ಆಗಸ್ಟ್ ಬಂಪರ್; ಲೀಟರ್‌ಗೆ ಪೆಟ್ರೋಲ್ 2.43, ಡೀಸೆಲ್ 3.60 ಕಡಿತ

Written By:

ಶುಕ್ರವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕೃತಗೊಳಿಸಲಾಗಿದೆ. ಹೊಸ ಬೆಲೆ ನೀತಿಯಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಅನುಕ್ರಮವಾಗಿ 2.43 ಮತ್ತು 3.60 ರುಪಾಯಿ ಇಳಿಕೆಯಾಗಲಿದೆ. ಪ್ರಸ್ತುತ ಬೆಲೆ ಸ್ಥಳೀಯ ತೆರಿಗೆ ನೀತಿಯಿಂದ ಹೊರತಾಗಿರಲಿದೆ.

2015 ಜುಲೈ ತಿಂಗಳಲ್ಲಿ ಇದು ಮೂರನೇ ಬಾರಿಗೆ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಅಲ್ಲದೆ ಆಗಸ್ಟ್ 1ರಿಂದಲೇ ಹೊಸ ಬೆಲೆ ನೀತಿ ಜಾರಿಗೆ ಬಂದಿದ್ದು, ಗ್ರಾಹಕರಿಗೆ ಬಂಪರ್ ಲಭಿಸಿದಂತಾಗಿದೆ.

ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ

ಈ ಹಿಂದೆ ಜುಲೈ 16ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು 2 ರು.ಗಳಷ್ಟು ಇಳಿಕೆಯಾಗಿತ್ತು. ಆದರೆ ಸ್ಥಳೀಯ ತೆರಿಗೆಯನ್ನು ಹೆಚ್ಚಿಸಿದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಲೆ ಕಡಿತದ ಬದಲು 28 ಪೈಸೆ ಹೆಚ್ಚಳವಾಗಿತ್ತು. ಇದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವಿರುದ್ಧ ಭಾರಿ ಟೀಕೆಗೆ ಕಾರಣವಾಗಿತ್ತು.

ಇದರ ಹೊರತಾಗಿ ಸಬ್ಸಿಡಿ ರಹಿತ 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಂಡರ್ ಬೆಲೆಯಲ್ಲೂ 23.50 ರು. ಇಳಿಕೆ ಕಂಡುಬಂದು 585 ರುಪಾಯಿಗಳಿಗೆ ತಲುಪಿದೆ.

English summary
Petrol price cut by Rs 2.43 per litre; diesel by Rs 3.60
Story first published: Saturday, August 1, 2015, 9:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark