ಮುಂಬೈನಲ್ಲಿ ಹಸಿರು ನಿಶಾನೆ ತೋರಿದ ಫೆರಾರಿ 488 ಜಿಟಿಬಿ

By Nagaraja

ಈಗಷ್ಟೇ ಭಾರತ ಮಾರುಕಟ್ಟೆ ಪ್ರವೇಶಿಸಿರುವ ಇಟಲಿಯ ಐಕಾನಿಕ್ ಫೆರಾರಿ 488 ಜಿಟಿಬಿ ಸೂಪರ್ ಕಾರು ಇದೀಗ ಸ್ಥಳೀಯ ಬಿಡುಗಡೆಯ ಅಂಗವಾಗಿ ವಾಣಿಜ್ಯ ನಗರಿ ಮುಂಬೈಗೆ ಪ್ರವೇಶಿಸಿದೆ.

ಬೆಲೆ ಮಾಹಿತಿ: 3.88 ಕೋಟಿ ರು. (ಎಕ್ಸ್ ಶೋ ರೂಂ ಮುಂಬೈ)

ಮುಂಬೈನಲ್ಲಿ ಸ್ಥಿತಗೊಂಡಿರುವ ನವನೀತ್ ಮೋಟಾರ್ಸ್ ಎಕ್ಸ್ ಕ್ಲೂಸಿವ್ ಡೀಲರ್ ಶಿಪ್ ಮುಖಾಂತರ ನೂತನ ಫೆರಾರಿ 488 ಜಿಟಿಬಿ ಮಾರಾಟ ಸಾಗಲಿದೆ.

ಫೆರಾರಿ 488 ಜಿಟಿಬಿ


458 ಫೆರಾರಿ ಇಟಲಿಯಾ ಸ್ಥಾನವನ್ನು ತುಂಬಲಿರುವ 488 ಜಿಟಿಬಿ ಎಂಬುದರ ಪೂರ್ಣ ರೂಪ ಗ್ರ್ಯಾನ್ ಟರಿಸ್ಮೂ ಬರ್ಲಿನೆಟ್ಟಾ ಎಂಬುದಾಗಿರಲಿದೆ. ಇಲ್ಲಿ ಗ್ರ್ಯಾನ್ ಟರಿಸ್ಮೊ ಬರ್ಲಿನೆಟ್ಟಾ ಎಂಬುದು ಕೂಪೆ ಶೈಲಿಯ ಗ್ರ್ಯಾಂಡ್ ಟೂರರ್ ಕಾರಾಗಿರಲಿದೆ. ಅಂತೆಯೇ 488 ಎಂಬುದು 3902 ಸಿಸಿ ಎಂಜಿನ್ ಮತ್ತು 8 ಸಿಲಿಂಡರ್ ಗಳನ್ನು ಸೂಚಿಸಲಿದೆ.

488 ಜಿಟಿಬಿ ಸಂಸ್ಥೆಯಿಂದ ಆಗಮನವಾಗುತ್ತಿರುವ ಎರಡನೇ ಮಿಡ್ ರಿಯರ್ ಎಂಜಿನ್ ವಿ8 ಬರ್ಲಿನೆಟ್ಟಾ ಕಾರಾಗಿದೆ. ಇದಕ್ಕೂ ಮೊದಲು 40 ವರ್ಷಗಳ ಹಿಂದೆ ಮೊದಲ ಮಿಡ್ ರಿಯರ್ ವಿ8 ಎಂಜಿನ್ ನಿಯಂತ್ರಿತ 308 ಕಾರು ಆಗಮನವಾಗಿತ್ತು.

ಎಂಜಿನ್ ತಾಂತ್ರಿಕತೆ
ವಿ8 ಟರ್ಬೊ ಚಾರ್ಜ್ಡ್
661 ಅಶ್ವಶಕ್ತಿ (ಹಿಂದಿನ ಮಾದರಿಗಿಂತಲೂ 66 ಬಿಎಚ್‌ಪಿ ಜಾಸ್ತಿ)
760 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 7 ಸ್ಪೀಡ್ ಎಫ್1 ಡ್ಯುಯಲ್ ಕ್ಲಚ್

ವೇಗವರ್ಧನೆ: 3 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗ: ಗಂಟೆಗೆ 330 ಕೀ.ಮೀ. (ಇದು ಫೆರಾರಿ ಎನ್ಜೊಗಿಂತಲೂ ವೇಗದ ಕಾರು)

ಶೈಲಿ
ಮುಂಭಾಗದಲ್ಲಿ ಸಂಪೂರ್ಣ ಹೊಸ ವಿನ್ಯಾಸ, ದೊಡ್ಡದಾದ ಏರ್ ಡ್ಯಾಮ್, ಹಿಂದುಗಡೆ ಡ್ಯುಯಲ್ ಎಕ್ಸಾಸ್ಟ್, ವಿಶಿಷ್ಟ ಸ್ಪಾಯ್ಲರ್, ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ ಇಡಿ ಟೈಲ್ ಲ್ಯಾಂಪ್ ಮುಂತಾದ ವ್ಯವಸ್ಥೆಗಳಿರಲಿದೆ.

ಆಯಾಮ (ಎಂಎಂ)
ಉದ್ದ: 1952
ಅಗಲ: 1213
ಎತ್ತರ: 1370
ಭಾರ: 1370 ಕೆ.ಜಿ.

ಪ್ರತಿಸ್ಪರ್ಧಿಗಳು: ಲಂಬೋರ್ಗಿನಿ ಹ್ಯುರಕನ್, ಆಡಿ ಆರ್8 ವಿ10 ಪ್ಲಸ್.

Most Read Articles

Kannada
English summary
Ferrari 488 GTB Roars Into Mumbai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X