ಎಲೆಕ್ಟ್ರಿಕ್ ಕಾರು ನಿರ್ಮಿಸಲಿರುವ ಜಾಗ್ವಾರ್ ಲ್ಯಾಂಡ್ ರೋವರ್

By Nagaraja

ಜಾಗ್ವಾರ್, ಲ್ಯಾಂಡ್ ರೋವರ್, ನಾಲ್ಕು ಚಕ್ರದ ವಾಹನ, ಎಲೆಕ್ಟ್ರಿಕ್ ವಾಹನ, jaguar, land rover, four wheeler, auto news, electric vehicle

ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್‌ನ ಐಕಾನಿಕ್ ಜಾಗ್ವಾರ್ ಲ್ಯಾಂಡ್ ರೋವರ್ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ಚಾಲನೆ ನೀಡಲಿದೆ.

jaguar land rover electric vehicle

ಆದರೆ ಈ ಮಹತ್ತರ ಯೋಜನೆಯು ತವರೂರಾದ ಬ್ರಿಟನ್ ಅಥವಾ ಭಾರತದಲ್ಲಿ ಅಲ್ಲ. ಬದಲಾಗಿ ತನ್ನ ಚೊಚ್ಚಲ ಎಲೆಕ್ಟ್ರಿಕ್ ಕಾರನ್ನು ಆಸ್ಟ್ರೀಯಾದಲ್ಲಿ ನಿರ್ಮಿಸುವ ಇರಾದೆ ಹೊಂದಿದೆ.

ಕಳೆದ ಹಲವಾರು ದಶಕಗಳಿಂದ ಲಗ್ಷುರಿ ಕಾರುಗಳಿಗೆ ಹೆಸರು ಮಾಡಿರುವ ಜಾಗ್ವಾರ್ ಲ್ಯಾಂಡ್ ರೋವರ್ ಭವಿಷ್ಯದತ್ತ ಇಡುತ್ತಿರುವ ದಿಟ್ಟ ಹೆಜ್ಜೆ ಇದಾಗಿರಲಿದೆ. ಅಲ್ಲದೆ ಮುಂದಿನ ವರ್ಷದಿಂದಲೇ ಈ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸಲಿದೆ.

ಇದರೊಂದಿಗೆ ಜಗತ್ತಿನ ಮುಂಚೂಣಿಯ ಸಂಸ್ಥೆಗಳೊಂದಿಗೆ ಜಾಗ್ವಾರ್ ಹೆಸರಿಸಿಕೊಳ್ಳಲಿದೆ. ಅಮೆರಿಕದ ಟೆಸ್ಲಾದಂತಹ ಸಂಸ್ಥೆಗಳು ಈಗಾಗಲೇ ಎಲೆಕ್ಟ್ರಿಕ್ ವಾಹನ ನಿರ್ಮಾಣದಲ್ಲಿ ಭಾರಿ ಹೆಸರು ಮಾಡಿದೆ.

ಹಾಗಿದ್ದರೂ ಬಿಎಂಡಬ್ಲ್ಯು ಐ8 ಹಾಗೂ ಐ3 ಮಾದರಿಗಳಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಮಾದರಿ ಅಥವಾ ಹೈಬ್ರಿಡ್ ಮಾದರಿಯನ್ನು ಜೆಎಲ್‌ಆರ್ ನಿರ್ಮಿಸಲಿದೆಯೇ ಎಂಬುದು ಇನ್ನು ಖಚಿತಗೊಂಡಿಲ್ಲ. ಹಾಗೊಂದು ವೇಳೆ ಜಾಗ್ವಾರ್ ಲ್ಯಾಂಡ್ ರೋವರ್ ಈ ನೂತನ ಯೋಜನೆ ಯಶಸ್ವಿಯಾದ್ದಲ್ಲಿ ವಾಹನೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಲಿದೆ.

Most Read Articles

Kannada
English summary
Jaguar Land Rover is planning production of electric vehicles in Austria.
Story first published: Tuesday, March 10, 2015, 9:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X