ಅತಿ ಶೀಘ್ರದಲ್ಲೇ ರೇಂಜ್ ರೋವರ್ ಇವೊಕ್ ಬಿಡುಗಡೆ

Written By:

ಬಹುನಿರೀಕ್ಷಿತ ರೇಂಜ್ ರೋವರ್ ಇವೊಕ್ ಫೇಸ್ ಲಿಫ್ಟ್ ಮಾದರಿಯು ಇದೇ ಮುಂಬರುವ 2015 ನವೆಂಬರ್ 19ರಂದು ಬಿಡುಗಡೆಯಾಗಲಿದೆ. ಸಂಸ್ಥೆಯ ಪ್ರಕಾರ ನೂತನ ಮಾದರಿಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದೆ.

ಹೊಸತಾದ ಬಂಪರ್, ದೊಡ್ಡದಾದ ಏರ್ ಇಂಟೇಕ್, ಫ್ರಂಟ್ ಗ್ರಿಲ್, ಹೊಸತಾದ ಅಲಾಯ್ ವೀಲ್ ವಿನ್ಯಾಸಗಳಿರಲಿದೆ. ಅದೇ ರೀತಿ ಅಡಾಪ್ಟಿಪ್ ಎಲ್‌ಇಡಿ ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿರಲಿದೆ.

To Follow DriveSpark On Facebook, Click The Like Button
ರೇಂಜ್ ರೋವರ್ ಇವೊಕ್

ಇನ್ನು ಕಾರಿನೊಳಗೆ ಹೊಸತಾದ ಮೃದುವಾದ ಸೀಟು, ಲ್ಯಾಂಡ್ ರೋವರ್‌ನ 8 ಇಂಚುಗಳ ಟಚ್ ಸ್ಕ್ರೀನ್ ಸಿಸ್ಟಂ, ಇನ್ ಕಂಟ್ರೋಲ್ ಟಚ್ ಮತ್ತು ಟಿಎಫ್‌ಟಿ ಡಿಸ್ ಪ್ಲೇ ಲಭ್ಯವಾಗಲಿದೆ.

ಇನ್ನುಳಿದಂತೆ ಆಲ್ ಟರೈನ್ ಪ್ರೊಗ್ರೆಸ್ ಕಂಟ್ರೋಲ್ (ಎಟಿಪಿಸಿ), ಲೇನ್ ಕೀಪಿಂಗ್ ಅಸಿಸ್ಟ್, ಸ್ವಯಂಚಾಲಿತ ಬ್ರೇಕ್ ಮತ್ತು ಚಾಲಕ ಬದಿಯ ಎಚ್ಚರಿಕೆ ವ್ಯವಸ್ಥೆಯು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಇವೆಲ್ಲದರ ಜೊತೆಗೆ ಹ್ಯಾಂಡ್ಸ್ ಫ್ರಿ ಟೈಲ್ ಗೇಟ್ ಓಪರೇಷನ್, ಹೆಡ್ ಅಪ್ ಡಿಸ್ ಪ್ಲೇ (ಎಚ್‌ಯುಡಿ), ಸೌರಂಡ್ ಕ್ಯಾಮೆರಾ ಸಿಸ್ಟಂ, 17 ಸ್ಪೀಕರ್ ಗಳ ಆಡಿಯೋ ಸಿಸ್ಟಂ ಮತ್ತು ಹಿಂಬದಿ ಸೀಟಿನಲ್ಲಿ ಮನರಂಜನಾ ವ್ಯವಸ್ಥೆಗಳಿರಲಿದೆ.

ಹಾಗಿದ್ದರೂ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದರ 2.2. ಲೀಟರ್ ಎಂಜಿನ್ 187 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ರೇಂಜ್ ರೋವರ್ ಇವೊಕ್ 57 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತಿದೆ.

English summary
Launch Alert: Range Rover Evoque Facelift On November 19
Story first published: Tuesday, November 3, 2015, 16:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark