ಭಾರತ್ ಬೆಂಝ್ ಸಂಸ್ಥೆಯ ವಾಹನಗಳ ಬೆಲೆ ಇಳಿಕೆ

ಹೊಸ ಜಿಎಸ್‌ಟಿ ತೆರಿಗೆ ಪದ್ಧತಿಯಿಂದಾಗಿ ಪ್ರಯಾಣಿಕರ ಮತ್ತು ವಾಣಿಜ್ಯ ವಾಹನಗಳ ಬೆಲೆಗಳ ಪರಿಷ್ಕರಣೆಗೊಂಡಿದ್ದು, ಭಾರತ್ ಬೆಂಝ್ ಸಂಸ್ಥೆ ಕೂಡ ತನ್ನ ವಾಹನಗಳ ಬೆಲೆ ಕಡಿತಗೊಳಿಸಿದೆ.

By Girish

ಹೊಸ ಜಿಎಸ್‌ಟಿ ತೆರಿಗೆ ಪದ್ಧತಿಯಿಂದಾಗಿ ಪ್ರಯಾಣಿಕರ ಮತ್ತು ವಾಣಿಜ್ಯ ವಾಹನಗಳ ಬೆಲೆಗಳ ಪರಿಷ್ಕರಣೆಗೊಂಡಿದ್ದು, ಭಾರತ್ ಬೆಂಝ್ ಸಂಸ್ಥೆ ಕೂಡ ತನ್ನ ವಾಹನಗಳ ಬೆಲೆ ಕಡಿತಗೊಳಿಸಿದೆ.

ಭಾರತ್ ಬೆಂಝ್ ಸಂಸ್ಥೆಯ ವಾಹನಗಳ ಬೆಲೆ ಇಳಿಕೆ

ಜುಲೈ 1, 2017 ರಿಂದ ಭಾರತ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಗಳನ್ನು (ಜಿಎಸ್‌ಟಿ) ಪರಿಚಯಿಸಿದ್ದು, ವಾಣಿಜ್ಯ ವಾಹನ ತಯಾರಕ ದೈತ್ಯ ಕಂಪೆನಿಯಾದ ಭಾರತ್ ಬೆಂಝ್ ಕೂಡ ತನ್ನ ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ.

ಭಾರತ್ ಬೆಂಝ್ ಸಂಸ್ಥೆಯ ವಾಹನಗಳ ಬೆಲೆ ಇಳಿಕೆ

ಕಂಪನಿಯು, ರಾಜ್ಯ ಮತ್ತು ಮಾದರಿಗಳಿಗೆ ಅನುಗುಣವಾಗಿ ಶೇಕಡಾ 0.4% ರಿಂದ 2.5% ರಷ್ಟು ದರ ಕಡಿತ ಮಾಡುವುದಾಗಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ್ ಬೆಂಝ್ ಸಂಸ್ಥೆಯ ವಾಹನಗಳ ಬೆಲೆ ಇಳಿಕೆ

ಡೈಮ್ಲರ್ ಎಜಿ ಒಡೆತನದ ಭಾರತ್ ಬೆಂಝ್ ಮೊದಲ ಬಾರಿಗೆ ಫೆಬ್ರವರಿ 2011ರಲ್ಲಿ ಅನಾವರಣಗೊಂಡಿತು ಮತ್ತು ಸೆಪ್ಟೆಂಬರ್ 2012ರಲ್ಲಿ ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಮಾಡಿತು.

ಭಾರತ್ ಬೆಂಝ್ ಸಂಸ್ಥೆಯ ವಾಹನಗಳ ಬೆಲೆ ಇಳಿಕೆ

"ಜಿಎಸ್‌ಟಿ ಟ್ಯಾಕ್ಸ್ ನಿಯಮದಿಂದಾಗಿ ಭಾರತದಲ್ಲಿ ನಮ್ಮ ವಾಹನಗಳ ಬೆಲೆಗಳನ್ನು ಇಳಿಕೆ ಮಾಡುವ ಮೂಲಕ, ನಮ್ಮ ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳನ್ನು ನೀಡಲು ಮುಂದಾಗಿದ್ದು, ಇದರಿಂದಾಗಿ ವಾಹನ ಮಾರಾಟದಲ್ಲಿ ಹೆಚ್ಚುವರಿ ವೇಗವನ್ನು ನಾವು ನಿರೀಕ್ಷಿಸುತ್ತೇವೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು CEO, ಎರಿಚ್ ನೆಸ್ಸೆಲ್‌ಹೌಫ್ ತಿಳಿಸಿದ್ದಾರೆ.

ಭಾರತ್ ಬೆಂಝ್

ಈ ವಿಶೇಷ ಬ್ರ್ಯಾಂಡ್ ಪೂರ್ಣ-ಪ್ರಮಾಣದ ಹೆವಿ-ಡ್ಯೂಟಿ ಉತ್ಪನ್ನಗಳನ್ನು ಹೊಂದಿದೆ ಮತ್ತು ಮಧ್ಯಮ ವರ್ಗದ ವರ್ಗಕ್ಕೆ ತಲುಪುವ ದೃಷ್ಟಿಯಿಂದ 2016ರಲ್ಲಿ ಮಧ್ಯಮ ಗಾತ್ರದ ವಾಹನಗಳನ್ನು ಬಿಡುಗಡೆಗೊಳಿಸಿತು.

ಭಾರತ್ ಬೆಂಝ್

ಭಾರತ್ ಬೆಂಝ್ ತನ್ನ ಹೊಸ ಶ್ರೇಣಿಯ ಉತ್ಪನ್ನಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾಗಿದೆ.

ಭಾರತ್ ಬೆಂಝ್

ಸದ್ಯ, ಕಂಪೆನಿಯು ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳನ್ನು ಒದಗಿಸುತ್ತಿದ್ದು, ಇದು ಭಾರತದಲ್ಲಿ ತನ್ನ ಉತ್ಪನ್ನಗಳ ಮಾರಾಟವನ್ನು ಇನ್ನಷ್ಟು ಹೆಚ್ಚಿಸಲಿರುವುದಂತೂ ಖಂಡಿತ.

Most Read Articles

Kannada
English summary
Read in kannada about Commercial vehicle maker, BharatBenz has passed on the GST benefits to the customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X