ಮಾ.11ರಂದು ಮರ್ಸಿಡಿಸ್ ಬೆಂಝ್ ಬಿ ಕ್ಲೂಸ್ ಟೂರರ್ ಲಾಂಚ್

Written By:

ಜರ್ಮನಿಯ ಪ್ರೀಮಿಯಂ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, 2015 ಮಾರ್ಚ್ 11ರಂದು ಬಿ ಕ್ಲಾಸ್ ಟೂರರ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.

2014 ಪ್ಯಾರಿಸ್ ಮೋಟಾರು ಶೋದಲ್ಲಿ ಪಾದಾರ್ಪಣೆ ಮಾಡಿದ್ದ ಬೆಂಝ್ ಬಿ ಕ್ಲಾಸ್ ಟೂರರ್ ಈಗಾಗಲೇ ಜಾಗತಿಕ ಮಾರುಕಟ್ಟೆಯನ್ನು ಪ್ರೇವಶಿಸಿದ್ದು, ಇದರ ಮುಂದುವರಿದ ಭಾಗವೆಂಬಂತೆ ಭಾರತವನ್ನು ಪ್ರವೇಶಿಸುತ್ತಿದೆ.

To Follow DriveSpark On Facebook, Click The Like Button
mercedes benz b class tourer

ಕಳೆದ ವರ್ಷದಂತೆ ಈ ಬಾರಿಯೂ ದೇಶಕ್ಕೆ ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸುವುದರಲ್ಲಿ ಬೆಂಝ್ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಈಗ ಬಿಡುಗಡೆಯಾಗಲಿರುವ ಬಿ ಕ್ಲಾಸ್ ಟೂರರ್ ಮಾದರಿಯು ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಇನ್ನು ಹಿಂದುಗಡೆ ಎಲ್‌ಇಡಿ ಬೈ ಕಲರ್ ಟೈಲ್ ಲೈಟ್ಸ್ ಹಾಗೂ ಎಕ್ಸಾಸ್ಟ್ ಕೊಳವೆಗಳನ್ನು ಕಾಣಬಹುದಾಗಿದೆ. ಇನ್ನು ಹೆಚ್ಚು ಕ್ರೀಡಾತ್ಮಕ ಹಾಗೂ ಯುವ ಜನಾಂಗವನ್ನು ಆಕರ್ಷಿಸುವತ್ತ ಬೆಂಝ್ ಹೆಚ್ಚು ಗಮನ ಕೇಂದ್ರಿಕರಿಸಿದೆ.

mercedes benz b class tourer

ಎಂಜಿನ್ ತಾಂತ್ರಿಕತೆ

1.6 ಲೀಟರ್ ಪೆಟ್ರೋಲ್ - 120 ಅಶ್ವಶಕ್ತಿ, 200 ತಿರುಗುಬಲ, 7 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

2143 ಸಿಸಿ ಡೀಸೆಲ್ - 107 ಅಶ್ವಶಕ್ತಿ, 250 ತಿರುಗುಬಲ, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್.

English summary
German luxury car manufacturer, Mercedes-Benz will be launching its refreshed B-Class tourer in India tomorrow 11th March, 2015.
Story first published: Tuesday, March 10, 2015, 15:51 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark