ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 5 ಬಹುನಿರೀಕ್ಷಿತ ಕಾರುಗಳು!

By Nagaraja

ಆಟೋ ವಲಯದ ಪಾಲಿಗೆ 2016ನೇ ಮಾರ್ಚ್ ತಿಂಗಳು ಹೆಚ್ಚಿನ ಮಹತ್ವವನ್ನು ಗಿಟ್ಟಿಸಿಕೊಂಡಿದೆ. ಏಕೆಂದರೆ ಇದೇ ತಿಂಗಳಲ್ಲಿ ಐದು ಬಹು ನಿರೀಕ್ಷಿತ ಕಾರುಗಳು ಬಿಡುಗಡೆ ಭಾಗ್ಯ ಕಾಣಲಿದೆ.

Also Read: 2016 ಆಟೋ ಎಕ್ಸ್ ಪೋ ವಿಶೇಷ ಪುಟ

ವಿಸ್ತಾರವಾಗಿ ಹರಡಿರುವ ಭಾರತ ವಾಹನ ಮಾರುಕಟ್ಟೆ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿದ್ದು, ಇದನ್ನೇ ಗಮನ ವಹಿಸಿರುವ ಆಟೋ ಸಂಸ್ಥೆಗಳು ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ಮಗ್ನವಾಗಿದೆ. ಪ್ರಸ್ತುತ ಲೇಖನದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ. ಇದಕ್ಕಾಗಿ ಚಿತ್ರಪುಟದತ್ತ ಮುಂದುವರಿಯಿರಿ...

01. ಟಾಟಾ ಟಿಯಾಗೊ

01. ಟಾಟಾ ಟಿಯಾಗೊ

ಟಾಟಾಗೆ ಹೊಸ ಆಶಾಕಿರಣವಾಗಿರುವ ಟಿಯಾಗೊ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಪ್ರಾರಂಭದಲ್ಲಿ ಝಿಕಾ ಎಂಬ ಹೆಸರಿನೊಂದಿಗೆ ಗುರುತಿಸ್ಪಟ್ಟಿದ್ದ ಈ ಕಾರನ್ನು ಟಾಟಾ ನಡೆಸಿರುವ ಫೆಂಟಾಸ್ಟಿಕೊ ಹಂಟ್ ಅಭಿಯಾನದ ಬಳಿಕ ಟಿಯಾಗೊ ಎಂದು ಬದಲಾಯಿಸಲಾಗಿತ್ತು.

ಟಾಟಾ ಟಿಯಾಗೊ

ಟಾಟಾ ಟಿಯಾಗೊ

2016 ಮಾರ್ಚ್ ತಿಂಗಳಾಂತ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಟಿಯಾಗೊ ಕಾರನ್ನು ಸಂಸ್ಥೆಯ ಪುಣೆ, ಬ್ರಿಟನ್ ಹಾಗೂ ಇಟಲಿಯಲ್ಲಿ ಸ್ಥಿತಗೊಂಡಿರುವ ಡಿಸೈನ್ ಸ್ಟುಡಿಯೋಗಳಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಇದೇ ಕಾರಣಕ್ಕಾಗಿ ಒಂದು ಅಪ್ಪಟ ಕಾರಿನ ನಿರೀಕ್ಷೆ ಜಾಸ್ತಿಯಾಗಿದೆ.

02. ರೆನೊ ಡಸ್ಟರ್ ಎಎಂಟಿ

02. ರೆನೊ ಡಸ್ಟರ್ ಎಎಂಟಿ

2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿರುವ ರೆನೊ ಡಸ್ಟರ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಮಗದೊಂದು ಕಾರಾಗಿದೆ. ಇದರ 1.5 ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಎಎಂಟಿ ತಂತ್ರಗಾರಿಕೆ ಆಳವಡಿಸಲಾಗುವುದು.

ರೆನೊ ಡಸ್ಟರ್ ಎಎಂಟಿ

ರೆನೊ ಡಸ್ಟರ್ ಎಎಂಟಿ

ನೂತನ ಡಸ್ಟರ್ ಎಎಂಟಿ ಕಾರಿನಲ್ಲಿ ಇದೇ ಮೊದಲ ಬಾರಿಗೆ ಬ್ರೇಕ್ ಅಸಿಸ್ಟ್, ಚಾಲಕ ಸೀಟು ಬೆಲ್ಟ್ ವಾರ್ನಿಂಗ್, ಡ್ಯುಯಲ್ ಏರ್ ಬ್ಯಾಗ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್, ಇಎಸ್ ಪಿ, ಪಾರ್ಕಿಂಗ್ ಸೆನ್ಸಾರ್ ಇತ್ಯಾದಿ ವೈಶಿಷ್ಟ್ಯಗಳು ದೊರಕಲಿದೆ.

03. ಹೋಂಡಾ ಅಮೇಜ್ ಫೇಸ್ ಲಿಫ್ಟ್

03. ಹೋಂಡಾ ಅಮೇಜ್ ಫೇಸ್ ಲಿಫ್ಟ್

ಬಿಡುಗಡೆ ವೇಳೆ ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಂಡಿರುವ ಹೋಂಡಾ ಅಮೇಜ್ ಪ್ರತಿಸ್ಪರ್ಧಿಗಳ ಆಗಮನದೊಂದಿಗೆ ಹಿನ್ನೆಡೆಯನ್ನು ಅನುಭವಿಸಿತ್ತು. ಈಗ ಸಂಸ್ಥೆಯು ಹೆಚ್ಚಿನ ಬದಲಾವಣೆಗಳನ್ನು ತರುವ ಮೂಲಕ ಅಮೇಜ್‌ಗೆ ಹೊಸ ಸ್ವರೂಪವನ್ನು ನೀಡುವ ಇರಾದೆಯಲ್ಲಿದೆ.

ಹೋಂಡಾ ಅಮೇಜ್ ಫೇಸ್ ಲಿಫ್ಟ್

ಹೋಂಡಾ ಅಮೇಜ್ ಫೇಸ್ ಲಿಫ್ಟ್

ಮಾರ್ಚ್ 03ರಂದು ಬಿಡುಗಡೆಯಾಗಲಿರುವ ಹೋಂಡಾ ಅಮೇಜ್ ಫೇಸ್ ಲಿಫ್ಟ್ ಮಾದರಿಯಲ್ಲಿ ಬಿಆರ್ ವಿ ಪ್ರೇರಿತ ಡ್ಯಾಶ್ ಬೋರ್ಡ್, ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಟಚ್ ಸ್ಕ್ರೀನ್ ಎವಿಎನ್ ಸಿಸ್ಟಂ ಮತ್ತು ಪರಿಷ್ಕೃತ ಎಸಿ ವೆಂಟ್ಸ್ ಗಳು ಲಭ್ಯವಾಗಲಿದೆ.

04. ಮಾರುತಿ ಸುಜುಕಿ ವಿಟಾರಾ ಬ್ರಿಝಾ

04. ಮಾರುತಿ ಸುಜುಕಿ ವಿಟಾರಾ ಬ್ರಿಝಾ

ಬಹುಶ: ಈ ವರ್ಷದಲ್ಲಿ ಬಿಡುಗಡೆಯಾಗಲಿರುವ ಅತಿ ದೊಡ್ಡ ಲಾಂಚ್ ಮಾರುತಿ ವಿಟಾರಾ ಬ್ರಿಝಾ ಆಗಿರಲಿದೆ. ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ಆಗಮನವಾಗಲಿರುವ ಈ ಮಿನಿ ಎಸ್ ಯುವಿ ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದ್ದು, ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗಲಿದೆ.

ವಿಟಾರಾ ಬ್ರಿಝಾ

ವಿಟಾರಾ ಬ್ರಿಝಾ

ಮಾರುತಿ ಸುಜುಕಿ ವಿಟಾರಾ ಬ್ರಿಝಾ 6.50 ಲಕ್ಷ ರು.ಗಳಿಂದ 10 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ. ಅಂತೆಯೇ ಇದರ 1.3 ಲೀಟರ್ ಡಿಡಿಐಎಸ್ 200 ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಫೈವ್ ಸ್ಪೀಡ್ ಗೇರ್ ಬಾಕ್ಸ್ ಇರುತ್ತದೆ.

05. ಮಹೀಂದ್ರ ಕ್ವಾಂಟೊ ಫೇಸ್ ಲಿಫ್ಟ್

05. ಮಹೀಂದ್ರ ಕ್ವಾಂಟೊ ಫೇಸ್ ಲಿಫ್ಟ್

ಇತ್ತೀಚೆಗಷ್ಟೇ ಸಾಗಿದ ಆಟೋ ಎಕ್ಸ್ ಪೋದಿಂದ ದೂರವುಳಿಯುವ ಮೂಲಕ ವಾಹನ ಪ್ರೇಮಿಗಳಲ್ಲಿ ಕುತೂಹಲ ಕಾಯ್ದುಕೊಂಡಿರುವ ಮಹೀಂದ್ರ ಕ್ವಾಂಟೊ, ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಪರಿಷ್ಕೃತ ಕ್ವಾಂಟೊ

ಪರಿಷ್ಕೃತ ಕ್ವಾಂಟೊ

ನೂತನ ಕ್ವಾಂಟೊದಲ್ಲಿ ಎಂಹಾಕ್80 ಎಂಜಿನ್ ಬಳಕೆಯಾಗಲಿದೆ. ಇದರ 1.3 ಲೀಟರ್ ಡೀಸೆಲ್ ತ್ರಿ ಸಿಲಿಂಡರ್ ಎಂಜಿನ್ 230 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ 5 ಸ್ಪೀಡ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಇರಲಿದೆ.

ಇವನ್ನೂ ಓದಿ

ಮುಂಬರುವ 23 ಕಾರುಗಳು

Most Read Articles

Kannada
Read more on ಕಾರು cars
English summary
Most Expected Top 5 New Car models in March
Story first published: Monday, February 29, 2016, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X