ಮುಖಭಂಗ; 2016 ಆರ್ಥಿಕ ಸಾಲಿನಲ್ಲಿ ಮಕಾಡೆ ಮಲಗಿದ ಕಾರುಗಳು

Written By:

2015-16ನೇ ಆರ್ಥಿಕ ಸಾಲಿನಲ್ಲಿ ಭಾರತೀಯ ಪ್ರಯಾಣಿಕ ಕಾರು ವಿಭಾಗ ಶೇಕಡಾ 7.8ರಷ್ಟು ಏರುಗತಿ ಸಾಧಿಸಿದೆ. ಒಂದೆಡೆ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿದ ಕಾರುಗಳು ಮಿಂಚಿನ ಪ್ರದರ್ಶನ ನೀಡುತ್ತಿದ್ದಲ್ಲಿ ಆಗಲೇ ಮಾರಾಟದಲ್ಲಿರುವ ಕಾರುಗಳು ಭಾರಿ ಹಿನ್ನೆಡೆಗೆ ಒಳಗಾಗಿದ್ದು ಮುಖಭಂಗ ಅನುಭವಿಸಿದೆ.

ಈ ಪೈಕಿ ಫಿಯೆಟ್ ಲಿನಿಯಾ, ಫಿಯೆಟ್ ಅವೆಂಚ್ಯುರಾ, ಷೆವರ್ಲೆ ಸೈಲ್ ಯುವಿಎ ಮತ್ತು ಹ್ಯುಂಡೈ ಎಲಂಟ್ರಾ ಇತ್ಯಾದಿ ಮಾದರಿಗಳು ಕಳಪೆ ಪ್ರದರ್ಶನವನ್ನು ನೀಡಿದೆ. ಪ್ರಸ್ತುತ ಲೇಖನದಲ್ಲಿ 2016ನೇ ಆರ್ಥಿಕ ಸಾಲಿನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿರುವ 10 ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

10. ಜೆಟ್ಟಾ

10. ಜೆಟ್ಟಾ

ಫೋಕ್ಸ್ ವ್ಯಾಗನ್ ಜೆಟ್ಟಾ 2016ನೇ ಆರ್ಥಿಕ ಸಾಲಿನಲ್ಲಿ ಕಳಪೆ ಮಾರಾಟ ಅನುಭವಿಸಿರುವ ಕಾರುಗಳ ಪೈಕಿ ಕೊನೆಯ ಸ್ಥಾನದಲ್ಲಿದೆ. ಕಳೆದ ವರ್ಷ 2165 ಯುನಿಟ್ ಗಳಷ್ಟು ಮಾರಾಟಕನ್ನು ಕಂಡುಕೊಂಡಿದ್ದ ಜೆಟ್ಟಾ, ಈ ಬಾರಿ 1940 ಯುನಿಟ್ ಗಳಷ್ಟು ಮಾರಾಟ ಸಾಧಿಸಿದೆ. ಈ ಮೂಲಕ ಕಳೆದ ಬಾರಿಗಿಂತಲೂ ಶೇಕಡಾ 10ರಷ್ಟು ಮಾರಾಟ ಇಳಿಕೆ ಕಂಡಿದೆ.

09. ಅವೆಂಚ್ಯುರಾ

09. ಅವೆಂಚ್ಯುರಾ

ಫಿಯೆಟ್ ಪಾಲಿಗೆ ಹಚ್ಚಿನ ನಿರೀಕ್ಷೆಯನ್ನುಂಟು ಮಾಡಿದರೂ ಭಾರತೀಯ ಗ್ರಾಹಕರು ಮಾತ್ರ ಅವೆಂಚ್ಯುರಾಗೆ ಗ್ರೀನ್ ಸಿಗ್ನಲ್ ನೀಡಲು ನಿರಾಕರಿಸಿದ್ದಾರೆ. ಪರಿಣಾಮ 2016 ಆರ್ಥಿಕ ಸಾಲಿನಲ್ಲಿ 1906 ಯುನಿಟ್ ಗಳಷ್ಟೇ ಮಾರಾಟ ಸಾಧಿಸಿರುವ ಅವೆಂಚ್ಯುರಾ ಇದೇ ಮೊದಲ ಬಾರಿಗೆ ಅತ್ಯಂತ ಕಳಪೆ ರೀತಿಯಲ್ಲಿ ಮಾರಾಟವಾಗಿರುವ ಅಗ್ರ 10 ಕಾರುಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಈ ಮೂಲಕ ಫಿಯೆಟ್ ಶೇಕಡಾ 22ರಷ್ಟು ಮಾರಾಟ ಇಳಿಕೆ ಕಂಡಿದೆ.

 08. ಪಲ್ಸ್

08. ಪಲ್ಸ್

ಕಳೆದ ಸಾಲಿನಲ್ಲಿ 2301 ಯುನಿಟ್ ಗಳ ಮಾರಾಟದೊಂದಿಗೆ 10ನೇ ಸ್ಥಾನದಲ್ಲಿದ್ದ ರೆನೊ ಪಲ್ಸ್ ಮತ್ತಷ್ಟು ಹಿನ್ನಡೆಗೊಳಗಾಗಿದ್ದು, 1712 ಯುನಿಟ್ ಗಳ ಮಾರಾಟದೊಂದಿಗೆ ಎಂಟನೇ ಸ್ಥಾನಕ್ಕೆ ಕುಸಿದಿದೆ. ತನ್ಮೂಲಕ ಶೇಕಡಾ 26ರಷ್ಟು ಮಾರಾಟ ಕುಸಿತಕ್ಕೊಳಗಾಗಿದೆ.

07. ಎಲಂಟ್ರಾ

07. ಎಲಂಟ್ರಾ

ಹ್ಯುಂಡೈ ನೂತನ ಕಾರುಗಳು ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿರುವಾಗಲೇ ಆಗಲೇ ಮಾರಾಟದಲ್ಲಿರುವ ಎಲಂಟ್ರಾ ಇದೇ ಮೊದಲ ಬಾರಿಗೆ ಕಳಪೆ ಮಾರಾಟವಾಗುತ್ತಿರುವ ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಖಭಂಗ ಅನುಭವಿಸಿದೆ.

06. ಸೈಲ್ ಯುವಿಎ

06. ಸೈಲ್ ಯುವಿಎ

ಅಮೆರಿಕ ಜನರಲ್ ಮೋಟಾರ್ಸ್ ಅಧೀನತೆಯಲ್ಲಿರುವ ಷೆವರ್ಲೆ ಸೈಲ್ ಯುವಿಎ 1507 ಯುನಿಟ್ ಗಳಷ್ಟೇ ಮಾರಾಟ ಕಂಡುಕೊಂಡಿದ್ದು, ಶೇಕಡಾ 64ರಷ್ಟು ಹಿನ್ನಡೆಗೊಳಗಾಗಿದೆ.

05. ಲಿನಿಯಾ

05. ಲಿನಿಯಾ

ಫಿಯೆಟ್ ಲಿನಿಯಾ 2016ನೇ ಆರ್ಥಿಕ ಸಾಲಿನಲ್ಲಿ 1447 ಯುನಿಟ್ ಗಳ ಮಾರಾಟದೊಂದಿಗೆ ಶೇಕಡಾ 37ರಷ್ಟು ಮಾರಾಟ ಇಳಿಕೆ ಕಂಡಿದೆ.

04. ಕ್ರೂಜ್

04. ಕ್ರೂಜ್

ಪಟ್ಟಿಯಲ್ಲಿ ಷೆವರ್ಲೆಯ ಮಗದೊಂದು ಕ್ರೂಜ್ ಮಾದರಿಯು ಕಾಣಿಸಿಕೊಂಡಿದ್ದು, ಕೇವಲ 935 ಯುನಿಟ್ ಗಳ ಮಾರಾಟದೊಂದಿಗೆ ಶೇಕಡಾ 33ರಷ್ಟು ಇಳಿಕೆ ಕಂಡುಬಂದಿದೆ.

03. ಸ್ಕಾಲಾ

03. ಸ್ಕಾಲಾ

2015-16ನೇ ಆರ್ಥಿಕ ಸಾಲಿನಲ್ಲಿ ಕೇವಲ 830ರಷ್ಟೇ ಮಾರಾಟ ಕಂಡಿರುವ ರೆನೊ ಸ್ಕಾಲಾ ಶೇಕಾಡ 44ರಷ್ಟು ಹಿನ್ನಡೆ ಅನುಭವಿಸಿದೆ. ಕಳೆದ ವರ್ಷ ಸ್ಕಾಲಾ ಮಾದರಿಯು 1473 ಯುನಿಟ್ ಗಳ ಮಾರಾಟದೊಂದಿಗೆ ಏಳನೇ ಸ್ಥಾನದಲ್ಲಿತ್ತು.

02. ವೈಬ್

02. ವೈಬ್

ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ವೈಬ್ ಮಾರಾಟಕ್ಕೆ ಹೆಚ್ಚೇನು ಸದ್ದು ಮಾಡಲಿದೆ. ಇದು ಮಾರಾಟದಲ್ಲೂ ಪ್ರತಿಬಿಂಬಿಸುತ್ತಿದ್ದು, 609 ಯುನಿಟ್ ಗಳ ಮಾರಾಟದೊಂದಿಗೆ ಶೇಕಡಾ 55ರಷ್ಟು ಮಾರಾಟ ಹಿನ್ನಡೆ ಅನುಭವಿಸಿದೆ.

01. ಫ್ಲೂಯೆನ್ಸ್

01. ಫ್ಲೂಯೆನ್ಸ್

ಭಾರತದಲ್ಲಿ ಅತ್ಯಂಕ ಕಳಪೆ ಮಾರಾಟವಾಗುತ್ತಿರುವ ಕಾರು ಎಂಬ ಕಪ್ಪು ಚುಕ್ಕೆಗೆ ರೆನೊ ಫ್ಲೂಯೆನ್ಸ್ ಒಳಗಾಗಿದೆ. ಮಾರುಕಟ್ಟೆಯಲ್ಲಿದ್ದು ಇಲ್ಲದಂತಿರುವ ರೆನೊ ಫ್ಯೂಯೆನ್ಸ್ 2015-16ನೇ ಆರ್ಥಿಕ ಸಾಲಿನಲ್ಲಿ ಬರಿ 113 ಯುನಿಟ್ ಗಳ ಮಾರಾಟವನ್ನು ಗಿಟ್ಟಿಸಿಕೊಂಡಿದೆ. ಈ ಮೂಲಕ ಕಳೆದ ಬಾರಿಗಿಂತಲೂ ಶೇಕಡಾ 51ರಷ್ಟು ಮಾರಾಟ ಇಳಿಕೆ ಕಂಡಿದೆ. ಕಳೆದ ವರ್ಷವೂ ರೆನೊ ಫ್ಯೂಯೆನ್ಸ್ ದೇಶದ ಅತ್ಯಂತ ಕಳಪೆ ಮಾರಾಟದ ಕಾರೆಂಬ ಅವಕೃಪೆಗೆ ಒಳಗಾಗಿತ್ತು ಎಂಬುದು ಇಲ್ಲಿ ಗಮನಾರ್ಹ.

Read more on ಕಾರು cars
English summary
Ten Worst Selling Cars In FY 2016
Story first published: Wednesday, April 20, 2016, 12:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark