ಅತಿ ಶೀಘ್ರದಲ್ಲೇ ರೆನೊ ಡಸ್ಟರ್ ಎಎಂಟಿ ಬಿಡುಗಡೆ

By Nagaraja

2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿರುವ ರೆನೊ ಡಸ್ಟರ್ ಎಂಎಂಟಿ ಅತಿ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಈ ಬಗ್ಗೆ ಸ್ಪಷ್ಟ ಯೋಜನೆ ಹೊಂದರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು, ತನ್ನ ಜನಪ್ರಿಯ ಡಸ್ಟರ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಯನ್ನು ಮಾರ್ಚ್ ವೇಳೆಯಾಗುವಾಗ ಬಿಡುಗಡೆ ಮಾಡುವ ಇರಾದೆ ಹೊಂದಿದೆ.

ಡಸ್ಟರ್ 1.5 ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಎಎಂಟಿ ಗೇರ್ ಬಾಕ್ಸ್ ಆಳವಡಿಸಲಾಗುವುದು. ಇದು 248 ಎನ್‌ಎಂ ತಿರುಗುಬಲದಲ್ಲಿ 108.50 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ರೆನೊ ಡಸ್ಟರ್ ಎಎಂಟಿ


ನಗರ ನಿವಾಸಿಗಳಿಗೆ ಹೆಚ್ಚಿನ ರಸದೌತಣ ನೀಡಲಿರುವ ರೆನೊ ಡಸ್ಟರ್ ಎಎಂಟಿ ಪ್ರವೇಶದೊಂದಿಗೆ ಭರ್ಜರಿ ಪುನರಾಗಮನ ಮಾಡಿಕೊಳ್ಳಲಿದೆ. ಇದು ಪ್ರಯಾಣಿಕರಿಗೆ ಹೆಚ್ಚು ಪ್ರೀಮಿಯಂ ಅನುಭವವನ್ನು ನೀಡಲಿದೆ.

ಕಾರಿನೊಳಗೆ ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ಸೇವೆಯೂ ಇರಲಿದ್ದು, ಗರಿಷ್ಠ ಸ್ಥಳಾವಕಾಶವನ್ನು ಕೊಡಲಾಗುವುದು. ಇನ್ನುಳಿದಂತೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಇದೇ ಮೊದಲ ಬಾರಿಗೆ ಬ್ರೇಕ್ ಅಸಿಸ್ಟ್, ಚಾಲಕ ಸೀಟು ಬೆಲ್ಟ್ ವಾರ್ನಿಂಗ್, ಡ್ಯುಯಲ್ ಏರ್ ಬ್ಯಾಗ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್, ಇಎಸ್ ಪಿ, ಪಾರ್ಕಿಂಗ್ ಸೆನ್ಸಾರ್ ಇತ್ಯಾದಿ ವೈಶಿಷ್ಟ್ಯಗಳು ದೊರಕಲಿದೆ.

ಹಾಗಿದ್ದರೂ ಡಸ್ಟರ್ ಎಎಂಟಿ ಕಾರಿನ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬರಲಿದೆ. ಇದು ಈಗ ಮಾರಾಟದಲ್ಲಿರುವ ಮಾದರಿಗಿಂತಲೂ ಅಂದಾಜು 25,000 ರು.ಗಳಷ್ಟು ದುಬಾರಿಯೆನಿಸಲಿದೆ. ನೂತನ ಡಸ್ಟರ್ ಎಎಂಟಿ ಬಿಡುಗಡೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

Most Read Articles

Kannada
English summary
Renault Duster AMT Facelift Launching In India By March
Story first published: Thursday, February 18, 2016, 9:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X