ಕಾಯುವಿಕೆ ಅಂತ್ಯ; ಎಎಂಟಿ ಜೊತೆ ಹೊಸ ಡಸ್ಟರ್ ಆಗಮನ

By Nagaraja

ವಾಹನ ಪ್ರೇಮಿಗಳು ಅತ್ಯಂತ ಕುತೂಹಲದಿಂದ ಕಾದು ಕುಳಿತಿರುವ ಅತಿ ನೂತನ ರೆನೊ ಡಸ್ಟರ್ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪಾದಾರ್ಪಣೆಗೈದಿದೆ.

ಕ್ರೆಟಾ, ಇಕೊಸ್ಪೋರ್ಟ್ ಗಳಂತಹ ಪ್ರತಿಸ್ಪರ್ಧಿಗಳ ಆಗಮನದೊಂದಿಗೆ ಸ್ವಲ್ಪ ಹಿನ್ನಡೆಯನ್ನು ಅನುಭವಿಸಿದ್ದ ರೆನೊ ಡಸ್ಟರ್, ಹೊಸ ಎಎಂಟಿ (ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್) ತಂತ್ರಜ್ಞಾನದೊಂದಿಗೆ ಭರ್ಜರಿ ಪುನರಾಗಮನ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ.

ರೆನೊ ಡಸ್ಟರ್


ಎಂಜಿನ್ ತಂತ್ರಗಾರಿಕೆ

1.5 ಲೀಟರ್ ಡೀಸೆಲ್
84 ಅಶ್ವಶಕ್ತಿ @ 3750rpm ಹಾಗೂ 109 ಅಶ್ವಶಕ್ತಿ @ 3900rpm
200 ಎನ್‌ಎಂ ತಿರುಗುಬಲ @1900rpm/ 248 ಎನ್‌ಎಂ ತಿರುಗುಬಲ @2250rpm
ಮೈಲೇಜ್: - 20.64 / 19.1 (Km/l)

1.6 ಲೀಟರ್ ಪೆಟ್ರೋಲ್
103 ಅಶ್ವಶಕ್ತಿ @ 5850 rpm
ತಿರುಗುಬಲ - 248 ಎನ್‌ಎಂ @ 2250 rpm
ಮೈಲೇಜ್ - 13.2 (Km/l)

ರೆನೊ ಡಸ್ಟರ್


ಗೇರ್ ಬಾಕ್ಸ್
ಡಸ್ಟರ್ ಈಗಾಗಲೇ ಕ್ವಿಡ್ ಕಾರಿನಲ್ಲಿ ಪ್ರದರ್ಶಿಸಿರುವುದಕ್ಕೆ ಸಮಾನವಾದ ರೀತಿಯಲ್ಲಿ 'ಈಸಿ-ಆರ್' ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗೇರ್ ಬಾಕ್ಸ್ ಹೊಸ ಡಸ್ಟರ್ ಕಾರಿನಲ್ಲಿ ಲಭ್ಯವಾಗಲಿದೆ.

ವಿನ್ಯಾಸ
ಪರಿಷ್ಕೃತ ಡಸ್ಟರ್ ಕಾರಿನ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಮುಂದುಗಡೆ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದ್ದು, ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚಿನ ಗಮನವನ್ನು ತರಲಾಗಿದೆ. ಎಲ್‌ಇಡಿ ಬೆಳಕಿನ ಸೇವೆ, ಪರಿಷ್ಕೃತ ಬಂಪರ್, ಗ್ರಿಲ್, ಟೈಲ್ ಲ್ಯಾಂಪ್ ಹಾಗೂ ಆಕರ್ಷಕ ಗ್ರಾಫಿಕ್ಸ್ ಹಾಗೂ ಸ್ವಭಾವ ರೇಖೆಗಳು ಕಂಡುಬರಲಿದೆ.

ಕಾರಿನ ಒಳಮೈನಲ್ಲೂ ಗ್ರಾಹಕರ ಬಯಕೆಗಳಿಗೆ ತಕ್ಕಂತೆ ಮಾರ್ಪಾಡುಗಳನ್ನು ತರಲಾಗಿದ್ದು, ಪ್ರೀಮಿಯಂ ಕಾರಿನಂತೆ ಭಾಸವಾಗಲಿದೆ. ಪರಿಷ್ಕೃತ ಕ್ಲಸ್ಟರ್ ಬೋರ್ಡ್‌ನಲ್ಲಿ ಇನ್ಮೋಟೈನ್ಮೆಂಟ್ ಸಿಸ್ಟಂ ಹಾಗೂ ಆಟೋಮ್ಯಾಟಿಕ್ ಎಸಿ ನಿಯಂತ್ರಣದ ಸೇವೆಯಿರಲಿದೆ.

ರೆನೊ ಡಸ್ಟರ್


ಗಮನಾರ್ಹ ವೈಶಿಷ್ಟ್ಯಗಳು

  • ಎಬಿಎಸ್,
  • ಇಬಿಡಿ ಜೊತೆ ಬ್ರೇಕ್ ಅಸಿಸ್ಟ್,
  • ಇಎಸ್ ಪಿ,
  • ಹಿಲ್ ಅಸಿಸ್ಟ್,
  • ಡ್ಯುಯಲ್ ಏರ್ ಬ್ಯಾಗ್,
  • ಕ್ರೂಸ್ ಕಂಟ್ರೋಲ್ ಜೊತೆ ಸ್ಪೀಡ್ ಲಿಮಿಟರ್,
  • ರಿಯರ್ ವ್ಯೂ ಕ್ಯಾಮೆರಾ ಜೊತೆ ಗೈಡ್ ಲೈನ್ಸ್,
  • ಇಕೊ ಡ್ರೈವಿಂಗ್ ಮೋಡ್

ಪ್ರತಿಸ್ಪರ್ಧಿಗಳು
ಮಾರುಕಟ್ಟೆಯಲ್ಲಿ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಹ್ಯುಂಡೈ ಕ್ರೆಟಾ ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಮಾದರಿಗಳಿಗೆ ನೂತನ ಡಸ್ಟರ್ ಪೈಪೋಟಿಯನ್ನು ಒಡ್ಡಲಿದೆ. ಇನ್ನು ಬೆಲೆ ಇತ್ಯಾದಿ ಮಾಹಿತಿಗಳು ಬಿಡುಗಡೆ ವೇಳೆಯಷ್ಟೇ ಲಭ್ಯವಾಗಲಿದೆ.

Most Read Articles

Kannada
English summary
Facelifted Duster Looks To Blind Rivals With New Lights And AMT Gearbox
Story first published: Friday, February 5, 2016, 19:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X