2016ನೇ ಫೆಬ್ರವರಿ; ಮೆರೆದಾಡಿದ 10 ಕಾರುಗಳು

By Nagaraja

ದೇಶದ ಪ್ರಯಾಣಿಕ ಮಾರುಕಟ್ಟೆ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿದ್ದು, ವಾಹನಗಳ ಮಾರಾಟದಲ್ಲೂ ಇದು ಪರಿಣಾಮ ಬೀರುತ್ತಿದೆ. ಹೆಚ್ಚೆಚ್ಚು ಗ್ರಾಹಕರು ನೂತನ ಕಾರುಗಳ ಖರೀದಿಗೆ ಉತ್ಸಾಹ ತೋರುತ್ತಿರುವುದು ಮಾರಾಟ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ಅತ್ತ 2016-17ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ವಾಹನ ಮೂಲಸವಲತ್ತು ಮೇಲಿನ ತೆರಿಗೆ ಹೆಚ್ಚಿಸಿರುವುದು ಮುಂಬರುವ ದಿನಗಳಲ್ಲಿ ಋಣಾತ್ಮಕ ಪರಿಣಾಮ ಬೀರುವ ಭೀತಿಯಿದೆ. ಕಾರುಗಳ ಬೆಲೆಗಳಲ್ಲಿ ಈಗಾಗಲೇ ಹೆಚ್ಚಳಗೊಂಡಿರುವುದು ನೀವಿಲ್ಲಿ ಗಮನಿಸಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ 2016ನೇ ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟಗೊಂಡಿರುವ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

10. ಮಾರುತಿ ಸುಜುಕಿ ಸಿಯಾಝ್

10. ಮಾರುತಿ ಸುಜುಕಿ ಸಿಯಾಝ್

2016 ಫೆಬ್ರವರಿ ಸಾಲಿನಲ್ಲಿ ಮಾರುತಿ ಸುಜುಕಿ ಸಿಯಾಝ್ 5,162 ಯುನಿಟ್ ಗಳ ಮಾರಾಟವನ್ನು ಕಂಡಿದೆ. ಇಲ್ಲಿ ನೂತನ ಸಿಯಾಝ್ ಹೈಬ್ರಿಡ್ ಮಾದರಿಯು ಮಾರುತಿಗೆ ವರದಾನವಾಗಿ ಪರಿಣಮಿಸಿದೆ.

09. ಹ್ಯುಂಡೈ ಇಯಾನ್

09. ಹ್ಯುಂಡೈ ಇಯಾನ್

ಒಂಬತ್ತನೇ ಸ್ಥಾನದಲ್ಲಿರುವ ಹ್ಯುಂಡೈ ಇಯಾನ್ 5,539 ಯುನಿಟ್ ಗಳ ಮಾರಾಟವನ್ನು ಕಂಡಿದೆ. ಇದು ಸಣ್ಣ ಕಾರುಗಳ ವಿಭಾಗದಲ್ಲಿ ಈಗಲೂ ಜನಪ್ರಿಯತೆಗೆ ಸಾಕ್ಷಿಯಾಗಿದೆ.

 08. ಮಾರುತಿ ಸುಜುಕಿ ಬಲೆನೊ

08. ಮಾರುತಿ ಸುಜುಕಿ ಬಲೆನೊ

6,888 ಯುನಿಟ್ ಗಳ ಮಾರಾಟ ಸಾಧಿಸಿರುವ ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಾಗಿರುವ ಹೊರತಾಗಿಯೂ ಗರಿಷ್ಠ ಬೇಡಿಕೆಯನ್ನು ಕಾಪಾಡಿಕೊಂಡಿದೆ.

07. ರೆನೊ ಕ್ವಿಡ್

07. ರೆನೊ ಕ್ವಿಡ್

ಆಲ್ಟೊ ಕಾರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ರೆನೊ ಕ್ವಿಡ್ 7,544 ಯುನಿಟ್ ಗಳ ಮಾರಾಟದೊಂದಿಗೆ ಏಳನೇ ಸ್ಥಾನಕ್ಕೇರಿದೆ.

06. ಹ್ಯುಂಡೈ ಐ20

06. ಹ್ಯುಂಡೈ ಐ20

ಬಲೆನೊದ ಪ್ರಬಲ ಪೈಪೋಟಿಯ ನಡುವೆಯೂ ಆವೇಗವನ್ನು ಕಾಪಾಡಿಕೊಂಡಿರುವ ಹ್ಯುಂಡೈ ಐ20 8419 ಯುನಿಟ್ ಗಳ ಮಾರಾಟದೊಂದಿಗೆ ಆರನೇ ಸ್ಥಾನದಲ್ಲಿದೆ.

05. ಹ್ಯುಂಡೈ ಗ್ರಾಂಡ್ ಐ10

05. ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈನ ಮಗದೊಂದು ಆಕರ್ಷಕ ಕಾರುಗಳಲ್ಲಿ ಒಂದಾಗಿರುವ ಹ್ಯುಂಡೈ ಗ್ರಾಂಡ್ ಐ10, 8,898 ಯುನಿಟ್ ಗಳ ಮಾರಾಟದೊಂದಿಗೆ ಐದನೇ ಸ್ಥಾನದಲ್ಲಿದೆ.

04. ಮಾರುತಿ ಸುಜುಕಿ ವ್ಯಾಗನಾರ್

04. ಮಾರುತಿ ಸುಜುಕಿ ವ್ಯಾಗನಾರ್

'ಟಾಲ್ ಬಾಯ್' ಎಂಬ ಹೆಸರಿಗೆ ತಕ್ಕಂತೆ ಗ್ರಾಹಕರಿಗೆ ಖರೀದಿ ಯೋಗ್ಯ ಕಾರೆನಿಸಿಕೊಂಡಿರುವ ಮಾರುತಿ ಸುಜುಕಿ ವ್ಯಾಗನಾರ್ 2016ನೇ ಸಾಲಿನಲ್ಲಿ 14,209 ಯುನಿಟ್ ಗಳ ಮಾರಾಟವನ್ನು ಕಾಯ್ದುಕೊಂಡಿದೆ.

03. ಮಾರುತಿ ಸುಜುಕಿ ಸ್ವಿಫ್ಟ್

03. ಮಾರುತಿ ಸುಜುಕಿ ಸ್ವಿಫ್ಟ್

ಮೂರನೇ ಸ್ಥಾನದಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರು 15,475 ಯುನಿಟ್ ಗಳ ಮಾರಾಟವನ್ನು ಕಾಯ್ದುಕೊಂಡಿದೆ. ಈ ಮೂಲಕ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರೆಂಬ ಪದವಿಯನ್ನು ಉಳಿಸಿಕೊಂಡಿದೆ.

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಸ್ಪರ್ಧಾತ್ಮಕ ಬೆಲೆಗಳಲ್ಲಿ ದೊರಕುವ ಕಾಂಪಾಕ್ಟ್ ಸೆಡಾನ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 17,410 ಯುನಿಟ್ ಗಳ ಮಾರಾಟದೊಂದಿಗೆ ಸ್ವಲ್ಪ ಹಿನ್ನಡೆಯನ್ನು ಅನುಭವಿಸಿದರೂ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ.

01. ಮಾರುತಿ ಆಲ್ಟೊ

01. ಮಾರುತಿ ಆಲ್ಟೊ

ಮಗದೊಮ್ಮೆ ವಿಜಯ ಮಾಲೆ ಕೊರಳಿಗೆ ಹಾಕಿಕೊಂಡಿರುವ ಮಾರುತಿ ಸುಜುಕಿ ಆಲ್ಟೊ ದೇಶದ ಅತ್ಯಂತ ಜನಪ್ರಿಯ ಕಾರೆಂಬ ಪದವಿಯನ್ನು ಆಲಂಕರಿಸಿದೆ. 2016 ಫೆಬ್ರವರಿ ತಿಂಗಳಲ್ಲಿ ಆಲ್ಟೊ ಒಟ್ಟಾರೆ 21,286 ಯುನಿಟ್ ಗಳ ಮಾರಾಟವನ್ನು ಪಡೆದಿತ್ತು.

Most Read Articles

Kannada
Read more on ಟಾಪ್ 10 top 10
English summary
Top 10 Selling Cars In February 2016: Renault Kwid Posts Strong Growth
Story first published: Saturday, March 5, 2016, 12:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X