ಆಲ್ಟೊ ವಾಶೌಟ್ ಮಾಡಲು ರೆನೊ ರಣತಂತ್ರ

Written By:

ಮಾರುಕಟ್ಟೆಗೆ ಹೊಸ ಕಾರೊಂದರ ಪ್ರವೇಶವಾಗಿದೆ. ಎಲ್ಲಿಂದಲೂ ವ್ಯಾಪಕ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಇದನ್ನು ಸಮರ್ಥಿಕೊಳ್ಳುವಂತೆಯೇ ನೂತನ ರೆನೊ ಕ್ವಿಡ್ ಸಣ್ಣ ಕಾರು ಈಗಾಗಲೇ 75,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಳನ್ನು ದಾಖಲಿಸಿದೆ.

Also Read: ರೆನೊ ಕ್ವಿಡ್ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ

ಇಲ್ಲಿಗೆ ರೆನೊ ತನ್ನ ಕಾರ್ಯತಂತ್ರವನ್ನು ನಿಲ್ಲಿಸುವ ಇರಾದೆಯಲ್ಲಿಲ್ಲ. ಎಲ್ಲ ಹಂತದಲ್ಲೂ ಮಾರುತಿ ಆಲ್ಟೊ ವಾಶೌಟ್ ಮಾಡುವ ರಣತಂತ್ರದೊಂದಿಗೆ ರೆನೊ ಮುಂದೆ ಬರುತ್ತಿದೆ. ಈ ಬಗ್ಗೆ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

To Follow DriveSpark On Facebook, Click The Like Button
ಆಲ್ಟೊ ವಾಶೌಟ್ ಮಾಡಲು ರೆನೊ ರಣತಂತ್ರ

ಬಲ್ಲ ಮೂಲಗಳ ಪ್ರಕಾರ ರೆನೊ ಕ್ವಿಡ್ ಆಮ್ಯೋಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ ಎಎಂಟಿ ವರಿಯಂಟ್ ಮುಂಬರುವ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಾಣಲಿದೆ.

ಆಲ್ಟೊ ವಾಶೌಟ್ ಮಾಡಲು ರೆನೊ ರಣತಂತ್ರ

ಕೇವಲ ಸೆಮಿ ಆಟೋಮ್ಯಾಟಿಕ್ ಮಾತ್ರವಲ್ಲದೆ ಹೆಚ್ಚು ಶಕ್ತಿಶಾಲಿ 1.0 ಲೀಟರ್ ಎಂಜಿನ್ ಮಾದರಿಯನ್ನು ಪರಿಚಯಿಸುವ ಇರಾದೆಯನ್ನು ರೆನೊ ಹೊಂದಿದೆ.

ಆಲ್ಟೊ ವಾಶೌಟ್ ಮಾಡಲು ರೆನೊ ರಣತಂತ್ರ

ರೆನೊದ ಒಂದು ಲೀಟರ್ ಹಾಗೂ ಎಎಂಟಿ ಕ್ವಿಡ್ ವೆರಿಯಂಟ್ ಗಳು ನೇರವಾಗಿ ಮಾರುತಿ ಆಲ್ಟೊ ಕೆ10 ಮತ್ತು ಕೆ10 ಎಎಂಟಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಆಲ್ಟೊ ವಾಶೌಟ್ ಮಾಡಲು ರೆನೊ ರಣತಂತ್ರ

ಮಗದೊಂದು ಖುಷಿ ಸುದ್ದಿಯೆಂದರೆ ರೆನೊ ಕ್ವಿಡ್ ಒಂದು ಲೀಟರ್ ವೆರಿಯಂಟ್ ಎಬಿಎಸ್ ಜೊತೆಗೆ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಸೌಲಭ್ಯವನ್ನು ಪಡೆಯಲಿದೆ. ಪ್ರಸ್ತುತ ಕ್ವಿಡ್ ಕಾರಿನಲ್ಲಿ ಚಾಲಕ ಬದಿಯ ಏರ್ ಬ್ಯಾಗ್ ಟಾಪ್ ಎಂಡ್ ವೆರಿಯಂಟ್ ನಲ್ಲಿ ನೀಡಲಾಗುತ್ತಿದೆ.

ಆಲ್ಟೊ ವಾಶೌಟ್ ಮಾಡಲು ರೆನೊ ರಣತಂತ್ರ

ನಿಮ್ಮ ಮಾಹಿತಿಗಾಗಿ ದೆಹಲಿ ಆಟೋ ಎಕ್ಸ್ ಪೋ 2016 ಫೆಬ್ರವರಿ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿಯಾಗಿ ನೆರವೇರಲಿದೆ. ಇಲ್ಲಿನ ಎಕ್ಸ್ ಕ್ಲೂಸಿವ್ ವಿವರಗಳನ್ನು ಡ್ರೈವ್ ಸ್ಪಾರ್ಕ್ ಓದುಗರಿಗೆ ಕ್ಷಣ ಕ್ಷಣದಲ್ಲಿ ಹಂಚಿಕೊಳ್ಳಲಿದ್ದೇವೆ.

English summary
Renault Kwid AMT to debut at 2016 Auto Expo
Story first published: Wednesday, December 30, 2015, 8:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark