ಮೊಬಿಲಿಯೊಗೆ ಮನಸೋತ ಅಮೇಜ್ ಬದಲಾವಣೆಯತ್ತ..!

By Nagaraja

ಪ್ರತಿಸ್ಪರ್ಧಿಗಳ ಆಗಮನದೊಂದಿಗೆ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕೊಂಚ ಹಿನ್ನಡೆ ಅನುಭವಿಸಿರುವ ಹೋಂಡಾ ಅಮೇಜ್ ಹೊಸ ಸ್ವರೂಪವನ್ನು ಪಡೆಯುವ ತವಕದಲ್ಲಿದೆ.

ಈ ನಡುವೆ ವಾಹನ ವಲಯಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಪರಿಷ್ಕೃತ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರು ಮೊಬಿಲಿಯೊ ಬಹು ಬಳಕೆಯ ವಾಹನಕ್ಕೆ (ಎಂಪಿವಿ) ಸಮಾನವಾದ ಒಳಮೈಯನ್ನು ಪಡೆಯಲಿದೆ.

ಹೋಂಡಾ ಅಮೇಜ್

2013 ದ್ವಿತಿಯಾರ್ಧದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ಹೋಂಡಾ ಅಮೇಜ್ ದೇಶಕ್ಕೆ ಕಾಲಿಟ್ಟಿರುವ ಮೊದಲ ಡೀಸೆಲ್ ಕಾಂಪಾಕ್ಟ್ ಸೆಡಾನ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬಿಡುಗಡೆ ವೇಳೆ ದೇಶದ ಅತ್ಯಂತ ಹೆಚ್ಚು ಇಂಧನ ಕ್ಷಮತೆಯ ಕಾರೆಂಬ ಗೌರವಕ್ಕೆ ಪಾತ್ರವಾಗಿದ್ದ ಅಮೇಜ್ ಗರಿಷ್ಠ ಮಾರಾಟವನ್ನು ಗಿಟ್ಟಿಸಿಕೊಂಡಿತ್ತು.

ಪ್ರಸ್ತುತ 2016 ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿರುವ ನಿರೀಕ್ಷೆ ಹೊಂದಿರುವ ಅತಿ ನೂತನ ಅಮೇಜ್, ಮೊಬಿಲಿಯೊಗೆ ಸಮಾನವಾದ ಡ್ಯಾಶ್ ಬೋರ್ಡ್, ಆಟೋ ಕ್ಲೈಮೇಟ್ ಕಂಟ್ರೋಲ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ನಿತರ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಇನ್ನುಳಿದಂತೆ ತ್ರಿ ಸ್ಪೋಕ್ ಸ್ಟೀರಿಂಗ್ ವೇಲ್, ಆಡಿಯೋ-ವಿಡಿಯೋ-ನೇವಿಗೇಷನ್ ಇರಲಿದೆ. ಇನ್ನು ಹೊರಮೈಯಲ್ಲಿ ಪರಿಷ್ಕೃತ ಫ್ರಂಟ್ ಗ್ರಿಲ್ ಹಾಗೂ ಸ್ವಭಾವ ರೇಖೆಗಳು ಕಂಡುಬರಲಿದೆ.

ಆದರೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಪ್ರಸ್ತುತ 1.5 ಲೀಟರ್ ಐ ವಿಟೆಕ್ ಪೆಟ್ರೋಲ್ ಎಂಜಿನ್ 109 ಎನ್‌ಎಂ ತಿರುಗುಬಲದಲ್ಲಿ 86.7 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅದೇ ರೀತಿ 1.2 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ 200 ಎನ್‌ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇವೆರಡು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಪಡೆಯಲಿದ್ದು, ಪೆಟ್ರೋಲ್ ಆಟೋಮ್ಯಾಟಿಕ್ ಬರುವ ಸಾಧ್ಯತೆಯಿದೆ.

Most Read Articles

Kannada
English summary
The New Honda Amaze Could Have Similar Interiors As The New Mobilio
Story first published: Thursday, January 21, 2016, 15:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X