ಮೈಸೂರಿನಲ್ಲಿ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ 'ಶೀರ್ ಡ್ರೈವಿಂಗ್ ಪ್ಲೆಷರ್' ವಿಸ್ತರಣೆ

Written By:

ಭಾರತದ 50 ಆಟೋ ಕ್ಷೇತ್ರದ ಉದಯೋನ್ಮುಖ ಮಾರುಕಟ್ಟೆಗಳನ್ನು ಗುರುತಿಸಿ ಬಿಎಂಡಬ್ಲ್ಯೂ ಕಾರು ತಯಾರಕ ಸಂಸ್ಥೆ ಮೊಬೈಲ್ ಸ್ಟುಡಿಯೋ ತೆರೆಯಲಿದೆ.

To Follow DriveSpark On Facebook, Click The Like Button
ಮೈಸೂರಿನಲ್ಲಿ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ 'ಶೀರ್ ಡ್ರೈವಿಂಗ್ ಪ್ಲೆಷರ್' ವಿಸ್ತರಣೆ

ಬಿಎಂಡಬ್ಲ್ಯೂ ಸಂಸ್ಥೆ ತನ್ನ ಅತ್ಯುತ್ತಮವಾದ ವಾಹನಗಳ ಪ್ರದರ್ಶನ ಮತ್ತು ಆಸಕ್ತಿ ಉಳ್ಳವರಿಗೆ ಟೆಸ್ಟ್ ಡ್ರೈವ್ ನೀಡುವ ಹೊಚ್ಚ ಹೊಸ ಮೊಬೈಲ್ ಸ್ಟುಡಿಯೋ ಇದೇ ತಿಂಗಳ ಅಂದರೆ ಫೆಬ್ರವರಿಯ ದಿನಾಂಕ 25 - 26 ರಂದು ಹೋಟೆಲ್ ಲಿ ರುಚಿ ಎದುರಿನ ಮೈದಾನ,ಹುಣಸೂರು ರಸ್ತೆ, ಹಿನ್‍ಕಲ್, ಮೈಸೂರಿನಲ್ಲಿ ಆಯೋಜಿಸಿದೆ.

ಮೈಸೂರಿನಲ್ಲಿ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ 'ಶೀರ್ ಡ್ರೈವಿಂಗ್ ಪ್ಲೆಷರ್' ವಿಸ್ತರಣೆ

ಮೈಸೂರಿನಲ್ಲಿ ನೆಡೆಯುತ್ತಿರುವ ಈ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋದ ಆತಿಥ್ಯ ಜವಾಬ್ದಾರಿಯನ್ನು ನವನೀತ್ ಮೋಟರ್ಸ್ ವಹಿಸಿಕೊಂಡಿದೆ.

ಮೈಸೂರಿನಲ್ಲಿ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ 'ಶೀರ್ ಡ್ರೈವಿಂಗ್ ಪ್ಲೆಷರ್' ವಿಸ್ತರಣೆ

ಹೊಸದಾಗಿ ಶುರುವಾಗುತ್ತಿರುವ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ ಅತ್ಯುತ್ತಮ ರೀತಿಯ ಜಾಹಿರಾತು ತಂತ್ರವಾಗಿದ್ದು, ಜನರನ್ನು ಹೆಚ್ಚು ತಲುಪಲು ಸಹಾಯ ಮಾಡುತ್ತದೆ. ಈ ಮೊಬೈಲ್ ಸ್ಟುಡಿಯೋದಲ್ಲಿ ಎರಡು ಕಾರುಗಳ ಪ್ರದರ್ಶನಕ್ಕೆ ಬೇಕಾಗುವಷ್ಟು ಸ್ಥಳಾವಕಾಶವಿದ್ದು, ಮಾಹಿತಿ ಪಡೆಯುವ ಕೇಂದ್ರ ಸಹ ಹೊಂದಿರಲಿದೆ.

ಮೈಸೂರಿನಲ್ಲಿ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ 'ಶೀರ್ ಡ್ರೈವಿಂಗ್ ಪ್ಲೆಷರ್' ವಿಸ್ತರಣೆ

ಈ ಮೊಬೈಲ್ ಸ್ಟುಡಿಯೋದಲ್ಲಿ ಬಿಎಂಡಬ್ಲ್ಯೂ ತನ್ನ ಕಂಪನಿಯ ಬಗ್ಗೆ ವಸ್ತುಪ್ರದರ್ಶನ ಕೂಡ ಏರ್ಪಡಿಸಲಿದೆ. ಭೇಟಿ ನೀಡುವ ಆಸಕ್ತರಿಗೆ ಬಿಎಂಡಬ್ಲ್ಯೂ ಸಂಸ್ಥೆ ತನ್ನ ಹೊಚ್ಚ ಹೊಸ ಸೆಡಾನ್ ಮತ್ತು ಕ್ರೀಡಾ ಬಳಕೆಯ ವಾಹನಗಳನ್ನು ಚಲಾಯಿಸುವ ಅವಕಾಶವನ್ನೂ ಸಹ ನೀಡಲಿದೆ.

ಮೈಸೂರಿನಲ್ಲಿ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ 'ಶೀರ್ ಡ್ರೈವಿಂಗ್ ಪ್ಲೆಷರ್' ವಿಸ್ತರಣೆ

ಕಾರು ಚಲಾಯಿಸಿದ ನಂತರ ತಮಗಾದ ಅನುಭವವನ್ನು ವ್ಯಕ್ತಪಡಿಸುವ ಮತ್ತು ಯಾವುದೇ ರೀತಿಯ ಪ್ರೆಶ್ನೆಗಳಿದ್ದರೂ ಕೇಳುವ ಅವಕಾಶವನ್ನೂ ಗ್ರಾಹಕರಿಗೆ ನೀಡಲಾಗಿದೆ. ಸಂಸ್ಥೆ ನಿಯೋಜಿಸಿರುವ ಆಟೋ ಪರಿಣತರ ಹತ್ತಿರ ನಿಮ್ಮಗಿರುವ ಸಂದೇಹಗಳ ಬಗ್ಗೆ, ವಾಹನಗಳ ವೈಶಿಷ್ಟ್ಯತೆಯ ಬಗ್ಗೆ, ಹೊಚ್ಚ ಹೊಸ ತಂತ್ರಜ್ಞಾನದ ಬಗ್ಗೆ ಬಗ್ಗೆ ತಿಳಿದುಕೊಳ್ಳಬಹುದು.

ಮೈಸೂರಿನಲ್ಲಿ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ 'ಶೀರ್ ಡ್ರೈವಿಂಗ್ ಪ್ಲೆಷರ್' ವಿಸ್ತರಣೆ

"ಮೊಬೈಲ್ ಸ್ಟುಡಿಯೋ ಬರೀ ಮೊಬೈಲ್ ಶೋರೂಂ ಅಲ್ಲ, ಸರಿಸಾಟಿ ಇರದ ಐಷಾರಾಮಿ ಅನುಭವ ಗ್ರಾಹಕರಿಗೆ ಆಗಲಿದೆ. ಇದು ಗ್ರಾಹಕರಿಗೆ `ಶೀರ್ ಡ್ರೈವಿಂಗ್ ಪ್ಲೆಷರ್'ನ ಅತ್ಯುತ್ತಮ ಹೊಸ ಅನುಭವ ನೀಡುತ್ತದೆ ಮತ್ತು ವಿಸ್ತಾರವಾದ ಅದ್ಭುತ ಉತ್ಪನ್ನಗಳ ಅನುಭವವನ್ನು ನೀಡುವುದು ಖಚಿತ" ಎಂದು ಬಿಎಂಡಬ್ಲ್ಯೂ ಗ್ರೂಪ್ ಇಂಡಿಯಾದ ಪ್ರೆಸಿಡೆಂಟ್(ಆಕ್ಟ್), ಫ್ರಾಂಕ್ ಶ್ಲೋಡರ್ ತಿಳಿಸಿದರು.

ಮೈಸೂರಿನಲ್ಲಿ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ 'ಶೀರ್ ಡ್ರೈವಿಂಗ್ ಪ್ಲೆಷರ್' ವಿಸ್ತರಣೆ

ನವ್‍ನಿತ್ ಮೋಟಾರ್ಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ನವ್‍ನಿತ್ ಕಚಾಲಿಯಾ ಮಾತನಾಡಿ, "ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಐಷಾರಾಮಿ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ ಮತ್ತು ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ ನಮಗೆ ಈ ಸಂಭವನೀಯ ಮಾರುಕಟ್ಟೆಗೆ ಸೇವೆ ಒದಗಿಸಲು ಪರಿಪೂರ್ಣ ವೇದಿಕೆಯಾಗಿ ಮೈಸೂರಿನಲ್ಲಿ ಈ ಡೈನಮಿಕ್ ಬಿಎಂಡಬ್ಲ್ಯೂ ಸಂಸ್ಥೆಯ ಉತ್ಪನ್ನ ಶ್ರೇಣಿ ಮತ್ತು ಸೇವೆಗಳನ್ನು ಪ್ರದರ್ಶಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದರು.

ಮೈಸೂರಿನಲ್ಲಿ ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋ 'ಶೀರ್ ಡ್ರೈವಿಂಗ್ ಪ್ಲೆಷರ್' ವಿಸ್ತರಣೆ

ಬಿಎಂಡಬ್ಲ್ಯೂ ಮೊಬೈಲ್ ಸ್ಟುಡಿಯೋದಲ್ಲಿ ಬಿಎಂಡಬ್ಲ್ಯೂ ಎಕ್ಸ್5, ಬಿಎಂಡಬ್ಲ್ಯೂ 7 ಸರಣಿಯ ಕಾರು, ಬಿಎಂಡಬ್ಲ್ಯೂ 3ನೇ ಸರಣಿಯ ಗ್ರಾನ್ ಟೂರಿಸ್ಮೊ ಕಾರು, 5ನೇ ಸರಣಿಯ ಕಾರು, ಮತ್ತು ಬಿಎಂಡಬ್ಲ್ಯೂ ಎಕ್ಸ್1 ಕಾರು ಮೊಬೈಲ್ ಸ್ಟುಡಿಯೋ ಭೇಟಿ ನೀಡಿ ಟೆಸ್ಟ್ ಡ್ರೈವ್ ಮಾಡುವವರಿಗೆ ಲಭ್ಯವಿದೆ. ಬಿಎಂಡಬ್ಲ್ಯೂ ಇಂಡಿಯಾ ಬಿಎಂಡಬ್ಲ್ಯೂ ಗ್ರೂಪ್‍ನ ಅಧೀನ ಸಂಸ್ಥೆಯಾಗಿದೆ ಮತ್ತು ಗುರ್‍ಗಾಂವ್(ನ್ಯಾಷನಲ್ ಕ್ಯಾಪಿಟಲ್ ರೀಜನ್) ಹೆಡ್ ಕ್ವಾರ್ಟರ್ ಹೊಂದಿದೆ. ಬಿಎಂಡಬ್ಲ್ಯೂ ಇಂಡಿಯಾ ಚೆನ್ನೈನಲ್ಲಿ ಉತ್ಪಾದನಾ ಘಟಕ ಮತ್ತು ಮುಂಬೈನಲ್ಲಿ ಬಿಡಿಭಾಗಗಳ ದಾಸ್ತಾನು ಮಳಿಗೆ, ಗುರ್‍ಗಾಂವ್‍ನಲ್ಲಿ ತರಬೇತಿ ಕೇಂದ್ರ ಹೊಂದಿದೆ.

English summary
BMW India has introduced the BMW Mobile Studio - a one of its kind mobile showroom designed exclusively to showcase the most aspirational BMW products and services in over 50 emerging markets across India.
Story first published: Friday, February 24, 2017, 19:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark