯ ಭಾಗದಲ್ಲಿ ಸೆಂಟ್ರೆಲ್ ಮೌಂಟೆಡ್ ಕನ್ಸೋಲ್ ಕೊಡಲಾಗಿದೆ. ಇದು ಕೂಡಾ ವೆಚ್ಚ ಕಡಿತದ ಭಾಗವಾಗಿದ್ದು, ಬೇಡಿಕೆಗೆ ಅನುಸಾರವಾಗಿ ಸ್ಟೀರಿಂಗ್ ಅನ್ನು ಎಡ ಅಥವಾ ಬಲಬದಿಗೆ ವರ್ಗಾಯಿಸಬಹುದಾಗಿದೆ. ಇದು ನ್ಯಾನೋ ರಫ್ತು ಯೋಜನೆಯ ಭಾಗವಾಗಿದೆ.

04. ಹಕ್ಕುಪತ್ರ

04. ಹಕ್ಕುಪತ್ರ

ನ್ಯಾನೋದಲ್ಲಿ ಬಳಕೆ ಮಾಡಲಾದ ನಾವೀನ್ಯತೆಯ ತಂತ್ರಜ್ಞಾನಗಳಿಗಾಗಿ ಟಾಟಾ ಸಂಸ್ಥೆಯು ಸಂಪೂರ್ಣ ಸ್ವಾಮ್ಯದ 34 ಹಕ್ಕುಪತ್ರಗಳಿಗಾಗಿ ಅರ್ಜಿ ಸಲ್ಲಿಸಿತ್ತು.

03. ಅಗ್ಗದ ಕಾರಲ್ಲ

03. ಅಗ್ಗದ ಕಾರಲ್ಲ

ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗಿರುವ ಹಿನ್ನೆಲೆಯಲ್ಲಿ ವಿಶ್ವದ ಅಗ್ಗದ ಕಾರೆಂಬ ಬ್ರಾಂಡ್ ಹೆಸರಿನ ಮಾರಾಟ ತಂತ್ರವನ್ನು ಟಾಟಾ ಸಂಸ್ಥೆ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದೆ.

 02. ವೆಲ್ಡಿಂಗ್

02. ವೆಲ್ಡಿಂಗ್

ವೆಲ್ಡಿಂಗ್ ದುಬಾರಿಯಾಗಿರುವುದರಿಂದ ನ್ಯಾನೋ ನಿರ್ಮಾಣದ ವೇಳೆ ಇದರ ಬಳಕೆ ಕಡಿಮೆ ಮಾಡಲಾಗಿದೆ. ಇದರ ಬದಲು ಪ್ಲಾಸ್ಟಿಕ್ ಹಾಗೂ ಅಂಟಿಕೊಳ್ಳುವ ಉಪಕರಣಗಳನ್ನು ಬಳಕೆ ಮಾಡಲಾಗಿದೆ.

01. ನ್ಯಾನೋ ಉಗಮ

01. ನ್ಯಾನೋ ಉಗಮ

ಗುಜರಾತ್ ನಲ್ಲಿ ನ್ಯಾನೋ ಅಂದರೆ ಸಣ್ಣ ಅಥವಾ ಚಿಕ್ಕದು ಎಂಬ ಅರ್ಥ ಬರುತ್ತದೆ. ಇದರಿಂದಲೇ ನ್ಯಾನೋ ತಂತ್ರಜ್ಞಾನ ಹುಟ್ಟಿಕೊಂಡಿದೆ.

English summary
15 interesting and amazing facts about the Tata Nano. This car has more than what meets the eye. These 15 facts will change the way you look at the Nano
Story first published: Friday, April 10, 2015, 10:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark