ಹಬ್ಬದ ಸಂಭ್ರಮ; ಆಕಾಶಕ್ಕೆ ನೆಗೆದ ಕಾರು ಮಾರಾಟ

Written By:

ದೇಶದೆಲ್ಲೆಡೆ ದಸರಾ, ನವರಾತ್ರಿ, ದುರ್ಗಾ ಪೂಜಾ ಹೀಗೆ ಸಾಲು ಸಾಲು ಹಬ್ಬದ ಸಂಭ್ರಮದ ವಾತಾವರಣ ಮನೆ ಮಾಡಿರುವಂತೆಯೇ ದೇಶದ ಕಾರು ಮಾರಾಟದಲ್ಲೂ ಭರ್ಜರಿ ನೆಗೆತ ಕಂಡಿದೆ. ಅಷ್ಟೇ ಯಾಕೆ ಕಳೆದ 54 ತಿಂಗಳಲ್ಲಿ ಅತಿ ಹೆಚ್ಚು ಮಾರಾಟವನ್ನು ಸೆಪ್ಟೆಂಬರ್ ನಲ್ಲಿ ಕಂಡಿದೆ. ಇವೆಲ್ಲವೂ ಟೊಯೊಟಾ ಇನ್ನೋವಾ, ಮಾರುತಿ ಬ್ರಿಝಾ, ಹ್ಯುಂಡೈ ಕ್ರೆಟಾ ಮುಂತಾದ ಕಾರುಗಳಿಂದ ಸಾಧ್ಯವಾಗಿದೆ.

To Follow DriveSpark On Facebook, Click The Like Button
ಹಬ್ಬದ ಸಂಭ್ರಮ; ಆಕಾಶಕ್ಕೆ ನೆಗೆದ ಕಾರು ಮಾರಾಟ

ಹಬ್ಬದ ಸಂಭ್ರಮದ ವೇಳಯಲ್ಲಿ ಬಹುತೇಕ ಮಂದಿ ಹೊಸ ಕಾರು ಖರೀದಿಸಲು ಉತ್ಸುಕತೆಯನ್ನು ತೋರುತ್ತಾರೆ. ಸಹಜವಾಗಿಯೇ ಇದು ಮಾರಾಟದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ವಾಹನ ಸಂಸ್ಥೆಗಳು ಬೇಡಿಕೆಯನ್ನು ಪೂರೈಸಲು ಹೆಚ್ಚುವರಿ ಕೆಲಸದ ವೇಳಾಪಟ್ಟಿಯನ್ನು ಘೋಷಿಸುವುದು ಅನಿವಾರ್ಯವೆನಿಸಿದೆ.

ಹಬ್ಬದ ಸಂಭ್ರಮ; ಆಕಾಶಕ್ಕೆ ನೆಗೆದ ಕಾರು ಮಾರಾಟ

ಭಾರತೀಯ ವಾಹನ ಅಧ್ಯಯನ ಸಂಸ್ಥೆ (ಸಿಯಾಮ್) ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ 2016 ಸೆಪ್ಟೆಂಬರ್ ತಿಂಗಳಲ್ಲಿ 1.95 ಲಕ್ಷ ಕಾರುಗಳ ಮಾರಾಟ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಸಂಖ್ಯೆ 1.69 ಲಕ್ಷ ಯುನಿಟ್ ಗಳಾಗಿದ್ದವು. ತನ್ಮೂಲಕ ಶೇಕಡಾ 15ರಷ್ಟು ಮಾರಾಟ ಏರಿಕೆ ದಾಖಲಿಸಿದೆ.

ಹಬ್ಬದ ಸಂಭ್ರಮ; ಆಕಾಶಕ್ಕೆ ನೆಗೆದ ಕಾರು ಮಾರಾಟ

ಕೆಲವು ವರ್ಷಗಳ ಹಿಂದೆ 2012ರಲ್ಲಿ ಮಾರಾಟ ಸಂಖ್ಯೆಯು 2.33 ಲಕ್ಷವನ್ನು ತಲುಪಿದೆ. ತದಾ ಬಳಿಕ ಇದೇ ಮೊದಲ ಬಾರಿಗೆ ಮಾರಾಟದಲ್ಲಿ ಇಂತಹದೊಂದು ಭಾರಿ ಪ್ರಮಾಣದ ನೆಗೆತ ಕಂಡಿದೆ.

ಹಬ್ಬದ ಸಂಭ್ರಮ; ಆಕಾಶಕ್ಕೆ ನೆಗೆದ ಕಾರು ಮಾರಾಟ

ಎಸ್ ಯುವಿ, ವ್ಯಾನ್ ಸೇರಿದ ಪ್ರಯಾಣಿಕ ಕಾರುಗಳ ಮಾರಾಟವು 2.78 ಲಕ್ಷ ಯುನಿಟ್ ಗಳಾಗಿವೆ. ಇದು ಕಳೆದ ವರ್ಷ ಇದೇ ಸಂದರ್ಭದಲ್ಲಿ 2.32 ಲಕ್ಷ ಯುನಿಟ್ ಗಳಾಗಿತ್ತು. ಈ ಮೂಲಕ ಶೇಕಡಾ 20ರಷ್ಟು ಏರಿಕೆ ಕಂಡಿದೆ. 2012ರಲ್ಲಿ ಈ ಸಂಖ್ಯೆಯು 2.95 ಲಕ್ಷದಷ್ಟಾಗಿತ್ತು.

ಹಬ್ಬದ ಸಂಭ್ರಮ; ಆಕಾಶಕ್ಕೆ ನೆಗೆದ ಕಾರು ಮಾರಾಟ

ಇದೇ ಮೊದಲ ಬಾರಿಗೆ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಭಾರಿ ನೆಗೆತ ಕಂಡಿದ್ದು, ಸೆಪ್ಟೆಂಬರ್ ತಿಂಗಳಲ್ಲಿ 66,851 ಯುನಿಟ್ ಗಳಷ್ಟು ಮಾರಾಟ ಕಂಡಿತ್ತು.

ಹಬ್ಬದ ಸಂಭ್ರಮ; ಆಕಾಶಕ್ಕೆ ನೆಗೆದ ಕಾರು ಮಾರಾಟ

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಗರಿಷ್ಠ ಮಾರಾಟ ದಾಖಲಾಗಿದೆ. ಒಟ್ಟಿನಲ್ಲಿ ಹಬ್ಬದ ಸಂಭ್ರಮದ ವಾತಾವರಣವು ಗ್ರಾಹಕರಲ್ಲೂ ಮನೆ ಮಾಡಿದೆ.

Read more on ಕಾರು car
English summary
Car Sales Reaches 54 Month High In This Festive Season
Story first published: Sunday, October 9, 2016, 10:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark