ದಶಕಗಳ ಬಳಿಕ ಭಾರತಕ್ಕೆ ರಿ ಎಂಟ್ರಿ ಕೊಡಲಿರುವ ಐಕಾನಿಕ್ ಪ್ಯೂಜೊ

Written By:

ಫ್ರಾನ್ಸ್ ಮೂಲದ ಐಕಾನಿಕ್ ವಾಹನ ಸಂಸ್ಥೆಯಾಗಿರುವ ಪ್ಯೂಜೊ ಭಾರತಕ್ಕೆ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಇದನ್ನು ಸಂಸ್ಥೆ ಘೋಷಿಸಿದ್ದು, ಭಾರತದಲ್ಲಿ ಸೂಕ್ತ ಜೊತೆಗಾರರನ್ನು ಎದುರು ನೋಡುತ್ತಿದೆ ಎಂದಿದ್ದಾರೆ.

ಪ್ಯೂಜೊ ಭಾರತಕ್ಕೆ 2020ರ ವೇಳೆಯಾಗುವಾಗ ಪ್ರವೇಶಿಸಲಿದೆ. ಫ್ರಾನ್ಸ್ ನಲ್ಲಿ ನಡೆಯುತ್ತಿರುವ 2016 ಪ್ಯಾರಿಸ್ ಮೋಟಾರು ಶೋದಲ್ಲಿ ಇದನ್ನು ಪ್ರಕಟಿಸಲಾಗಿದೆ.

ದಶಕಗಳ ಬಳಿಕ ಭಾರತಕ್ಕೆ ರಿ ಎಂಟ್ರಿ ಕೊಡಲಿರುವ ಐಕಾನಿಕ್ ಪ್ಯೂಜೊ

ಕಳೆದ ಕೆಲವು ಸಮಯಗಳಿಂದ ಪ್ಯೂಜೊ ಭಾರತಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾಹಿತಿಗಳಿದ್ದವು. ಇದರಂತೆ ಗುಜರಾತ್ ನಲ್ಲಿ ಜಮೀನನ್ನು ಖರೀದಿಸಿದ ಸಂಸ್ಥೆಯು 2011ರಲ್ಲೇ ಮುಂಬೈನಲ್ಲಿ ವಾಣಿಜ್ಯ ಕಚೇರಿಯನ್ನು ತೆರೆದಿತ್ತು.

ದಶಕಗಳ ಬಳಿಕ ಭಾರತಕ್ಕೆ ರಿ ಎಂಟ್ರಿ ಕೊಡಲಿರುವ ಐಕಾನಿಕ್ ಪ್ಯೂಜೊ

ಅಷ್ಟೇ ಯಾಕೆ 2012 ಆಟೋ ಎಕ್ಸ್ ಪೋದಲ್ಲಿ ತನ್ನ ಬಹುನಿರೀಕ್ಷಿತ ಮಾದರಿಗಳಾದ 3008 ಹೈಬ್ರಿಡ್, ಆರ್ ಸಿ ಝಡ್, 3008 ಕ್ರಾಸೋವರ್ ಹಾಗೂ 908 ಲಿಮ್ಯಾನ್ ಆವೃತ್ತಿಗಳನ್ನು ಪರಿಚಯಿಸಿತ್ತು.

ದಶಕಗಳ ಬಳಿಕ ಭಾರತಕ್ಕೆ ರಿ ಎಂಟ್ರಿ ಕೊಡಲಿರುವ ಐಕಾನಿಕ್ ಪ್ಯೂಜೊ

ಆದರೆ ಆರ್ಥಿಕ ಅಸ್ಥಿರತೆಯ ಹಿನ್ನಲೆಯಲ್ಲಿ ಪ್ಯೂಜೊ ತನ್ನ ಯೋಜನೆಗಳೆನ್ನಲ್ಲ ಮುಂದೂಡಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಭಾರತಕ್ಕೆ ಮರು ಪ್ರವೇಶಿಸುವ ಇರಾದೆಯಲ್ಲಿದೆ.

ದಶಕಗಳ ಬಳಿಕ ಭಾರತಕ್ಕೆ ರಿ ಎಂಟ್ರಿ ಕೊಡಲಿರುವ ಐಕಾನಿಕ್ ಪ್ಯೂಜೊ

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ನೆರವನ್ನು ಪ್ಯೂಜೊ ಪಡೆಯುವ ಸಾಧ್ಯತೆಯಿದೆ.

ದಶಕಗಳ ಬಳಿಕ ಭಾರತಕ್ಕೆ ರಿ ಎಂಟ್ರಿ ಕೊಡಲಿರುವ ಐಕಾನಿಕ್ ಪ್ಯೂಜೊ

ಇತಿಹಾಸದತ್ತ ಗಮನ ಹಾಯಿಸಿದಾಗ 1990ರ ದಶಕದಲ್ಲಿ ಪ್ರೀಮಿಯರ್ ಆಟೋಮೊಬೈಲ್ಸ್ ಸಹಯೋಗದಲ್ಲಿ ಭಾರತಕ್ಕೆ ಪ್ರವೇಶಿಸಿದ್ದ ಪ್ಯೂಜೊ 309 ಸೆಡಾನ್ ಕಾರನ್ನು ಪರಿಚಯಿಸಿತ್ತು. ಆದರೆ ಬಳಿಕ ಕಾರ್ಮಿಕ ಸಮಸ್ಯೆ ಹಾಗೂ ಆರ್ಥಿಕ ತೊಂದರೆಯಿಂದಾಗಿ ಹಿಂಪಡೆದಿತ್ತು.

Read more on ಕಾರು peugeot
English summary
Peugeot Is Keen To Enter Indian Market — Report
Story first published: Saturday, October 1, 2016, 15:42 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark