ಇನ್ಮುಂದೆ ಕಾರು ಕೀ ಬದಲು ಬರಲಿದೆ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ : ಬಿಎಂಡಬ್ಲ್ಯೂ

Written By:

ಜರ್ಮನಿಯ ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯೂ ಸಂಸ್ಥೆಯು ಕಾರಿನ ಕೀಲಿಕೈ ಅಗತ್ಯತೆಯ ಬಗ್ಗೆ ಅನ್ವೇಷಣೆ ಕೈಗೊಂಡಿದೆ ಎಂದು ಕಂಪೆನಿಯ ಮಂಡಳಿ ಸದಸ್ಯ ಇಯಾನ್ ರಾಬರ್ಟ್ಸನ್ ಅವರು ತಿಳಿಸಿದ್ದಾರೆ.

ಇನ್ಮುಂದೆ ಕಾರು ಕೀ ಬದಲು ಬರಲಿದೆ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ : ಬಿಎಂಡಬ್ಲ್ಯೂ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯನ ಕೈಯಲ್ಲಿ ಸ್ಮಾರ್ಟ್ ಫೋನ್ ಇರುವಿಕೆಯನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಈ ಸ್ಮಾರ್ಟ್ ಅಪ್ಲಿಕೇಶನ್ ಕೀ ಅಭಿವೃದ್ಧಿಪಡಿಸುವ ಯೋಜನೆಗೆ ಕೈಹಾಕಿರುವುದಾಗಿ ಕಂಪನಿಯು ಹೇಳಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಈ ಅಪ್ಲಿಕೇಶನ್ ಇರುವಿಕೆಯನ್ನು ಕಂಪನಿ ದೃಢಪಡಿಸಲಿದೆ.

ಇನ್ಮುಂದೆ ಕಾರು ಕೀ ಬದಲು ಬರಲಿದೆ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ : ಬಿಎಂಡಬ್ಲ್ಯೂ

"ಪ್ರಾಮಾಣಿಕವಾಗಿ ತಿಳಿಸಿ, ಎಷ್ಟು ಜನರಿಗೆ ನಿಜವಾಗಿಯೂ ಕೀಲಿಕೈ ಬೇಕು ?" ಎಂಬ ಪ್ರೆಶ್ನೆಯನ್ನು ರಾಬರ್ಟ್ಸನ್ 2017ರ ಫ್ರಾಂಕ್ ಫ಼ರ್ಟ್ ಕಾರು ಶೋನ ಸಂದರ್ಶನವೊಂದರಲ್ಲಿ ಕೇಳಿದ್ದನ್ನು ನಾವು ಸ್ಮರಿಸಬಹುದಾಗಿದೆ.

ಇನ್ಮುಂದೆ ಕಾರು ಕೀ ಬದಲು ಬರಲಿದೆ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ : ಬಿಎಂಡಬ್ಲ್ಯೂ

ಮಾತನ್ನು ಮುಂದುವರೆಸಿ, "ಚಾಲಕ ತನ್ನ ಪಾಕೆಟ್‌ನಿಂದ ಕೀಲಿಕೈ ಎಂದಿಗೂ ತೆಗೆಯುವುದಿಲ್ಲ, ಅಂದ ಮೇಲೆ ಅದನ್ನು ಹೊತ್ತುಕೊಂಡು ತಿರುಗಾಡುವ ತೊಂದರೆ ಏಕೆ?" ಎಂದು ಪ್ರೆಶ್ನಿಸಿದ್ದಾರೆ.

ಇನ್ಮುಂದೆ ಕಾರು ಕೀ ಬದಲು ಬರಲಿದೆ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ : ಬಿಎಂಡಬ್ಲ್ಯೂ

ಕಾರು ಪ್ರಾರಂಭಿಸಲು ಇಗ್ನಿಷನ್‌ನಲ್ಲಿ ಗ್ರಾಹಕರು ಇನ್ನು ಮುಂದೆ ಕೀಲಿಕೈ ಇಡುವ ಅಗತ್ಯತೆ ಇಲ್ಲ ಎಂಬ ಮಾತನ್ನು ಸ್ಪಷ್ಟವಾಗಿ ತಿಳಿಸುವ ಮೂಲಕ ಸಾಂಪ್ರದಾಯಿಕ ಸಂಸ್ಕೃತಿಯನ್ನು ಬದಲಾವಣೆ ಮಾಡುವ ಬಗ್ಗೆ ಸೂಚನೆ ನೀಡಿದ್ದಾರೆ.

ಇನ್ಮುಂದೆ ಕಾರು ಕೀ ಬದಲು ಬರಲಿದೆ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ : ಬಿಎಂಡಬ್ಲ್ಯೂ

ಟೆಸ್ಲಾದಂತಹ ಪ್ರಖ್ಯಾತ ಕಾರು ತಯಾರಕ ಸಂಸ್ಥೆಗಳು ಸಾಂಪ್ರದಾಯಿಕ ಕಾರು ಕೀಲಿಗಳಿಂದ ದೂರವಾಗುತ್ತಿದ್ದು, ಟೆಸ್ಲಾ ತನ್ನ ಹೊಸ 3ನೇ ಮಾದರಿಯಲ್ಲಿ ಈ ರೀತಿಯ ಹೊಸ ಪ್ರಯತ್ನ ಮಾಡಿ ಯಶಸ್ವಿಯಾಗಿರುವುದನ್ನು ನಾವು ನೋಡಬಹುದಾಗಿದೆ. ಮುಂಬರುವ ದಿನಗಳಲ್ಲಿ ನಾವು ಕೊಳ್ಳುವ ಕಾರು ಸ್ಮಾರ್ಟ್ ಫೋನ್ ಮೂಲಕ ನಿಯಂತ್ರಣ ಮಾಡುವ ಕಾಲ ದೂರವಿಲ್ಲ ಎನ್ನಬಹುದು.

English summary
BMW says that customers now carry a smartphone and the availability of a BMW App which allows customers to unlock their vehicle without the need of physical car key.
Story first published: Monday, September 18, 2017, 11:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark