ಜಾದೂ ಮಾಡುವ ನಿರೀಕ್ಷೆಯಲ್ಲಿ ದಟ್ಸನ್ ಗೊ ಕ್ರಾಸ್

Written By:

ಗೊ ಹ್ಯಾಚ್ ಬ್ಯಾಕ್ ಹಾಗೂ ಗೊ ಪ್ಲಸ್ ಬಹು ಬಳಕೆಯ ವಾಹನಗಳನ್ನು ದೇಶಕ್ಕೆ ಪರಿಚಯಿಸಿರುವ ನಿಸ್ಸಾನ್ ಬಜೆಟ್ ಬ್ರಾಂಡ್ ದಟ್ಸನ್ ಈಗ ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಗೊ ಕ್ರಾಸ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಲಿದೆ.

Also Read: ಭಾರತದಲ್ಲಿ ಬಿಡುಗಡೆಯಾಗಲಿರುವ 23 ಕಾರುಗಳು

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದಟ್ಸನ್ ಗೊ ಕ್ರಾಸ್ ನಿಕಟ ಭವಿಷ್ಯದಲ್ಲೇ ಭಾರತ ರಸ್ತೆ ಪ್ರವೇಶ ಪಡೆಯಲಿದೆ. ಇದೇ ವೇಳೆ ಅತಿ ನೂತನ ರೆಡಿ ಗೊ ಹ್ಯಾಚ್ ಬ್ಯಾಕ್ ಕಾರು ಸಹ ಬಿಡುಗಡೆ ಮಾಡಲಿದೆ.

To Follow DriveSpark On Facebook, Click The Like Button
ಜಾದೂ ಮಾಡುವ ನಿರೀಕ್ಷೆಯಲ್ಲಿ ದಟ್ಸನ್ ಗೊ ಕ್ರಾಸ್

ದಟ್ಸನ್ ಗೊ ಪ್ಲಸ್ ಎಂಪಿವಿ ತಳಹದಿಯಲ್ಲಿ ನಿರ್ಮಾಣವಾಗಲಿರುವ ದಟ್ಸನ್ ಗೊ ಕ್ರಾಸ್ ಒಂದು ಕ್ರಾಸೋವರ್ ಶೈಲಿಯ ಕಾರಾಗಿದ್ದು, ಐದು ಹಾಗೂ ಏಳು ಸೀಟುಗಳ ವೆರಿಯಂಟ್ ಗಳಲ್ಲಿ ಬಿಡುಗಡೆಯಾಗಲಿದೆ.

ಜಾದೂ ಮಾಡುವ ನಿರೀಕ್ಷೆಯಲ್ಲಿ ದಟ್ಸನ್ ಗೊ ಕ್ರಾಸ್

ನೂತನ ಗೊ ಕ್ರಾಸ್ 1.2 ಲೀಟರ್ ತ್ರಿ ಸಿಲಿಂಡರ್ ಡಿಒಎಚ್‌ಸಿ 12 ವಾಲ್ವ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 104 ಎನ್‌ಎಂ ತಿರುಗುಬಲದಲ್ಲಿ 68 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಜಾದೂ ಮಾಡುವ ನಿರೀಕ್ಷೆಯಲ್ಲಿ ದಟ್ಸನ್ ಗೊ ಕ್ರಾಸ್

ಇದಕ್ಕೂ ಮೊದಲು 2015 ಟೊಕಿಯೋ ಮೋಟಾರು ಶೋದಲ್ಲಿ ಪಾದಾರ್ಪಣೆ ಮಾಡಿರುವ ರೆನೊ ಗೊ ಕ್ರಾಸ್, ಮುಂದಿನ ದಿನಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಲಭ್ಯವಾಗಲಿದೆ.

ಜಾದೂ ಮಾಡುವ ನಿರೀಕ್ಷೆಯಲ್ಲಿ ದಟ್ಸನ್ ಗೊ ಕ್ರಾಸ್

ಆಕರ್ಷಕ ಹೂರಮೈ, ಫ್ರಂಟ್ ಗ್ರಿಲ್, ಎಲ್ ಇಡಿ ಹೆಡ್ ಲೈಟ್ , ಎಲ್ ಇಡಿ ಟೈಲ್ ಲೈಟ್ ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ದಿಟ್ಟ ನೋಟವನ್ನು ಪ್ರದಾನ ಮಾಡುತ್ತಿದೆ.

ಜಾದೂ ಮಾಡುವ ನಿರೀಕ್ಷೆಯಲ್ಲಿ ದಟ್ಸನ್ ಗೊ ಕ್ರಾಸ್

ನೂತನ ದಟ್ಸನ್ ಗೊ ಕ್ರಾಸ್ ಕಾನ್ಸೆಪ್ಟ್ ಕಾರು ಶೈಲಿ, ಸಾಹಸ ಹಾಗೂ ಮೋಜಿನ ಚಾಲನೆಗಾಗಿ ಹೆಚ್ಚು ಸೂಕ್ತವೆನಿಸಲಿದೆ. ಪ್ರಮುಖವಾಗಿಯೂ ಯುವ ಉತ್ಸಾಹಿ ಚಾಲಕರನ್ನು ಗುರಿಯಾಗಿರಿಸಿಕೊಂಡು ಇದನ್ನು ರಚಿಸಲಾಗಿದೆ.

ಜಾದೂ ಮಾಡುವ ನಿರೀಕ್ಷೆಯಲ್ಲಿ ದಟ್ಸನ್ ಗೊ ಕ್ರಾಸ್

2016 ಆಟೋ ಎಕ್ಸ್ ಪೋ ವಿಶೇಷ ಪುಟಕ್ಕಾಗಿ ಇಲ್ಲಿ ಕ್ಲಿಕ್ಕಿಸಿರಿ

English summary
Datsun Go-Cross Teased Ahead Of 2016 Auto Expo Debut
Story first published: Tuesday, January 19, 2016, 15:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark