ಫ್ರಾಂಕ್‌ಫರ್ಟ್ ಆಟೋ ಶೋ: ಗಮನ ಸೆಳೆದ ಸುಬಾರು ಹೊಸ ಕಾರು ಇಂಪ್ರೆಜಾ..!!

Written By:

ಅಂತರ್‌ರಾಷ್ಟ್ರೀಯ ಮಟ್ಟದ ಮೋಟಾರ್ ಸ್ಪೋರ್ಟ್ ವಿಭಾಗದಲ್ಲಿ ತನ್ನದೇ ಆದ ಖ್ಯಾತಿ ಹೊಂದಿರುವ ಸುಬಾರು ಸಂಸ್ಥೆಯು ಪ್ರತಿಷ್ಠಿತ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ತನ್ನ ಬಹುನೀರಿಕ್ಷಿತ ಹ್ಯಾಚ್‌ಬ್ಯಾಕ್ ಇಂಪ್ರೆಜಾ ಕಾರು ಆವೃತ್ತಿಯನ್ನು ಪ್ರದರ್ಶನಗೊಳಿಸಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ.

To Follow DriveSpark On Facebook, Click The Like Button
ಫ್ರಾಂಕ್‌ಫರ್ಟ್ ಆಟೋ ಶೋ: ಗಮನ ಸೆಳೆದ ಸುಬಾರು ಹೊಸ ಕಾರು ಇಂಪ್ರೆಜಾ..!!

ಈ ಹಿಂದಿನ ಎಕ್ಸ್‌ವಿ ಮಾದರಿಗಳಿಂತಲೂ ಹೆಚ್ಚಿನ ಬಲಿಷ್ಠತೆ ಹಾಗೂ ಆಲ್ ವೀಲ್ಹ್ ಡ್ರೈವ್ ಸೌಲಭ್ಯಗಳೊಂದಿಗೆ ಇಂಪ್ರೆಜಾ ಆವೃತ್ತಿಗಳನ್ನು ಅಭಿವೃದ್ಧಿಗೊಳಿಸಿರುವ ಸಬಾರು ಸಂಸ್ಥೆಯು ಈ ವರ್ಷದ ಕೊನೆಯಲ್ಲಿ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಫ್ರಾಂಕ್‌ಫರ್ಟ್ ಆಟೋ ಶೋ: ಗಮನ ಸೆಳೆದ ಸುಬಾರು ಹೊಸ ಕಾರು ಇಂಪ್ರೆಜಾ..!!

ಹೊಸ ಇಂಪ್ರೆಜಾವು ಹಳೆಯ ಮಾದರಿಗಿಂತ 10 ಮಿಮೀ ಕಡಿಮೆ, 35 ಮಿಮೀ ಅಗಲವಾಗಿದ್ದು, 25 ಮಿಮೀ ಉದ್ದದ ವೀಲ್‌ಬೆಸ್ ಅನ್ನು ಹೊಂದಿದೆ. ಜೊತೆಗೆ ಐದನೇ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹಿನ್ನೆಲೆ ಸುಧಾರಿತ ತಂತ್ರಜ್ಞಾನಗಳನ್ನು ಹೊಂದುವ ನೀರಿಕ್ಷೆ ಕೂಡಾ ಇದೆ.

Recommended Video
2017 Mercedes New GLA India Launch Kannada - DriveSpark ಕನ್ನಡ
ಫ್ರಾಂಕ್‌ಫರ್ಟ್ ಆಟೋ ಶೋ: ಗಮನ ಸೆಳೆದ ಸುಬಾರು ಹೊಸ ಕಾರು ಇಂಪ್ರೆಜಾ..!!

ಜೊತೆಗೆ ನಾಲ್ಕು ಸಿಲಿಂಡರ್ ಎಂಜಿನ್ ಪಡೆದುಕೊಂಡಿರುವ ಇಂಪ್ರೆಜಾ ಆವೃತ್ತಿಗಳು ಹೆಚ್ಚು ದೃಢ ಮತ್ತು ಅತ್ಯತ್ತಮ ಹೊರ ವಿನ್ಯಾಸಗಳನ್ನು ಹೊಂದಿದ್ದು, ಕ್ಲಾಸಿಕ್ ಮತ್ತು ಆಪ್ ರೋಡ್ ಕೌಶಲ್ಯಕ್ಕೂ ನೆರವಾಗುವಂತೆ ಹೊಸ ಉತ್ಪನ್ನಗಳನ್ನು ಸಿದ್ಧಗೊಳಿಸಲಾಗಿದೆ.

ಫ್ರಾಂಕ್‌ಫರ್ಟ್ ಆಟೋ ಶೋ: ಗಮನ ಸೆಳೆದ ಸುಬಾರು ಹೊಸ ಕಾರು ಇಂಪ್ರೆಜಾ..!!

ಹೀಗಾಗಿಯೇ ಪೆಟ್ರೋಲ್ ಆವೃತ್ತಿಯು 1.6-ಲೀಟರ್‌ನೊಂದಿಗೆ ಅಭಿವೃದ್ಧಿಗೊಂಡಿದ್ದರೆ ಡೀಸೆಲ್ ಆವೃತ್ತಿಯು 2.0-ಲೀಟರ್ ಎಂಜಿನ್‌ ಪಡೆದುಕೊಂಡಿದೆ. ಈ ಮೂಲಕ ಪೆಟ್ರೋಲ್ ಆವೃತ್ತಿಯು 112-ಬಿಎಚ್‌ಪಿ, 150-ಎನ್ಎಂ ಟಾರ್ಕ್ ಮತ್ತು 154-ಬಿಎಚ್‌ಪಿ, 196-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿವೆ.

ಫ್ರಾಂಕ್‌ಫರ್ಟ್ ಆಟೋ ಶೋ: ಗಮನ ಸೆಳೆದ ಸುಬಾರು ಹೊಸ ಕಾರು ಇಂಪ್ರೆಜಾ..!!

ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಸುರಕ್ಷತೆಗಾಗಿ ರಿರ್ ಕ್ಯಾಮೆರಾ ಮತ್ತು ಐ ಸೈಟ್ ತಂತ್ರಜ್ಞಾನವನ್ನು ಹೊಂದಿರುವುದು ಅತಿ ವೇಗದ ಚಾಲನೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿವೆ.

ಫ್ರಾಂಕ್‌ಫರ್ಟ್ ಆಟೋ ಶೋ: ಗಮನ ಸೆಳೆದ ಸುಬಾರು ಹೊಸ ಕಾರು ಇಂಪ್ರೆಜಾ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಹಲವು ವಿಶೇಷತೆಗಳಿಂದ ಜನಪ್ರಿಯತೆ ಹೊಂದಿರುವ ಸುಬಾರು ಕಾರು ಮಾದರಿಯು, ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ವ್ಯವಹಾರ ಹೊಂದಿಲ್ಲ. ಆದರೂ ಮೋಟಾರ್ ಸ್ಪೋರ್ಟ್ ವಿಭಾಗದಲ್ಲಿ ಸುಬಾರು ಉತ್ಪನ್ನಗಳ ಕೊಡುಗೆ ಅಪಾರ.

English summary
Read in Kannada about New Subaru Impreza Unveiled in 2017 Frankfurt Motor Show.
Story first published: Tuesday, September 12, 2017, 20:05 [IST]
Please Wait while comments are loading...

Latest Photos