ಟೆಸ್ಲಾ ಮಾಡೆಲ್ 3 ವಿದ್ಯುತ್ ಚಾಲಿತ ಕಾರು ಬಿಡುಗಡೆ

Written By:

ಅಮೆರಿಕದ ಖ್ಯಾತ ವಿದ್ಯುತ್ ಚಾಲಿತ ಕಾರು ಸಂಸ್ಥೆ ಟೆಸ್ಲಾ ಮೋಟಾರ್ಸ್ ಕಂಪನಿಯು ಅತಿ ನೂತನ 'ಮಾಡೆಲ್ 3' ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದೆ. ಅಲ್ಲದೆ ನೂತನ ಕಾರು ಪ್ರವೇಶಿಸಿದ ಬೆನ್ನಲ್ಲೇ ಅಭೂತಪೂರ್ವ ಪ್ರತಿಕ್ರಿಯೆಯು ವ್ಯಕ್ತವಾಗುತ್ತಿದೆ.

ಟೆಸ್ಲಾ ಮೋಟಾರ್ಸ್ ಮಾಡೆಲ್ ಎಸ್ ಬಿಡುಗಡೆಯಾದ ಮೊದಲ ದಿನದಲ್ಲೇ 1,35,000 ಬುಕ್ಕಿಂಗ್ ದಾಖಲಾಗಿದೆ. ಅಲ್ಲದೆ ಏಕಮಾತ್ರ ಚಾರ್ಜ್ ನಲ್ಲಿ 346 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸಬಹುದಾಗಿದೆ.

To Follow DriveSpark On Facebook, Click The Like Button
ಟೆಸ್ಲಾ ಮಾಡೆಲ್ 3 ವಿದ್ಯುತ್ ಚಾಲಿತ ಕಾರು ಬಿಡುಗಡೆ

ಇಲ್ಲಿ ಗಮನಾರ್ಹ ಸಂಗತಿಯೆಂದರೆ 2017 ಸಾಲಿನಲ್ಲಷ್ಟೇ ಟೆಸ್ಲಾ ಮಾಡೆಲ್ ಎಸ್ 3 ವಿತರಣೆ ಪ್ರಕ್ರಿಯೆ ನಡೆಯಲಿದೆ. ಈ ನಡುವೆ ಪರಿಸರ ಸ್ನೇಹಿ ಕಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯ ಬುಕ್ಕಿಂಗ್ ಗಿಟ್ಟಿಸಿಕೊಂಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಟೆಸ್ಲಾ ಮಾಡೆಲ್ 3 ವಿದ್ಯುತ್ ಚಾಲಿತ ಕಾರು ಬಿಡುಗಡೆ

ಟೆಸ್ಲಾ ಮಾಡೆಲ್ ಎಸ್ ಕೇವಲ ಆರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದು ಕೂಡಾ ಎಲೆಕ್ಟ್ರಿಕ್ ಮೋಟಾರು ಹೊಂದಿರುವ ಕಾರಿನ ಗಮನಾರ್ಹ ಸಾಧನೆಯಾಗಿದೆ.

ಟೆಸ್ಲಾ ಮಾಡೆಲ್ 3 ವಿದ್ಯುತ್ ಚಾಲಿತ ಕಾರು ಬಿಡುಗಡೆ

ತವರೂರಾದ ಅಮೆರಿಕದಲ್ಲಿ ಟೆಸ್ಲಾ ಮಾಡೆಲ್ ಎಸ್ 35000 ಅಮೆರಿಕನ್ ಡಾಲರ್ ಗಳಷ್ಟು ದುಬಾರಿಯೆನಿಸಲಿದೆ. ಇದನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿದಾಗ ಸರಿ ಸುಮಾರು 23 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ.

ಟೆಸ್ಲಾ ಮಾಡೆಲ್ 3 ವಿದ್ಯುತ್ ಚಾಲಿತ ಕಾರು ಬಿಡುಗಡೆ

ಟೆಸ್ಲಾ ಮಾಡೆಲ್ ಎಸ್ ಕಾರಿನಲ್ಲಿರುವ ಲಿಥಿಯಂ ಇಯಾನ್ ಬ್ಯಾಟರಿಗಳನ್ನು ಅಮೆರಿಕದ ನೆವೆಡಾದಲ್ಲಿ ಸ್ಥಿತಗೊಂಡಿರುವ ಬೃಹತ್ತಾದ ಗಿಗಾ ಫ್ಯಾಕ್ಟರಿ 1ರಲ್ಲಿ ನಿರ್ಮಾಣ ಮಾಡಲಾಗುವುದು.

ಟೆಸ್ಲಾ ಮಾಡೆಲ್ 3 ವಿದ್ಯುತ್ ಚಾಲಿತ ಕಾರು ಬಿಡುಗಡೆ

ವಿನ್ಯಾಸದ ಬಗ್ಗೆ ಮಾತನಾಡುವುದಾದಲ್ಲಿ ಮಾಡೆಲ್ ಎಸ್ ಸೆಡಾನ್ ಮತ್ತು ಮಾಡೆಲ್ ಎಕ್ಸ್ ಕ್ರೀಡಾ ಬಳಕೆಯ ವಾಹನದ ಸಂಯೋಜನೆಯನ್ನು ನೂತನ ಮಾಡೆಲ್ 3 ಕಾರಿನಲ್ಲಿ ಕಾಣಬಹುದಾಗಿದೆ.

ಟೆಸ್ಲಾ ಮಾಡೆಲ್ 3 ವಿದ್ಯುತ್ ಚಾಲಿತ ಕಾರು ಬಿಡುಗಡೆ

ಕಾರಿನೊಳಗೆ ದೊಡ್ಡದಾದ ಸಮತಲವಾದ ಟೆಲಿಮ್ಯಾಟಿಕ್ಸ್ ಟಚ್ ಸ್ಕ್ರೀನ್ ಕಾಣಬಹುದಾಗಿದೆ. ಇನ್ನು ಪ್ಯಾನರಾಮಿಕ್ ರೂಫ್ ಪ್ರಮುಖ ಆಕರ್ಷಣೆಯಾಗಲಿದೆ.

ಟೆಸ್ಲಾ ಮಾಡೆಲ್ 3 ವಿದ್ಯುತ್ ಚಾಲಿತ ಕಾರು ಬಿಡುಗಡೆ

ಮುಂದಿನ ದಿನಗಳಲ್ಲಿ ಜನರಲ್ ಮೋಟಾರ್ಸ್, ಫೋಕ್ಸ್ ವ್ಯಾಗನ್ ಮತ್ತು ಆಡಿ ಸಹ ಸುಸ್ಥಿರ ಪರಿಸರಕ್ಕಾಗಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಯ ಮಾಡುವ ಯೋಜನೆಯಲ್ಲಿದೆ. ಇವೆಲ್ಲವೂ ನಿಕಟ ಪೈಪೋಟಿಗೆ ವೇದಿಕೆಯೊದಗಿಸಲಿದೆ.

English summary
Tesla Model 3 Launched, Prices Start At $35,000, Deliveries Start in 2017
Story first published: Friday, April 1, 2016, 15:31 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark