ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಸ್ವಯಂಚಾಲಿತ ಕಾರು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಬ್ರಿಟನ್ ಸರಕಾರದ ಜೊತೆಗೆ ಟಾಟಾ, ಜಾಗ್ವಾರ್ ಮತ್ತು ಫೋರ್ಡ್ ಸಂಸ್ಥೆಗಳು ಕೈಜೋಡಿಸಿಕೊಂಡಿದೆ.

By Nagaraja

ಬ್ರಿಟನ್ ನಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಸ್ವಯಂಚಾಲಿತ ರಸ್ತೆಯಲ್ಲಿ ಭಾರತೀಯ ಮೂಲದ ಕಾರೊಂದರ ಪರೀಕ್ಷೆ ಆರಂಭವಾಗಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಪೋರ್ಡ್ ಜೊತೆಗೆ ಟಾಟಾ ಸಂಸ್ಥೆಯ ಅತಿ ನೂತನ ಟಿಯಾಗೊ ಸ್ವಯಂಚಾಲಿತ ಕಾರಿನ ಟೆಸ್ಟಿಂಗ್ ಪ್ರಕ್ರಿಯೆ ಬ್ರಿಟನ್ ನಲ್ಲಿ ನಡೆಯುತ್ತಿರುವುದು ದೇಶ ವಾಸಿಗಳಿಗೂ ಹೆಮ್ಮೆಪಡುವಂತಾಗಿದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಸ್ವಯಂಚಾಲಿತ ಅಭಿಯಾನಕ್ಕೆ ಪ್ರೋತ್ಸಾಹ ತುಂಬುತ್ತಿರುವ ಬ್ರಿಟನ್ ಸರಕಾರವು ಈ ಮೂರು ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿರುವ ಸ್ವಯಂಚಾಲಿತ ಕಾರುಗಳ ಪರೀಕ್ಷೆಯನ್ನು ನಡೆಸಲು ಸಮ್ಮತಿಯನ್ನು ಸೂಚಿಸಿದೆ. ಈ ನಿಟ್ಟನಲ್ಲಿ 20 ಮಿಲಿಯನ್ ಪೌಂಡ್ ಗಳಷ್ಟು ಬೃಹತ್ ಹೂಡಿಕೆಯನ್ನು ಮಾಡುತ್ತಿದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಇಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಭಾರತದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಒಡೆತನದಲ್ಲಿದೆಯೆಂಬುದು ಗಮನಾರ್ಹವೆನಿಸುತ್ತದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

2018ರ ವೇಳೆಯಾಗುವಾಗ ಕಾವೆಂಟ್ರಿ ಮತ್ತು ಮಿಲ್ಟನ್ ಕೀನೆಸ್ ಸಾರ್ವಜನಿಕ ರಸ್ತೆಗಳಲ್ಲಿ ಪ್ರಾಯೋಗಿಕ ಸಂಚಾರವು ಆರಂಭವಾಗಲಿದೆ. ಇದರಂಗವಾಗಿ ಈ ಎಲ್ಲ ಮೂರು ಸಂಸ್ಥೆಗಳು ತಂತ್ರಜ್ಞಾನ ಪರೀಕ್ಷೆಯನ್ನು ಆರಂಭಿಸಿದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಪ್ರಸ್ತುತ ವಾಹನ ವ್ಯವಸ್ಥೆಯಲ್ಲಿ ಟ್ರಾಫಿಕ್ ಲೈಟ್ ನಿಂದ ಆರಂಭಿಸಿ ಚಾಲಕನಿಗೆ ಸಲಹೆ ನೀಡುವ ಮೂಲ ಸೌಕರ್ಯಗಳು ಮತ್ತು ಅವುಗಳ ಸಂವಹನವನ್ನು ಒಳಗೊಂಡಿರಲಿದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಈ ವ್ಯವಸ್ಥೆಗೆ 'ಗ್ರೀನ್ ಲೈಟ್ ಓಪ್ಟಿಮಲ್ ಸ್ಪೀಡ್ ಅಡ್ವೈಸರಿ' ಎಂಬ ಹೆಸರನ್ನಿಡಲಾಗಿದೆ. ಇದು ರೆಡ್ ಲೈಟ್ ಗಳಲ್ಲಿ ಕಾಯುವಿಕೆ ಅವಧಿಯನ್ನು ತಗ್ಗಿಸಲು ಮತ್ತು ಎಂಜಿನ್ ಕ್ರಿಯಾತ್ಮಕತೆಯಲ್ಲಿ ಎಮಿಷನ್ ತೊಂದರೆಗಳನ್ನು ಕಡಿಮೆ ಮಾಡಿ ಗರಿಷ್ಠ ಎಂಜಿನ್ ಕ್ಷಮತೆ ಕಾಪಾಡಲು ಗುರಿಯಿರಿಸಿಕೊಂಡಿದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಫೋರ್ಡ್ ಪ್ರಕಾರ ವ್ಯಕ್ತಿಯೋರ್ವ ವರ್ಷವೊಂದರಲ್ಲಿ ಎರಡು ದಿನಗಳಷ್ಟು ಕಾಲ ಟ್ರಾಫಿಕ್ ಸಿಗ್ನಲ್ ನಲ್ಲಿಯೇ ಕಾಲ ಕಳೆಯುತ್ತಾನೆ. ಹಾಗಾಗಿ ಈ ನಿಯಂತ್ರಣ ವ್ಯವಸ್ಥೆಯು ಗ್ರೀನ್ ಲೈಟ್ ನಲ್ಲಿ ಎಷ್ಟು ಹೊತ್ತು ಕಾಯಬೇಕು ಎಂಬುದರ ಕುರಿತಾಗಿ ಚಾಲಕನಿಗೆ ಮಾಹಿತಿಯನ್ನು ಕೊಡಲಿದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಅಡ್ವಾನ್ಸ್ಡ್ ಹೈವೇ ಅಸಿಸ್ಟ್ ಗಳಂತಹ ಅರೆ ಸ್ವಯಂಚಾಲಿತ ವ್ಯವಸ್ಥೆಗಳನ್ನು ಜಾಗ್ವಾರ್ ಲ್ಯಾಂಡ್ ರೋವರ್ ಅವಿಷ್ಕರಿಸಲಿದೆ. ಇದು ಕೈ ರಹಿತ, ಪೆಡಲ್ ರಹಿತ ಚಾಲನಾ ವ್ಯವಸ್ಥೆಗಳನ್ನು ಹೊಂದಿರಲಿದ್ದು, ಸ್ವಯಂಚಾಲಿತವಾಗಿ ವಾಹನಗಳನ್ನು ಓವರ್ ಟೇಕ್ ಮಾಡಿ ಮುಂದಕ್ಕೆ ಚಲಿಸಲು ನೆರವಾಗಲಿದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಎಲೆಕ್ಟ್ರಾನಿಕ್ ಎಮರ್ಜನ್ಸಿ ಬ್ರೇಕ್ ಲೈಟ್ ಅಸಿಸ್ಟ್ ಮಗದೊಂದು ನಿಖರ ಬ್ರೇಕಿಂಗ್ ಗಾಗಿ ಇರುವ ತಂತ್ರಜ್ಞಾನ ವ್ಯವಸ್ಥೆಯಾಗಿದೆ. ಪ್ರಸ್ತುತ ತಂತ್ರಗಾರಿಕೆ ಮುಖಾಂತರ 500 ಮೀಟರ್ ವ್ಯಾಪ್ತಿಯಲ್ಲಿರುವ ಇತರೆ ವಾಹನಗಳನ್ನು ಗುರುತಿಸಿಕೊಳ್ಳಲಿದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಸಾರ್ವಜನಿಕ ಸೇರಿದಂತೆ ಆಫ್ ರೋಡ್ ರಸ್ತೆಗಳಲ್ಲೂ ಸ್ವಯಂಚಾಲಿತ ವ್ಯವಸ್ಥೆಗಳನ್ನು ಆಳವಡಿಸಿಕೊಳ್ಳುವುದು ಜಾಗ್ವಾರ್ ಗುರಿಯಾಗಿದೆ. ಅಲ್ಲದೆ ಎಲ್ಲ ಹವಾಮಾನ ಪರಿಸ್ಥಿತಿಗೂ ಹೊಂದಿಕೆಯಾಗುವ ಗುರಿ ಹೊಂದಿದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಈ ನಿಟ್ಟಿನಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ 100ರಷ್ಟು ಪ್ರಾಯೋಗಿಕ ಕಾರುಗಳನ್ನು ಜಾಗ್ವಾರ್ ರಸ್ತೆಗಿಳಿಸಲಿದೆ. ಇದು 41 ಮೈಲು ದೂರದ ಕಾಂವೆಟ್ರಿ ಮತ್ತು ಮಿಲ್ಟನ್ ಕೀನೆಸ್ ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷೆಗೊಳಪಡಲಿದೆ.

ಬ್ರಿಟನ್‌ನಲ್ಲಿ ಸಿದ್ಧಪಡಿಸಿದ ಸ್ವಯಂಚಾಲಿತ ರಸ್ತೆಯಲ್ಲಿ ಅಬ್ಬರಿಸಿದ ಟಾಟಾ ಕಾರು

ಒಟ್ಟಿನಲ್ಲಿ ಸ್ವಯಂಚಾಲಿತ ಕಾರುಗಳ ತಂತ್ರಜ್ಞಾನದ ಅಭಿವೃದ್ಧಿಗಾಗಿ ಬ್ರಿಟನ್ ಸರಕಾರದ ಜೊತೆಗೆ ಟಾಟಾ ಮೋಟಾರ್ಸ್, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಫೋರ್ಡ್ ಕೈಜೋಡಿಸಿಕೊಂಡಿರುವುದು ಜಾಗತಿಕ ವಾಹನ ಬೆಳವಣಿಗೆಯ ನಿಟ್ಟಿನಲ್ಲಿ ಅತ್ಯುತ್ತಮವೆನಿಸಿಕೊಂಡಿದೆ.

ವಿಡಿಯೋ ವೀಕ್ಷಿಸಿ

Most Read Articles

Kannada
English summary
Tata Tiago Takes Part In Jaguar Land Rover Autonomous Tech Programme
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X